IND vs ENG: ʻನನಗೋಸ್ಕರ ಅಲ್ಲ, ದೇಶಕ್ಕೋಸ್ಕರ ಬೌಲ್ ಮಾಡುತ್ತೇನೆʼ: ಮೊಹಮ್ಮದ್ ಸಿರಾಜ್!
Mohammed Siraj on workload management: ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಪಡೆಯುವ ಮೂಲಕ ಮೊಹಮ್ಮದ್ ಸಿರಾಜ್ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಪಂದ್ಯದ ಬಳಿಕ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಮಾತನಾಡಿದ್ದಾರೆ. ನನಗೋಸ್ಕರ ಬೌಲ್ ಮಾಡುವುದಿಲ್ಲ, ದೇಶಕ್ಕೋಸ್ಕರ ಬೌಲ್ ಮಾಡುತ್ತೇನೆಂದು ಹೇಳಿದ್ದಾರೆ.

ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಮೊಹಮ್ಮದ್ ಸಿರಾಜ್ ಹೇಳಿಕೆ.

ಲಂಡನ್: ಇಂಗ್ಲೆಂಡ್ ವಿರುದ್ಧ ಐದನೇ ಹಾಗೂ ಟೆಸ್ಟ್ ಸರಣಿಯ(IND vs ENG) ಕೊನೆಯ ಪಂದ್ಯದಲ್ಲಿ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್ ಸಿರಾಜ್ (Mohammed Siraj) ಮಾರಕ ದಾಳಿ ನಡೆಸಿ 9 ವಿಕೆಟ್‌ಗಳನ್ನು ಕಬಳಿಸಿದರು. ಅದರಲ್ಲಿಯೂ ವಿಶೇಷವಾಗಿ ಐದನೇ ದಿನ ಪ್ರಮುಖ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡವನ್ನು(India) ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಡಿದ ಐದೂ ಪಂದ್ಯಗಳಿಂದ ಮೊಹಮ್ಮದ್ ಸಿರಾಜ್ ಒಟ್ಟು 26 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗಿಂತ ದೇಶಕ್ಕೋಸ್ಕರ ಬೌಲ್ ಮಾಡುವುದು ನನ್ನ ಗುರಿ ಎಂದು ಹೇಳಿದ್ದಾರೆ.
ಈ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ ಒಂದೇ ಒಂದು ಪಂದ್ಯದಲ್ಲಿಯೂ ವಿಶ್ರಾಂತಿ ಪಡೆಯಲಿಲ್ಲ. ಆದರೆ, ಜಸ್‌ಪ್ರೀತ್ ಬುಮ್ರಾ ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್‌ನಿಂದ ಎರಡು ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಸಿರಾಜ್ ಅವರು ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಇವರು ಐದು ಪಂದ್ಯಗಳಿಂದ 185.3 ಓವರ್‌ಗಳನ್ನು ಬೌಲ್ ಮಾಡಿ 23 ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ.
IND vs ENG: ʻನಾವೆಂದಿಗೂ ಶರಣಾಗುವುದಿಲ್ಲʼ-ಎದುರಾಳಿ ತಂಡಗಳಿಗೆ ಗೌತಮ್ ಗಂಭೀರ್ ವಾರ್ನಿಂಗ್!
ಐದನೇ ಟೆಸ್ಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಹಮ್ಮದ್ ಸಿರಾಜ್, "ದೇಹ ಚೆನ್ನಾಗಿದೆ. ಒಂದು ವೇಳೆ ಆರನೇ ಓವರ್ ಅಥವಾ ನನಗೆ 9ನೇ ಓವರ್ ಆದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ನನಗಾಗಿ ಬೌಲ್ ಮಾಡುವುದಿಲ್ಲ, ದೇಶಕ್ಕೋಸ್ಕರ ಬೌಲ್ ಮಾಡುತ್ತೇನೆ," ಎಂದು ಹೇಳಿದ್ದಾರೆ.
"ನಿಮ್ಮ ದಿವಂಗತ ತಂದೆಯ ಬಗ್ಗೆ ಯೋಚಿಸಿ ಹಾಗೂ ನಿಮಗಾಗಿ ಅವರು ಎಷ್ಟೊಂದು ಕಷ್ಟವನ್ನು ಅನುಭವಿಸಿದ್ದಾರೆ. ಅವರಿಗಾಗಿ ನೀವು ಮಾಡಲೇಬೇಕು ಎಂದು ಜಡ್ಡು ಭಾಯ್ ನನಗೆ ಹೇಳಿದ್ದರು," ಎಂದು ಸಿರಾಜ್ ತಿಳಿಸಿದ್ದಾರೆ.
IND vs ENG: 'ಸರಣಿ 2-2, ಪ್ರದರ್ಶನ 10/10'- ಭಾರತ ತಂಡಕ್ಕೆ ಸಚಿನ್ ವಿಶೇಷ ಸಂದೇಶ!
"ಭಾರತ ತಂಡಕ್ಕೆ ಆಡಲು ನಾನು ಸಾಕಷ್ಟು ಕಠಿಣ ಪರಿಶ್ರಮವನ್ನು ಪಟ್ಟಿದ್ದೇನೆ. ನೀವು 1.4 ಜನರ ಪೈಕಿ BAರತ ತಂಡದ ಪ್ಲೇಯಿಂಗ್ Xiನಲ್ಲಿ ಇದ್ದೀರಿ. ಹಾಗಾಗಿ ನೀವು ಆಟಕ್ಕೆ ಪ್ರಾಮಾಣಿಕವಾಗಿ ಇರಬೇಕಾಗುತ್ತದೆ ಹಾಗೂ ಅದಕ್ಕಾಗಿ ನೀವು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ನಂಬಿಕೆ ಎನ್ನುವುದು ತುಂಬಾ ಮುಖ್ಯ," ಎಂದು ಅವರು ಹೇಳಿದ್ದಾರೆ.
ಸಿರಾಜ್‌ಗೆ ಶುಭಮನ್ ಗಿಲ್ ಮೆಚ್ಚುಗೆ
ಭಾರತ ತಂಡದ ನಾಯಕ ಶುಭಮನ್ ಗಿಲ್ ಮಾತನಾಡಿದ," ಪ್ರತಿಯೊಬ್ಬ ನಾಯಕರ ಕನಸು ಇದಾಗಿದೆ. 80 ಓವರ್‌ಗಳ ಚೆಂಡನ್ನು ಹೆಚ್ಚಿನದಾಗಿ ಪರಿಣಾಮಕಾರಿಯಾಗಿ ಬೌಲ್ ಮಾಡಬಲ್ಲರು ಎಂದರೆ ನಂಬಲು ಆಗುವುದಿಲ್ಲ. ಸಿರಾಜ್ ಡ್ರೆಸ್ಸಿಂಗ್ ಕೋಣೆಯಲ್ಲಿ ಆ ಗೌರವವನ್ನು ಗಳಿಸಿದ್ದಾರೆ ಮತ್ತು ಕಳೆದ ನಾಲ್ಕೈದು ವರ್ಷಗಳಲ್ಲಿ ಅವರ ಕೆಲಸದ ನೀತಿಯ ಮೇಲೆ ಅದು ನಿರ್ಮಿಸಲ್ಪಟ್ಟಿದೆ," ಎಂದು ಶ್ಲಾಘಿಸಿದ್ದಾರೆ.