ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: 4ನೇ ಪಂದ್ಯದ ಪಿಚ್‌ ರಿಪೋರ್ಟ್‌; ಹವಾಮಾನ ವರದಿ ಹೀಗಿದೆ

ಮ್ಯಾಂಚೆಸ್ಟರ್‌ನಲ್ಲಿ ಸದ್ಯ ಮಳೆಯಾಗುತ್ತಿಲ್ಲವಾದರೂ ಪಂದ್ಯದ ನಾಲ್ಕನೇ ಸಣ್ಣ ಪ್ರಮಾಣದ ಮಳೆ ಭೀತಿ ಎದುರಾಗಿದೆ. ಆದರೆ ಇದು ಪಂದ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಂದೊಮ್ಮೆ ಮಳೆ ಬಂದರೆ ಪಿಚ್‌ ಸಂಪೂರ್ಣವಾಗಿ ಸ್ಪಿನ್‌ ಟ್ರ್ಯಾಕ್‌ ಆಗಿ ಬದಲಾಗಲಿದೆ ಎಂದು ಪಿಚ್‌ ಕ್ಯೂರೇಟರ್‌ ಮಾಹಿತಿ ನೀಡಿದ್ದಾರೆ.

ಮ್ಯಾಂಚೆಸ್ಟರ್‌: ಲಾರ್ಡ್ಸ್‌ ಟೆಸ್ಟ್‌ ಸೋಲಿನಿಂದ ಇಂಗ್ಲೆಂಡ್‌(IND vs ENG) ವಿರುದ್ಧದ ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಸರಣಿಯಲ್ಲಿ 1-2 ಹಿನ್ನಡೆ ಅನುಭವಿಸಿರುವ ಭಾರತ ತಂಡ, ಬುಧವಾರ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಮೈದಾನಲ್ಲಿ ನಾಲ್ಕನೇ ಪಂದ್ಯವನ್ನಾಡಲು ಸಜ್ಜಾಗಿದೆ. ಆದರೆ ಪಂದ್ಯದಲ್ಲಿ ಅತ್ಯಂತ ಕಠಿಣ ಸತ್ವಪರೀಕ್ಷೆ ಎದುರಾಗಿದೆ. ಸರಣಿ ಗೆಲುವಿನ ಆಸೆ ಜೀವಂತ ಉಳಿಸಿಕೊಳ್ಳಲು ಇದು ಗಿಲ್‌ ಪಡೆಗೆ ಮಾಡು ಇಲ್ಲವೆ ಮಡಿ ಪಂದ್ಯವೆನಿಸಿದೆ. ಈ ಪಂದ್ಯದ ಪಿಚ್‌ ರಿಪೋರ್ಟ್‌(Old Trafford Pitch Report), ಹವಾಮಾನ ವರದಿ(Manchester Weather Report) ಮತ್ತು ಆಡುವ ಬಳಗದ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೌಲಿಂಗ್‌ ಸ್ನೇಹಿ

ಅತ್ಯಂತ ಹಳೆಯ ಮೈದಾನಗಳಲ್ಲಿ ಒಂದಾಗಿರುವ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ ಮೈದಾನದ ಪಿಚ್‌ ಬೌಲಿಂಗ್‌ ಸ್ನೇಹಿಯಾಗಿದೆ. ಬ್ಯಾಟರ್‌ಗಳಿಗೆ ಅತ್ಯಂತ ಸವಾಲೊಡ್ಡುವ ಪಿಚ್‌ ಎನ್ನಲಾಗಿದೆ. ಪಂದ್ಯದ ವೇಳೆ ಮೋಡ ಕವಿದ ವಾತಾವರಣ ಕಂಡುಬಂದರೆ ಸ್ವಿಂಗ್‌ ಬೌಲರ್‌ಗಳಿಗೆ ಪಿಚ್‌ ಹೆಚ್ಚಿನ ನೆರವು ನೀಡುತ್ತದೆ. ಆರಂಭದಲ್ಲಿ ವೇಗಿಗಳಿಗೆ ಸಹಕಾರಿಯಾದ ಈ ಪಿಚ್‌ ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಭಾರತ ತಂಡ 2014ರಲ್ಲಿ ಇಲ್ಲಿ ಆಡಿದ ಟೆಸ್ಟ್‌ನ ಎರಡೂ ಇನಿಂಗ್ಸ್‌ನಲ್ಲಿ 170ರ ಗಡಿ ದಾಟಿರಲಿಲ್ಲ. ಇದೀಗ 11 ವರ್ಷಗಳ ಬಳಿಕ ಭಾರತ ಇಲ್ಲಿ ಪಂದ್ಯವನ್ನಾಡುತ್ತಿದೆ.

ನಾಲ್ಕನೇ ದಿನ ಮಳೆ ಭೀತಿ

ಮ್ಯಾಂಚೆಸ್ಟರ್‌ನಲ್ಲಿ ಸದ್ಯ ಮಳೆಯಾಗುತ್ತಿಲ್ಲವಾದರೂ ಪಂದ್ಯದ ನಾಲ್ಕನೇ ಸಣ್ಣ ಪ್ರಮಾಣದ ಮಳೆ ಭೀತಿ ಎದುರಾಗಿದೆ. ಆದರೆ ಇದು ಪಂದ್ಯಕ್ಕೆ ದೊಡ್ಡ ಹಾನಿ ಉಂಟು ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಒಂದೊಮ್ಮೆ ಮಳೆ ಬಂದರೆ ಪಿಚ್‌ ಸಂಪೂರ್ಣವಾಗಿ ಸ್ಪಿನ್‌ ಟ್ರ್ಯಾಕ್‌ ಆಗಿ ಬದಲಾಗಲಿದೆ ಎಂದು ಪಿಚ್‌ ಕ್ಯೂರೇಟರ್‌ ಮಾಹಿತಿ ನೀಡಿದ್ದಾರೆ.

ಮುಖಾಮುಖಿ

ಭಾರತ ತಂಡ ಮ್ಯಾಂಚೆಸ್ಟರ್‌ನಲ್ಲಿ ಇದುವರೆಗೂ 9 ಟೆಸ್ಟ್‌ ಪಂದ್ಯಗಳನ್ನು ಆಡಿದು, ಒಂದೂ ಪಂದ್ಯ ಗೆದ್ದಿಲ್ಲ. ಆದರೆ 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. 4 ಪಂದ್ಯದಲ್ಲಿ ಸೋಲು ಕಂಡಿದೆ.

ಭಾರತ ಸಂಭಾವ್ಯ ತಂಡ

ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್‌ ಪಂತ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿ.ಕೀ.), ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್ ಸಿರಾಜ್, ಅನ್ಶುಲ್‌ ಕಂಬೋಜ್‌.

ಇದನ್ನೂ ಓದಿ ENG vs IND: 4ನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ ಪ್ರಕಟ; 8 ವರ್ಷದ ಬಳಿಕ ಮರಳಿದ ಸ್ಪಿನ್ನರ್‌

ಇಂಗ್ಲೆಂಡ್‌ ಆಡುವ ಬಳಗ

ಜಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿ.ಕೀ.), ಲಿಯಾಮ್ ಡಾಸನ್, ಕ್ರಿಸ್ ವೋಕ್ಸ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್.