ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UAE vs IND: ಗೆಲುವಿನೊಂದಿಗೆ ದಾಖಲೆ ಬರೆದ ಟೀಮ್‌ ಇಂಡಿಯಾ

ಮೊದಲು ಬ್ಯಾಟಿಂಗ್‌ ನಡೆಸಿದ ಯುಎಇ ಪರ ಆರಂಭಿಕರಾದ ಅಲಿಶಾನ್‌ ಶರಾಫು 22, ನಾಯಕ ಮುಹಮ್ಮದ್‌ ವಸೀಂ 19 ರನ್‌ ಗಳಿಸಿದ್ದನ್ನು ಬಿಟ್ಟರೆ ಉಳಿದವರ್‍ಯಾರೂ 3 ರನ್‌ಗಿಂತ ಹೆಚ್ಚು ಗಳಿಸಲಿಲ್ಲ. 13.1 ಓವರಲ್ಲಿ ಯುಎಇ 57ಕ್ಕೆ ಆಲೌಟ್‌ ಆಯಿತು. 31 ಎಸೆತದಲ್ಲಿ 10 ರನ್‌ಗೆ ಕೊನೆ 8 ವಿಕೆಟ್‌ ಕಳೆದುಕೊಂಡಿತು.

ದುಬೈ: ಬುಧವಾರ ರಾತ್ರಿ ನಡೆದ ಏಷ್ಯಾಕಪ್‌ ಟಿ20(Asia Cup 202) ಟೂರ್ನಿಯನ್ನು ಹಾಲಿ ವಿಶ್ವ ಚಾಂಪಿಯನ್‌ ಭಾರತ ತಂಡ ಯುಎಇ(UAE vs IND) ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೀಮ್‌ ಇಂಡಿಯಾ(Team India) ದಾಖಲೆಯೊಂನ್ನು ತನ್ನ ಹೆಸರಿಗೆ ಬರೆದಿದೆ. ಅತೀ ಹೆಚ್ಚು ಎಸೆತ ಉಳಿಸಿ ಗೆದ್ದ ವಿಶ್ವದ 2ನೇ ತಂಡ ಎನಿಸಿಕೊಂಡಿತು. 93 ಎಸೆತ ಬಾಕಿರುವಂತೆ ಪಂದ್ಯ ಗೆದ್ದುಕೊಂಡಿತು.

ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಎಸೆತ ಉಳಿಸಿ ಪಂದ್ಯ ಗೆದ್ದ ದಾಖಲೆ ಇಂಗ್ಲೆಂಡ್‌ ಹೆಸರಿನಲ್ಲಿದೆ. 2024ರಲ್ಲಿ ಒಮಾನ್‌ ವಿರುದ್ಧ 101 ಎಸೆತ ಬಾಕಿ ಉಳಿಸಿ ಪಂದ್ಯವನ್ನು ಜಯಿಸಿತ್ತು.

ಗರಿಷ್ಠ ಎಸೆತ ಬಾಕಿ ಉಳಿಸಿ ಪಂದ್ಯ ಗೆದ್ದ ತಂಡ

101 ಎಸೆತ, ಇಂಗ್ಲೆಂಡ್ vs ಓವನ್ 2024

93 ಎಸೆತ, ಭಾರತ vs ಯುಎಐ 2025

90 ಎಸೆತ, ಶ್ರೀಲಂಕಾ vs ನೆದರ್ಲೆಂಡ್ 2014

90 ಎಸೆತ ಜಿಂಬಾಬ್ವೆ vs ನೈರೋಬಿ 2024

ಮೊದಲು ಬ್ಯಾಟಿಂಗ್‌ ನಡೆಸಿದ ಯುಎಇ ಪರ ಆರಂಭಿಕರಾದ ಅಲಿಶಾನ್‌ ಶರಾಫು 22, ನಾಯಕ ಮುಹಮ್ಮದ್‌ ವಸೀಂ 19 ರನ್‌ ಗಳಿಸಿದ್ದನ್ನು ಬಿಟ್ಟರೆ ಉಳಿದವರ್‍ಯಾರೂ 3 ರನ್‌ಗಿಂತ ಹೆಚ್ಚು ಗಳಿಸಲಿಲ್ಲ. 13.1 ಓವರಲ್ಲಿ ಯುಎಇ 57ಕ್ಕೆ ಆಲೌಟ್‌ ಆಯಿತು. 31 ಎಸೆತದಲ್ಲಿ 10 ರನ್‌ಗೆ ಕೊನೆ 8 ವಿಕೆಟ್‌ ಕಳೆದುಕೊಂಡಿತು.

ಅತ್ಯಲ್ಪ ಮೊತ್ತ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್‌ ಶರ್ಮಾ 16 ಎಸೆತದಲ್ಲಿ 30 ರನ್‌ ಒದಗಿಸಿದರು. ಶುಭ್‌ಮನ್‌ ಗಿಲ್‌ 9 ಎಸೆತದಲ್ಲಿ 20, ಸೂರ್ಯಕುಮಾರ್‌ 2 ಎಸೆತದಲ್ಲಿ 7 ರನ್‌ ಗಳಿಸಿ ತಂಡಕ್ಕೆ ಕೇವಲ 4.3 ಓವರಲ್ಲಿ ಗೆಲುವು ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌: ಯುಎಇ 13.1 ಓವರಲ್ಲಿ 57/10 (ಶರಾಫು 22, ವಸೀಂ 19, ಕುಲ್ದೀಪ್‌ 4-7, ದುಬೆ 3-4), ಭಾರತ 4.3 ಓವರಲ್ಲಿ 60/1 (ಅಭಿಷೇಕ್‌ 30, ಗಿಲ್‌ 22*, ಸಿದ್ದಿಕಿ 1-16) ಪಂದ್ಯಶ್ರೇಷ್ಠ: ಕುಲ್ದೀಪ್‌ ಯಾದವ್‌.

ಇದನ್ನೂ ಓದಿ Asia Cup 2025: ಆರ್‌. ಅಶ್ವಿನ್‌ ದಾಖಲೆ ಮುರಿದ ಕುಲ್‌ದೀಪ್‌ ಯಾದವ್‌