ನವದೆಹಲಿ: ಮುಂದಿನ ತಿಂಗಳು ದೇಶವು ಮೊದಲ ಬಾರಿಗೆ ಆಯೋಜಿಸುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಾಗಿ(World Para Athletics Championships) ಸ್ಟಾರ್ ಜಾವೆಲಿನ್ ಎಸೆತಗಾರ ಸುಮಿತ್ ಆಂಟಿಲ್(Sumit Antil) ನೇತೃತ್ವದ ಭಾರತದ 73 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಮೂರು ಬಾರಿ ಪ್ಯಾರಾಲಿಂಪಿಕ್ಸ್ ಪದಕ ವಿಜೇತ ಹೈಜಂಪರ್ ಮರಿಯಪ್ಪನ್ ತಂಗವೇಲು(Mariyappan Thangavelu) ಅವರನ್ನು ಕೈಬಿಡಲಾಗಿದೆ.
ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚು ಮತ್ತು ಬೆಳ್ಳಿ ಗೆದ್ದ ಮತ್ತೊಬ್ಬ ಹೈಜಂಪರ್ ಶರದ್ ಕುಮಾರ್ ಕೂಡ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. 30 ವರ್ಷದ ಮರಿಯಪ್ಪನ್ 2016 ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ, ಟೋಕಿಯೊ ಆವೃತ್ತಿಯಲ್ಲಿ ಬೆಳ್ಳಿ ಮತ್ತು ಪ್ಯಾರಿಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದರು.
ಮರಿಯಪ್ಪನ್ ಮತ್ತು ಶರದ್ ಆಯ್ಕೆ ಟ್ರಯಲ್ಸ್‌ನಲ್ಲಿ ಬೇರೆ ಬೇರೆ ಕಾರಣಗಳಿಂದ ಭಾಗವಹಿಸಲಿಲ್ಲ. ಆದ್ದರಿಂದ ಅವರನ್ನು ಆಯ್ಕೆ ಮಾಡಲಾಗಿಲ್ಲ ಎಂದು ಪ್ಯಾರಾ ಅಥ್ಲೆಟಿಕ್ಸ್ ತರಬೇತುದಾರ ಪಿಟಿಐಗೆ ತಿಳಿಸಿದ್ದಾರೆ.
107 ದೇಶಗಳ ಪ್ಯಾರಾ ಅಥ್ಲೀಟ್‌ಗಳು ಭಾಗವಹಿಸುತ್ತಿದ್ದು, ಈ ಆವೃತ್ತಿಯು ಚಾಂಪಿಯನ್‌ಶಿಪ್‌ಗಳ ಇತಿಹಾಸದಲ್ಲಿಯೇ ಅತಿ ದೊಡ್ಡದಾಗಿದೆ ಎಂದು ಭಾರತೀಯ ಪ್ಯಾರಾಲಿಂಪಿಕ್ಸ್ ಸಮಿತಿ (ಪಿಸಿಐ) ಅಧ್ಯಕ್ಷ ದೇವೇಂದ್ರ ಜಜಾರಿಯಾ ಹೇಳಿದ್ದಾರೆ.
"ಜಪಾನ್‌ನಲ್ಲಿ ನಡೆದ 2024 ರ ಆವೃತ್ತಿಯಲ್ಲಿ ಭಾರತ 17 ಪದಕಗಳನ್ನು ಗೆದ್ದಿತ್ತು. ಈ ಬಾರಿ ನಾವು ಹೆಚ್ಚಿನ ಪದಕಗಳನ್ನು ಗೆಲ್ಲುತ್ತೇವೆ" ಎಂದು ಜಜಾರಿಯಾ ಹೇಳಿದರು.
ಭಾರತ ಪುರುಷರ ತಂಡ
ಅಜೀತ್ ಸಿಂಗ್ (ಜಾವೆಲಿನ್ F45/46)
ಬಂಟಿ (ಹೈಜಂಪ್ T44/64)
ಬೀರ್ಭದ್ರ ಸಿಂಗ್ (ಡಿಸ್ಕಸ್ ಥ್ರೋ F57)
ದೇವೆಂದರ್ ಕುಮಾರ್ (ಡಿಸ್ಕಸ್ ಥ್ರೋ F43/44)
ಧರಮ್‌ಬೀರ್ (ಕ್ಲಬ್ ಥ್ರೋ F51)
ಹ್ಯಾನ್ರಿ (ಡಿಸ್ಕಸ್ ಥ್ರೋ F37)
ಮಂಜೀತ್ (ಜಾವೆಲಿನ್ F12/13)
ಮನು (ಶಾಟ್ ಪುಟ್ F37)
ಮೊಹಮ್ಮದ್ ಯಾಸರ್ (ಶಾಟ್ ಪುಟ್ F45/46)
ನವದೀಪ್ (ಜಾವೆಲಿನ್ F40/41)
ನಿಶಾದ್ ಕುಮಾರ್ (ಹೈಜಂಪ್ T45/46/47)
ಪರ್ದೀಪ್ (ಡಿಸ್ಕಸ್ ಥ್ರೋ F43/44)
ಪರ್ದೀಪ್ (ಲಾಂಗ್ ಜಂಪ್ T43/44)
ಪರ್ವೀನ್ (ಶಾಟ್ ಪುಟ್ F45/46)
ಪ್ರವೀಣ್ ಕುಮಾರ್ (ಹೈಜಂಪ್ T44/64)
ರಾಹುಲ್ (ಹೈಜಂಪ್ T42/63)
ರಾಮ್ ಪಾಲ್ (ಹೈಜಂಪ್ T45/46/47)
ರಿಂಕು (ಜಾವೆಲಿನ್ F45/46)
ಸಾಗರ್ (ಶಾಟ್ ಪುಟ್ F11)
ಸಂದೀಪ್ (ಜಾವೆಲಿನ್ F42/44)
ಸಂದೀಪ್ (200 ಮೀ T44)
ಸುಮಿತ್ ಆಂಟಿಲ್ (ಜಾವೆಲಿನ್ F61-64)
ವಿಕಾಸ್ (ಲಾಂಗ್ ಜಂಪ್ T45/46/47)
ವಿಷು (ಲಾಂಗ್ ಜಂಪ್ T12)
ಬಾನೋತು ಅಕಿರಾ ನಂದನ್ (400ಮೀ ಟಿ35/38)
ವರುಣ್ ಸಿಂಗ್ ಭಾಟಿ (ಹೈ ಜಂಪ್ T42/63)
ರಾಕೇಶಭಾಯ್ ಭಟ್ (100 ಮೀ ಟಿ37)
ಹೇಮ್ ಚಂದ್ರ (ಜಾವೆಲಿನ್ F55/56/57)
ಧರ್ಮರಾಜ್ ಸೋಲೈರಾಜ್ (ಲಾಂಗ್ ಜಂಪ್ ಟಿ62/64)
ದಿಲೀಪ್ ಮಹಾದು ಗಾವಿತ್ (400ಮೀ ಟಿ45/46/47)
ಮೋನು ಘಂಗಾಸ್ (ಶಾಟ್ ಪುಟ್, ಡಿಸ್ಕಸ್ ಥ್ರೋ F11)
ಮಹೇಂದ್ರ ಗುರ್ಜರ್ (ಲಾಂಗ್ ಜಂಪ್, ಜಾವೆಲಿನ್ T42/61/63, F42/44)
ಸುಂದರ್ ಸಿಂಗ್ ಗುರ್ಜರ್ (ಜಾವೆಲಿನ್ F45/46)
ಹೊಕಾಟೊ ಹೊಟೊಜೆ ಸೆಮಾ (ಶಾಟ್ ಪುಟ್ F56/57)
ಶುಭಂ ಜುಯಲ್ (ಶಾಟ್ ಪುಟ್ F56/57)
ಅತುಲ್ ಕೌಶಿಕ್ (ಡಿಸ್ಕಸ್ ಥ್ರೋ F57)
ಸಚಿನ್ ಸರ್ಜೆರಾವ್ ಖಿಲಾರಿ (ಶಾಟ್ ಪುಟ್ F45/46)
ಯೋಗೇಶ್ ಕಥುನಿಯಾ (ಡಿಸ್ಕಸ್ ಥ್ರೋ F54/55/56)
ಪರ್ದೀಪ್ ಕುಮಾರ್ (ಡಿಸ್ಕಸ್ ಥ್ರೋ, ಜಾವೆಲಿನ್ F62/F64; F61/64)
ಪರ್ವೀನ್ ಕುಮಾರ್ (ಜಾವೆಲಿನ್ F55/56/57)
ಪ್ರದೀಪ್ ಕುಮಾರ್ (ಜಾವೆಲಿನ್ F52/53/54)
ಪ್ರಿಯಾಂಶ್ ಕುಮಾರ್ (ಡಿಸ್ಕಸ್ ಥ್ರೋ F57)
ಶೈಲೇಶ್ ಕುಮಾರ್ (ಹೈ ಜಂಪ್ ಟಿ42/63)
ಮಿತ್ ಭಾರತಭಾಯ್ ಪಟೇಲ್ (ಲಾಂಗ್ T43/44)
ಸೋಮನ್ ರಾಣಾ (ಶಾಟ್ ಪುಟ್ F56/57)
ಉನ್ನಿ ರೇಣು (ಲಾಂಗ್ ಜಂಪ್ T43/44)
ರವಿ ರೊಂಗಾಲಿ (ಶಾಟ್ ಪುಟ್ F40)
ಸಂದೀಪ್ ಸಂಜಯ್ ಸಾಗರ್ (ಜಾವೆಲಿನ್ F42/44)
ಅಜಯ್ ಸಿಂಗ್ (ಲಾಂಗ್ ಜಂಪ್ T45/46/47)
ಪುಷ್ಪೇಂದ್ರ ಸಿಂಗ್ (ಜಾವೆಲಿನ್ F42/44)
ಪ್ರಣವ್ ಸೂರ್ಮಾ (ಕ್ಲಬ್ ಥ್ರೋ F51)
ಸಾಗರ್ ಥಾಯಟ್ (ಡಿಸ್ಕಸ್ ಥ್ರೋ F43/44)
ಶ್ರೇಯಾಂಶ್ ತ್ರಿವೇದಿ (100ಮೀ ಟಿ37)
ಆಯುಷ್ ವರ್ಮಾ (ಶಾಟ್ ಪುಟ್ F53)
ಇದನ್ನೂ ಓದಿ ವಿಶ್ವ ಚಾಂಪಿಯನ್‌ಶಿಪ್: 4 ವರ್ಷದ ಬಳಿಕ ಪ್ರಿ-ಕ್ವಾರ್ಟರ್ ಫೈನಲ್‌ಗೇರಿದ ಪಿವಿ ಸಿಂಧು
ಮಹಿಳಾ ತಂಡ
ದಯವಂತಿ (ಶಾಟ್ ಪುಟ್; ಡಿಸ್ಕಸ್ ಥ್ರೋ F61-64; F62/F64)
ಕರಮ್ಜ್ಯೋತಿ (ಡಿಸ್ಕಸ್ ಥ್ರೋ F54/55)
ಪೂಜಾ (ಡಿಸ್ಕಸ್ ಥ್ರೋ F54/55)
ಶರ್ಮಿಳಾ (ಶಾಟ್ ಪುಟ್ F55/56/57)
ಸಿಮ್ರಾನ್ (100ಮೀ, 200ಮೀ; ಟಿ12)
ಏಕ್ತಾ ಭಯ್ (ಕ್ಲಬ್ ಥ್ರೋ F51)
ಅಂಜನಾಬೆನ್ ರೋಹಿತ್‌ಭಾಯ್ ಬುಂಬಾಡಿಯಾ (400 ಮೀ ಟಿ 45/46/47)
ಸುರೇಶ್ ನಿಮಿಷ (ಲಾಂಗ್ ಜಂಪ್ T45/46/47)
ಭಾವನಾಬೆನ್ ಅಜಬಾಜಿ (ಜಾವೆಲಿನ್ F45/46)
ಭಾಗ್ಯಶ್ರೀ ಮಾಧವರಾವ್ ಜಾಧವ್ (ಶಾಟ್ ಪುಟ್ F34)
ಕೀರ್ತಿಕಾ ಜಯಚಂದ್ರನ್ (ಶಾಟ್ ಪುಟ್ F53/54)
ದೀಪ್ತಿ ಜೀವನಜಿ (400 ಮೀ ಟಿ20)
ಸಾಕ್ಷಿ ಕಸನ (ಡಿಸ್ಕಸ್ ಥ್ರೋ F54/55)
ಆನಂದಿ ಕುಲಂತೈಸಾಮಿ (ಕ್ಲಬ್ ಥ್ರೋ F31/32)
ಕಾಂಚನ್ ಲಖಾನಿ (ಡಿಸ್ಕಸ್ ಥ್ರೋ F51/53)
ಕಾಶಿಶ್ ಲಾಕ್ರಾ (ಕ್ಲಬ್ ಥ್ರೋ F51)
ಪ್ರೀತಿ ಪಾಲ್ (100ಮೀ; 200ಮೀ ಟಿ35)
ಸುಚಿತ್ರಾ ಪರಿದಾ (ಜಾವೆಲಿನ್ F55/56)
ಅಮಿಶಾ ರಾವತ್ (ಶಾಟ್ ಪುಟ್ F45/46).