ನವದೆಹಲಿ: ಪ್ರವಾಸಿ ಆಸ್ಟ್ರೇಲಿಯಾ ಮಹಿಳಾ ತಂಡ ಮತ್ತು ಭಾರತ ಮಹಿಳಾ ತಂಡಗಳ(IND vs AUS Women's ODI) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ(IND vs AUS Women's ODI series) ವೇದಿಕೆ ಸಜ್ಜಾಗಿದೆ. ಎರಡೂ ತಂಡಗಳು ಸೆಪ್ಟೆಂಬರ್ 14, 17 ಮತ್ತು 20 ರಂದು ಮೂರು ಏಕದಿನ ಪಂದ್ಯಗಳಲ್ಲಿ ಪರಸ್ಪರ ಸೆಣಸಲಿವೆ. ಮೊದಲ ಎರಡು ಪಂದ್ಯಗಳು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಮೂರನೇ ಏಕದಿನ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದೇ ತಿಂಗಳ ಅಂತ್ಯದಲ್ಲಿ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಪೂರ್ವ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಇತ್ತಂಡಗಳಿಗೂ ಈ ಸರಣಿ ಮಹತ್ವದ್ದಾಗಿದೆ. ಆಸ್ಟ್ರೇಲಿಯಾ ಮತ್ತು ಭಾರತದ ಮಹಿಳೆ ತಂಡ ಏಕದಿನ ಕ್ರಿಕೆಟ್‌ನಲ್ಲಿ 56 ಬಾರಿ ಪರಸ್ಪರ ಮುಖಾಮುಖಿಯಾಗಿದ್ದು, ಆಸ್ಟ್ರೇಲಿಯಾ 46 ಗೆಲುವುಗಳನ್ನು ದಾಖಲಿಸಿದ್ದರೆ, ಭಾರತ ಕೇವಲ 10 ಬಾರಿ ಮಾತ್ರ ಗೆದ್ದಿದೆ. ಭಾರತ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿರುವ ಕಾರಣ ಇದೇ ಫಾರ್ಮ್ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ತಂಡಗಳು
ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ರಿಚಾ ಘೋಷ್ (ವಿ.ಕೀ.), ಕ್ರಾಂತಿ ಗೌಡ್, ಸಯಾಲಿ ಸತ್‌ಘರೆ, ರಾಧಾ ಯಾದವ್, ಶ್ರೀ ಚರಣಿ, ಸ್ನೇಹ್ ರಾಣಾ, ಉಮಾ ಚೆಟ್ರಿ (ವಿ.ಕೀ.)
ಆಸ್ಟ್ರೇಲಿಯಾ: ಅಲಿಸಾ ಹೀಲಿ (ನಾಯಕಿ), ನಿಕೋಲ್ ಫಾಲ್ಟಮ್, ಫೋಬೆ ಲಿಚ್‌ಫೀಲ್ಡ್, ಬೆತ್ ಮೂನಿ, ಜಾರ್ಜಿಯಾ ವೋಲ್, ತಹ್ಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಕಿಮ್ ಗಾರ್ತ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಚಾರ್ಲಿ ನಾಟ್, ಎಲ್ಲಿಸ್ ಪೆರ್ರಿ, ಅನ್ನಾಬೆಲ್ ಸದರ್ಲ್ಯಾಂಡ್, ಡಾರ್ಸಿ ಬ್ರೌನ್, ಸೋಫಿ ಮೊಲಿನಿಯಕ್ಸ್, ಮೇಗನ್ ಶುಟ್, ಜಾರ್ಜಿಯಾ ವೇರ್‌ಹ್ಯಾಮ್.
ವೇಳಾಪಟ್ಟಿ
ಮೊದಲ ಏಕದಿನ ಪಂದ್ಯ - ಸೆಪ್ಟೆಂಬರ್ 14
ಎರಡನೇ ಏಕದಿನ ಪಂದ್ಯ - ಸೆಪ್ಟೆಂಬರ್
ಮೂರನೇ ಏಕದಿನ ಪಂದ್ಯ - ಸೆಪ್ಟೆಂಬರ್
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಇದನ್ನೂ ಓದಿ Asia Cup 2025: ಪಾಕ್ ಪಂದ್ಯಕ್ಕೂ ಮುನ್ನ ಮಗನ ಬ್ಯಾಟಿಂಗ್ ಬಗ್ಗೆ ಅಭಿಷೇಕ್ ಶರ್ಮಾ ತಂದೆ ಪ್ರತಿಕ್ರಿಯೆ