ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

India vs Oman: ಸೂಪರ್‌-4 ಪಂದ್ಯಕ್ಕೂ ಮುನ್ನ ಭಾರತೀಯ ಬ್ಯಾಟರ್‌ಗಳಿಗೆ ಒಮಾನ್ ಪರೀಕ್ಷೆ

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿರುವ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಮುಂದಿನ ಒಮಾನ್ ವಿರುದ್ಧದ ಪಂದ್ಯ ಈ ಆಟಗಾರರಿಗೆ ತಮ್ಮ ಲಯಕ್ಕೆ ಮರಳಲು ಉತ್ತಮ ಅವಕಾಶ ನೀಡಲಿದೆ. ಒಮಾನ್ ಮೊದಲು ಬ್ಯಾಟಿಂಗ್ ನಡೆಸಿದರೆ, ಭಾರತೀಯ ಬೌಲರ್‌ಗಳನ್ನು ಎದುರಿಸಲಾಗದೆ ಕಡಿಮೆ ರನ್‌ಗಳಿಗೆ ಆಲೌಟ್ ಆಗುವ ಸಾಧ್ಯತೆ ಹೆಚ್ಚಿದೆ.

ದುಬೈ: ಏಷ್ಯಾ ಕಪ್ ಕ್ರಿಕೆಟ್(Asia Cup 2025) ಟೂರ್ನಿಯಲ್ಲಿ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ತಂಡ ಈಗಾಗಲೇ ಸೂಪರ್‌-4 ಹಂತಕ್ಕೆ ಪ್ರವೇಶಿಸಿದೆ. ಸೆ.21 ರಂದು ನಡೆಯುವ ಸೂಪರ್‌-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಇದಕ್ಕೂ ಮುನ್ನ ಭಾರತ ತನ್ನ ಕೊನೆಯ ಲೀಗ್‌ ಪಂದ್ಯವನ್ನು ಶುಕ್ರವಾರ(ಸೆ.19) ಒಮಾನ್(India vs Oman,) ವಿರುದ್ಧ ಆಡಲಿದೆ.

ಒಮಾನ್‌ ವಿರುದ್ಧ ಪಂದ್ಯ ಸೂಪರ್‌-4ಗೂ ಮುನ್ನ ಬ್ಯಾಟಿಂಗ್ ನಡೆಸಲು ಟೀಂ ಇಂಡಿಯಾಗೆ ಉತ್ತಮ ವೇದಿಕೆಯಾಗಿದೆ. ಲೀಗ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲೂ ಕಡಿಮೆ ಸ್ಕೋರ್ ಬೆನ್ನಟ್ಟಿ ಗೆದ್ದಿರುವ ಭಾರತೀಯ ಬ್ಯಾಟರ್‌ಗಳಿಗೆ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಕ್ಕಿಲ್ಲ. ಹಾಗಾಗಿ ಒಮಾನ್ ವಿರುದ್ಧದ ಪಂದ್ಯದಲ್ಲಿ ಪೂರ್ಣ 20 ಓವರ್‌ಗಳನ್ನು ಬಳಸಿಕೊಂಡು ಬ್ಯಾಟಿಂಗ್ ಮಾಡಲು ಟೀಂ ಇಂಡಿಯಾ ಎದುರು ನೋಡುತ್ತಿದೆ.

ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿರುವ ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿಲ್ಲ. ಹಾಗಾಗಿ ಮುಂದಿನ ಒಮಾನ್ ವಿರುದ್ಧದ ಪಂದ್ಯ ಈ ಆಟಗಾರರಿಗೆ ತಮ್ಮ ಲಯಕ್ಕೆ ಮರಳಲು ಉತ್ತಮ ಅವಕಾಶ ನೀಡಲಿದೆ. ಒಮಾನ್ ಮೊದಲು ಬ್ಯಾಟಿಂಗ್ ನಡೆಸಿದರೆ, ಭಾರತೀಯ ಬೌಲರ್‌ಗಳನ್ನು ಎದುರಿಸಲಾಗದೆ ಕಡಿಮೆ ರನ್‌ಗಳಿಗೆ ಆಲೌಟ್ ಆಗುವ ಸಾಧ್ಯತೆ ಹೆಚ್ಚಿದೆ.



ಕೋಚ್ ಗಂಭೀರ್ ಯಾವುದೇ ಆಟಗಾರರಿಗೆ ವಿಶ್ರಾಂತಿ ನೀಡದಿರಲು ನಿರ್ಧರಿಸಿದ್ದು, ಜಸ್‌ಪ್ರೀತ್ ಬುಮ್ರಾ ತಮಗೆ ವಿಶ್ರಾಂತಿ ಬೇಕು ಅಂದರೆ ಮಾತ್ರ ಪರಿಗಣಿಸುವ ಸಾಧ್ಯತೆ ಇದೆ. ಬುಮ್ರಾ ವಿಶ್ರಾಂತಿ ಪಡೆದರೆ ಅವರ ಬದಲು ಅರ್ಷದೀಪ್ ಸಿಂಗ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ಕುಲ್ದೀಪ್ ಯಾದವ್ (2 ಪಂದ್ಯಗಳಲ್ಲಿ 7 ವಿಕೆಟ್‌) ಮಧ್ಯಮ ಓವರ್‌ಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಯುಎಇ ವಿರುದ್ಧ 2.1 ಓವರ್‌ಗಳಲ್ಲಿ 4/7 ಬೌಲಿಂಗ್ ಮಾಡುವ ಮೂಲಕ ಮಿಂಚಿದ್ದರು.

ಭಾರತ ಸಂಭಾವ್ಯ ತಂಡ

ಅಭಿಷೇಕ್ ಶರ್ಮಾ, ಶುಭಮನ್ ಗಿಲ್, ಸಂಜು ಸ್ಯಾಮ್ಸನ್ (ವಿ.ಕೀ.), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ/ಅರ್ಶ್‌ದೀಪ್‌ ಸಿಂಗ್‌, ವರುಣ್ ಚಕ್ರವರ್ತಿ.

ಇದನ್ನೂ ಓದಿ Asia Cup 2025: ಅಂಪೈರ್‌ ತಲೆಗೆ ಚೆಂಡೆಸೆದು ಗಾಯಗೊಳಿಸಿದ ಪಾಕ್‌ ಆಟಗಾರ; ವಿಡಿಯೊ ವೈರಲ್‌