ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2025-26ರ ದೇಶೀಯ ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

Indian domestic cricket schedule: ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೂ ರಣಜಿ ಪಂದ್ಯಾವಳಿಯ ಎರಡು ಹಂತಗಳ ನಡುವೆ ನಡೆಯಲಿವೆ. ಈ ಋತುವಿನ ಅಂತಿಮ ಕ್ರಿಕೆಟ್ ಪಂದ್ಯಾವಳಿಯು ಹಿರಿಯ ಮಹಿಳಾ ಅಂತರ ವಲಯ ಬಹು-ದಿನದ ಪಂದ್ಯಾವಳಿಯಾಗಿದ್ದು, ಇದು ಏಪ್ರಿಲ್ 3, 2026 ರಂದು ಮುಕ್ತಾಯಗೊಳ್ಳಲಿದೆ.

2025-26ರ ದೇಶೀಯ ಕ್ರಿಕೆಟ್ ಋತುವಿನ ವೇಳಾಪಟ್ಟಿಯನ್ನು(Indian domestic cricket schedule) ಬಿಸಿಸಿಐ(BCCI) ಬಿಡುಗಡೆ ಮಾಡಿದೆ. ದುಲೀಪ್ ಟ್ರೋಫಿಯೊಂದಿಗೆ ದೇಶೀಯ ಟೂರ್ನಿಗೆ ಚಾಲನೆ ಸಿಗಲಿದೆ. ದುಲೀಪ್‌ ಟೂರ್ನಿ(Duleep Trophy) ಆಗಸ್ಟ್ 28 ರಂದು ಆರಂಭವಾಗಿ ಸೆಪ್ಟೆಂಬರ್ 15 ರವರೆಗೆ ನಡೆಯಲಿದೆ. ರಣಜಿ ಟೂರ್ನಿ ಮತ್ತೊಮ್ಮೆ ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲನೆ ಹಂತ ಅಕ್ಟೋಬರ್-ನವೆಂಬರ್‌ನಲ್ಲಿ ಮತ್ತು ಎರಡನೆ ಹಂತದ 2026 ರ ಜನವರಿಯಿಂದ ಫೆಬ್ರವರಿ ವರೆಗೆ ನಡೆಯಲಿದೆ.

ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯೂ ರಣಜಿ ಪಂದ್ಯಾವಳಿಯ ಎರಡು ಹಂತಗಳ ನಡುವೆ ನಡೆಯಲಿವೆ. ಈ ಋತುವಿನ ಅಂತಿಮ ಕ್ರಿಕೆಟ್ ಪಂದ್ಯಾವಳಿಯು ಹಿರಿಯ ಮಹಿಳಾ ಅಂತರ ವಲಯ ಬಹು-ದಿನದ ಪಂದ್ಯಾವಳಿಯಾಗಿದ್ದು, ಇದು ಏಪ್ರಿಲ್ 3, 2026 ರಂದು ಮುಕ್ತಾಯಗೊಳ್ಳಲಿದೆ.

2025-26ರ ಋತುವಿನ ಬಿಸಿಸಿಐ ದೇಶೀಯ ಕ್ಯಾಲೆಂಡರ್

ದುಲೀಪ್ ಟ್ರೋಫಿ – ಆಗಸ್ಟ್ 28 ರಿಂದ ಸೆಪ್ಟೆಂಬರ್ 15 ರವರೆಗೆ

ಇರಾನಿ ಕಪ್ – ಅಕ್ಟೋಬರ್ 1 ರಿಂದ 5 ರವರೆಗೆ

ರಣಜಿ ಟ್ರೋಫಿ (ಎಲೈಟ್) ಹಂತ 1 – ಅಕ್ಟೋಬರ್ 15 ರಿಂದ ನವೆಂಬರ್ 19 ರವರೆಗೆ

ರಣಜಿ ಟ್ರೋಫಿ (ಎಲೈಟ್) ಹಂತ 2 – ಜನವರಿ 22, 2026 ರಿಂದ ಫೆಬ್ರವರಿ 1 ರವರೆಗೆ

ರಣಜಿ ಟ್ರೋಫಿ ನಾಕೌಟ್‌ ಸುತ್ತು- ಫೆಬ್ರವರಿ 6 ರಿಂದ ಫೆಬ್ರವರಿ 29 ರವರೆಗೆ

ರಣಜಿ ಟ್ರೋಫಿ (ಪ್ಲೇಟ್ ಲೀಗ್) – ಅಕ್ಟೋಬರ್ 15 ರಿಂದ ನವೆಂಬರ್ 19 ರವರೆಗೆ

ರಣಜಿ ಟ್ರೋಫಿ (ಪ್ಲೇಟ್ ಫೈನಲ್) – ಜನವರಿ 22, 2026 ರಿಂದ ಜನವರಿ 26 ರವರೆಗೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಎಲೈಟ್) – ನವೆಂಬರ್ 26 ರಿಂದ ಡಿಸೆಂಬರ್ 18 ರವರೆಗೆ

ಸೈಯದ್ ಮುಷ್ತಾಕ್ ಅಲಿ ಟ್ರೋಫಿ (ಪ್ಲೇಟ್) – ನವೆಂಬರ್ 26 ರಿಂದ ಡಿಸೆಂಬರ್ 6 ರವರೆಗೆ

ವಿಜಯ್ ಹಜಾರೆ ಟ್ರೋಫಿ (ಎಲೈಟ್) – ಡಿಸೆಂಬರ್ 24 ರಿಂದ ಜನವರಿ 18 ರವರೆಗೆ

ವಿಜಯ್ ಹಜಾರೆ ಟ್ರೋಫಿ (ಪ್ಲೇಟ್) – ಡಿಸೆಂಬರ್ 24 ರಿಂದ ಜನವರಿ 6 ರವರೆಗೆ

ವಿನೂ ಮಂಕಡ್ ಟ್ರೋಫಿ – ಅಕ್ಟೋಬರ್ 9 ರಿಂದ ನವೆಂಬರ್ 1 (ಎಲೈಟ್), ಅಕ್ಟೋಬರ್ 9 ರಿಂದ ಅಕ್ಟೋಬರ್ 19 (ಪ್ಲೇಟ್)

ಕರ್ನಲ್ ಸಿಕೆ ನಾಯ್ಡು ಟ್ರೋಫಿ (ಎಲೈಟ್) – ಅಕ್ಟೋಬರ್ 16 ರಿಂದ ನವೆಂಬರ್ 5 (ಹಂತ 1), ಜನವರಿ 23 ರಿಂದ ಫೆಬ್ರವರಿ 2 (ಹಂತ 2), ಫೆಬ್ರವರಿ 21 ರಿಂದ ಮಾರ್ಚ್ 12 (ನಾಕೌಟ್)

ಕರ್ನಲ್ ಸಿಕೆ ನಾಯ್ಡು ಟ್ರೋಫಿ (ಪ್ಲೇಟ್) – ಅಕ್ಟೋಬರ್ 16 ರಿಂದ ನವೆಂಬರ್ 5 (ಹಂತ 1), ಜನವರಿ 23 ರಿಂದ ಫೆಬ್ರವರಿ 2 (ಹಂತ 2), ಫೆಬ್ರವರಿ 6 ರಿಂದ 9 (ಫೈನಲ್)

ಪುರುಷರ U19 ಏಕದಿನ ಚಾಲೆಂಜರ್ ಟ್ರೋಫಿ – ನವೆಂಬರ್ 5 ರಿಂದ 11 ರವರೆಗೆ

ಪುರುಷರ U23 ರಾಜ್ಯ A ಟ್ರೋಫಿ – ನವೆಂಬರ್ 9 ರಿಂದ ಡಿಸೆಂಬರ್ 1 (ಎಲೈಟ್), ನವೆಂಬರ್ ನವೆಂಬರ್ 9 ರಿಂದ ನವೆಂಬರ್ 19 (ಪ್ಲೇಟ್)

ಕೂಚ್ ಬೆಹಾರ್ ಟ್ರೋಫಿ – ನವೆಂಬರ್ 16 ರಿಂದ ಜನವರಿ 20 (ಎಲೈಟ್), ನವೆಂಬರ್ 16 ರಿಂದ ಡಿಸೆಂಬರ್ 27 (ಪ್ಲೇಟ್)

ವಿಜಯ್ ಮರ್ಚೆಂಟ್ ಟ್ರೋಫಿ – ಡಿಸೆಂಬರ್ 7 ರಿಂದ ಜನವರಿ 28 (ಎಲೈಟ್), ಡಿಸೆಂಬರ್ 7 ರಿಂದ ಜನವರಿ 7 (ಪ್ಲೇಟ್)

ಇದನ್ನೂ ಓದಿ Virat Kohli: ವಿರಾಟ್ ಕೊಹ್ಲಿ-ನಟಿ ಜೆನಿಲಿಯಾ ಅಭಿನಯದ ಆ ಜಾಹೀರಾತು ಪ್ರಸಾರವಾದ ತಕ್ಷಣಕ್ಕೆ ಬ್ಯಾನ್ ಆಯ್ತು; ಕಾರಣ ಏನು?

ಮಹಿಳಾ ಪಂದ್ಯಗಳ ವೇಳಾಪಟ್ಟಿ

ಸೀನಿಯರ್ ಮಹಿಳಾ ಟಿ20 ಟ್ರೋಫಿ – ಅಕ್ಟೋಬರ್ 8 ರಿಂದ ಅಕ್ಟೋಬರ್ 31 (ಎಲೈಟ್), ಅಕ್ಟೋಬರ್ 8 ರಿಂದ 17 (ಪ್ಲೇಟ್)

ಸೀನಿಯರ್ ಮಹಿಳಾ ಏಕದಿನ ಟ್ರೋಫಿ – ಫೆಬ್ರವರಿ 6 ರಿಂದ ಫೆಬ್ರವರಿ 28 (ಎಲೈಟ್), ಫೆಬ್ರವರಿ 6 ರಿಂದ 16 (ಪ್ಲೇಟ್)

ಮಹಿಳಾ U19 T20 ಟ್ರೋಫಿ – ಅಕ್ಟೋಬರ್ 26 ರಿಂದ ನವೆಂಬರ್ 12 (ಎಲೈಟ್), ಅಕ್ಟೋಬರ್ 26 ರಿಂದ ನವೆಂಬರ್ 4 (ಪ್ಲೇಟ್)

ಸೀನಿಯರ್ ಮಹಿಳಾ ಇಂಟರ್‌ಜೋನಲ್ T20 ಟ್ರೋಫಿ – ನವೆಂಬರ್ 4 ರಿಂದ 14 ರವರೆಗೆ

ಮಹಿಳಾ U23 T20 ಟ್ರೋಫಿ – ನವೆಂಬರ್ 24 ರಿಂದ ಡಿಸೆಂಬರ್ 11 (ಎಲೈಟ್), ನವೆಂಬರ್ 24 ರಿಂದ ಡಿಸೆಂಬರ್ 3 (ಪ್ಲೇಟ್)

ಮಹಿಳಾ U19 ಏಕದಿನ ಟ್ರೋಫಿ – ಡಿಸೆಂಬರ್ 13 ರಿಂದ ಜನವರಿ 1 (ಎಲೈಟ್), ಡಿಸೆಂಬರ್ 13 ರಿಂದ ಡಿಸೆಂಬರ್ 23 (ಪ್ಲೇಟ್)

ಮಹಿಳಾ U15 ಏಕದಿನ ಟ್ರೋಫಿ – ಜನವರಿ 2 ರಿಂದ 21 (ಎಲೈಟ್), ಜನವರಿ 2 ರಿಂದ 12 (ಪ್ಲೇಟ್)

ಮಹಿಳಾ U23 ಏಕದಿನ ಟ್ರೋಫಿ – ಮಾರ್ಚ್ 3 ರಿಂದ 22 (ಎಲೈಟ್), ಮಾರ್ಚ್ 3 ರಿಂದ 13 (ಪ್ಲೇಟ್)

ಹಿರಿಯ ಮಹಿಳೆಯರ ಅಂತರವಲಯದ ಏಕದಿನ ಟ್ರೋಫಿ – ಮಾರ್ಚ್ 5 ರಿಂದ 15.

ಹಿರಿಯ ಮಹಿಳೆಯರ ಅಂತರವಲಯದ ಬಹುದಿನ ಟ್ರೋಫಿ – ಮಾರ್ಚ್ 20 ರಿಂದ ಏಪ್ರಿಲ್ 3