Virat Kohli: ವಿರಾಟ್ ಕೊಹ್ಲಿ-ನಟಿ ಜೆನಿಲಿಯಾ ಅಭಿನಯದ ಆ ಜಾಹೀರಾತು ಪ್ರಸಾರವಾದ ತಕ್ಷಣಕ್ಕೆ ಬ್ಯಾನ್ ಆಯ್ತು; ಕಾರಣ ಏನು?
ಈ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಜನಪ್ರಿಯ ಬಾಲಿವುಡ್ ನಟಿ ಜೆನಿಲಿಯಾ ಡಿʼಸೋಜಾ ಅವರೊಂದಿಗೆ ಕಾಣಿಸಿಕೊಂಡಿದ್ದ ಜಾಹೀರಾತಿಗೆ ಎಲ್ಲೆಡೆ ವ್ಯಾಪಕ ವಿರೋಧ ಕೂಡ ವ್ಯಕ್ತವಾಗಿತ್ತು. ಹಾಗಾದರೆ ಆ ಜಾಹೀರಾತಿನಲ್ಲಿ ಏನಿದೆ? ಯಾವ ಕಾರಣಕ್ಕೆ ಈ ಜಾಹೀರಾತು ವಿವಾದ ಹುಟ್ಟುಹಾಕಿತು? ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.

Virat Kohli and Genelia D'Souza

ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ತಂಡದ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ (Virat Kohli) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ಖ್ಯಾತಿ ಪಡೆದ ಇವರಿಗೆ ಜಾಹೀರಾತು ಕ್ಷೇತ್ರದಲ್ಲಿಯೂ ಸಾಕಷ್ಟು ಬೇಡಿಕೆ ಇದೆ. ಅಂತೆಯೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಜನಪ್ರಿಯ ಬಾಲಿವುಡ್ ನಟಿ ಜೆನಿಲಿಯಾ ಡಿʼಸೋಜಾ ಅವರೊಂದಿಗೆ ಕಾಣಿಸಿಕೊಂಡ ಅದೊಂದು ಜಾಹೀರಾತು ಭಾರಿ ವಿವಾದ ಹುಟ್ಟು ಹಾಕಿತ್ತು. ಹಾಗಾದರೆ ಆ ಜಾಹೀರಾತಿನಲ್ಲಿ ಏನಿತ್ತು? ಯಾವ ಕಾರಣಕ್ಕೆ ಈ ಜಾಹೀರಾತು ವಿವಾದಕ್ಕೆ ಕಾರಣವಾಯ್ತು? ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಇಲ್ಲಿದೆ.
ವಿರಾಟ್ ಕೊಹ್ಲಿ ಮತ್ತು ಜೆನಿಲಿಯಾ ಡಿ'ಸೋಜಾ ಇಬ್ಬರು ವಾಚ್ ಬ್ರ್ಯಾಂಡ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಜಾಹೀರಾತು ಪ್ರಸಾರವಾಗಿ ಸ್ವಲ್ಪ ದಿನಕ್ಕೆ ಬ್ಯಾನ್ ಆಗಿ ಬಿಟ್ಟಿತು. ಭಾರತೀಯ ದೂರದರ್ಶನ ಪ್ರಸಾರ ವಿಭಾಗದ ಕೆಲವು ನಿಯಮ ಉಲ್ಲಂಘನೆ ಕಾರಣಕ್ಕೆ ಹಾಗೂ ವಯಸ್ಕ ವಿಷಯಗಳು ಜಾಹೀರಾತಿನಲ್ಲಿ ಅಡಕವಾದ ಕಾರಣ ಅದನ್ನು ನಿಷೇಧಿಸಲಾಯಿತು. ಈ ವಿಡಿಯೊದಲ್ಲಿ ಜೆನಿಲಿಯಾ ಒಬ್ಬ ಗಗನಸಖಿಯಾಗಿ ಹಾಗೂ ವಿರಾಟ್ ಕೊಹ್ಲಿ ಪೈಲಟ್ ಆಗಿ ಕಾಣಿಸಿಕೊಂಡಿದ್ದರು.
ಇದನ್ನು ಓದಿ:Kothalavadi Movie: ಯಶ್ ತಾಯಿ ನಿರ್ಮಾಣದ ಮೊದಲ ಚಿತ್ರ 'ಕೊತ್ತಲವಾಡಿ' ರಿಲೀಸ್ ಡೇಟ್ ಅನೌನ್ಸ್
ಜೆನಿಲಿಯಾ ಏರ್ ಹೋಸ್ಟೆಸ್ ಪಾತ್ರದಲ್ಲಿ ಸಿಕ್ಕಾಪಟ್ಟೆ ರೋಮ್ಯಾಂಟಿಕ್ ಆಗಿ ಜಾಹೀರಾತಿನಲ್ಲಿ ಕಂಡಿದ್ದರು. ಇನ್ನು ಕ್ರಿಕೆಟಿಗ ವಿರಾಟ್ ಪೈಲಟ್ ಡ್ರೆಸ್ನಲ್ಲಿದ್ದರು. ಪೈಲಟ್ (ವಿರಾಟ್) ವಿಮಾನ ಹಾರಿಸುತ್ತಿರುವಾಗ, ಅವರ ಸಹ-ಪೈಲಟ್ ಎದ್ದು ವಾಶ್ ರೂಂಗೆ ಹೋಗುತ್ತಾರೆ. ಬಳಿಕ ಏರ್ ಹೋಸ್ಟೆಸ್ (ಜೆನಿಲಿಯಾ) ವಿರಾಟ್ ಬಳಿಗೆ ಬರುತ್ತಾರೆ. ಬಳಿಕ ಇಬ್ಬರ ನಡುವಿನ ಪ್ರೀತಿ, ಪ್ರಣಯಗಳ ದೃಶ್ಯ ಕಂಡು ಬರುತ್ತದೆ. ಈ ವೇಳೆ ವಿಮಾನ ನಿಯಂತ್ರಣ ಕಳೆದುಕೊಂಡು ಪ್ರಯಾಣಿಕರು ಅಪಘಾತದ ಭಯದಲ್ಲಿರುತ್ತಾರೆ. ಇದೇ ಕಾರಣಕ್ಕೆ ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಜಾಹೀರಾತನ್ನು ನಿಷೇಧಿಸಲಾಯಿತು.
ಈ ಜಾಹೀರಾತು ಪೈಲಟ್ ಮತ್ತು ಗಗನಸಖಿಯ ನಡವಳಿಕೆಗೆ ಅಗೌರವವನ್ನುಂಟು ಮಾಡುತ್ತದೆ ಮತ್ತು ಯುವ ಪ್ರೇಕ್ಷಕರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹಲವರು ವಾದಿಸಿದ್ದರು. ಅಷ್ಟು ಮಾತ್ರವಲ್ಲದೆ ಪ್ರಯಾಣಿಕರ ಅಸುರಕ್ಷತೆಯ ವಿಚಾರವನ್ನೇ ಈ ಜಾಹೀರಾತಿನಲ್ಲಿ ಹೈಲೈಟ್ ಮಾಡಲಾಗಿದ್ದು ಕೂಡ ನಿಷೇಧಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಹಾಗಿದ್ದರೂ ಈ ವಿಡಿಯೊ ಯುಟ್ಯೂಬ್ನಲ್ಲಿ ಲಭ್ಯವಿದೆ.
ಈ ವಿಡಿಯೊ ಕಂಡ ನೆಟ್ಟಿಗರು ನಾನಾ ತರನಾಗಿ ಕಾಮೆಂಟ್ ಹಾಕಿದ್ದಾರೆ. ಇದು ಅಸಭ್ಯವಾಗಿದೆ, ವಿಮಾನಕಯಾನ ಸಂಸ್ಥೆಗೆ ಅಗೌರವ ಸೂಚಿಸಿದಂತಿದೆ ಎಂದು ಬಳಕೆದಾರರೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ ಎಂದು ಕಮೆಂಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಜೆನಿಲಿಯಾ ತಮ್ಮ ಕ್ರಶ್ ಎಂಬ ಹೇಳಿಕೆ ನೀಡಿದ್ದರು. ವಿರಾಟ್ ಈ ಜಾಹೀರಾತಿನಲ್ಲಿ ಅಭಿನಯಿಸುವಾಗಲೇ ಜೆನಿಲಿಯಾ ಮೇಲೆ ಕ್ರಶ್ ಫಿಲಿಂಗ್ ಬಂದಿರಬೇಕು ಎಂಬ ಗಾಸಿಪ್ ಸುದ್ದಿ ಕೂಡ ಹರಿದಾಡುತ್ತಿದೆ.