ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajinkya Rahane: ಭಾರತೀಯ ಆಟಗಾರರಿಗೆ ಬಿಸಿಸಿಐ ಆಯ್ಕೆದಾರರ ಭಯವೇ? ಅಜಿಂಕ್ಯ ರಹಾನೆ ಸ್ಫೋಟಕ ಹೇಳಿಕೆ

"ಆಟಗಾರರು ಆಯ್ಕೆದಾರರ ಬಗ್ಗೆ ಭೀತಿ ಹೊಂದಿರಬಾರದು. ಐದು-ಆರು ಅಥವಾ ಏಳೆಂಟು ವರ್ಷಗಳಿಂದೀಚೆಗೆ ಅಂದರೆ ಇತ್ತೀಚೆಗೆ ನಿವೃತ್ತರಾದ ಅಗ್ರಗಣ್ಯ ಕ್ರಿಕೆಟಿಗರು ಆಯ್ಕೆದಾರರಾಗಬೇಕು. ಏಕೆಂದರೆ ಆಯ್ಕೆದಾರರ ಮನೋಭಾವ ಮತ್ತು ಪ್ರವೃತ್ತಿ, ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳಬೇಕು" ಎಂದು ರಹಾನೆ ವಿಶ್ಲೇಷಿಸಿದ್ದಾರೆ.

ಮುಂಬಯಿ: ದೇಶಿಯ ಕ್ರಿಕೆಟ್‍ನ ಆಯ್ಕೆ ವ್ಯವಸ್ಥೆಯಲ್ಲಿ(BCCI selectors) ಸಮಗ್ರ ಬದಲಾವಣೆ ಅಗತ್ಯ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಿಂಕ್ಯ ರಹಾನೆ(Ajinkya Rahane) ಆಗ್ರಹಿಸಿದ್ದಾರೆ. ಇತ್ತೀಚೆಗೆ ನಿವೃತ್ತರಾದವರನ್ನಷ್ಟೇ ಆಯ್ಕೆದಾರರಾಗಿ ನೇಮಕ ಮಾಡಬೇಕು ಎಂದು ಹೇಳಿದ್ದಾರೆ.

ಚೇತೇಶ್ವರ ಪೂಜಾರ ಅವರ ಯೂಟ್ಯೂಬ್ ಚಾನಲ್‍ನಲ್ಲಿ ನಡೆದ ಚರ್ಚೆ ವೇಳೆ, "ಆಧುನಿಕ ಕ್ರಿಕೆಟ್‍ನ ವಿಕಾಸಶೀಲ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವವರು ಮತ್ತು ಯಾವುದೇ ಭೀತಿ ಇಲ್ಲದೇ ತಮ್ಮ ಸಹಜ ಸಾಮಥ್ರ್ಯವನ್ನು ಪ್ರದರ್ಶಿಸಲು ಆಟಗಾರರಿಗೆ ನೆರವಾಗುವವರು ಆಯ್ಕೆದಾರರಾಗಿರುವುದು ಮುಖ್ಯ" ಎಂದು ಒತ್ತಿ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‍ನಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಆಧುನೀಕರಿಸುವ ಪ್ರಸ್ತಾವವನ್ನು ರಹಾನೆ ಮುಂದಿಟ್ಟಿದ್ದು, ಮುಖ್ಯವಾಗಿ ದೇಶಿಯ ಕ್ರಿಕೆಟ್‍ನಲ್ಲಿ ಇದನ್ನು ಅನುಷ್ಠಾನಕ್ಕೆ ತರುವಂತೆ ಸಲಹೆ ನೀಡಿದ್ದಾರೆ. ಕಳೆದ ಎಂಟು ವರ್ಷಗಳಿಂದೀಚೆಗೆ ನಿವೃತ್ತರಾದವರು ಮಾತ್ರವೇ ಪ್ರಚಲಿತ ಕ್ರಿಕೆಟ್‍ನ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐನ ಪ್ರಸ್ತುತ ನಿಬಂಧನೆಗಳ ಪ್ರಕಾರ, 10ಕ್ಕಿಂತ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ನಿವೃತ್ತ ಕ್ರಿಕೆಟಿಗರು ರಾಜ್ಯ ಅಸೋಸಿಯೇಷನ್‍ಗೆ ಆಯ್ಕೆದಾರರಾಗಬಹುದು. ರಾಷ್ಟ್ರೀಯ ಆಯ್ಕೆ ಸಮಿತಿಯ ಮಾನದಂಡಗಳು ಮತ್ತಷ್ಟು ಕಠಿಣವಾಗಿವೆ ಎಂದರು.

ಇದನ್ನೂ ಓದಿ Ranji Trophy: ಇಂದಿನಿಂದ ರಣಜಿ ಟ್ರೋಫಿ: ಕರ್ನಾಟಕಕ್ಕೆ ಸೌರಾಷ್ಟ್ರ ಮೊದಲ ಸವಾಲು

"ಆಟಗಾರರು ಆಯ್ಕೆದಾರರ ಬಗ್ಗೆ ಭೀತಿ ಹೊಂದಿರಬಾರದು. ಐದು-ಆರು ಅಥವಾ ಏಳೆಂಟು ವರ್ಷಗಳಿಂದೀಚೆಗೆ ಅಂದರೆ ಇತ್ತೀಚೆಗೆ ನಿವೃತ್ತರಾದ ಅಗ್ರಗಣ್ಯ ಕ್ರಿಕೆಟಿಗರು ಆಯ್ಕೆದಾರರಾಗಬೇಕು. ಏಕೆಂದರೆ ಆಯ್ಕೆದಾರರ ಮನೋಭಾವ ಮತ್ತು ಪ್ರವೃತ್ತಿ, ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳಬೇಕು" ಎಂದು ರಹಾನೆ ವಿಶ್ಲೇಷಿಸಿದ್ದಾರೆ.