ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anurag Thakur: ಬಿಎಫ್‌ಐ ಚುನಾವಣೆಗೆ ಅನುರಾಗ್‌ ಮತ್ತೆ ಅನರ್ಹ

ಮಧ್ಯಂತರ ಸಮಿತಿಯು ಇತ್ತೀಚೆಗೆ ಮಾಡಿದ ಸಾಂವಿಧಾನಿಕ ಬದಲಾವಣೆಗಳ ವಿರುದ್ಧ ಅವರ ಬಣವು ಹೊಸ ಕಾನೂನು ಸವಾಲನ್ನು ಸಲ್ಲಿಸಿದ ಬಳಿಕ, ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ ಅನುರಾಗ್‌ ಠಾಕೂರ್‌ ಅವರ ಹೆಸರನ್ನು ನಾಮನಿರ್ದೇಶನಗೊಳಿಸಿತ್ತು. ಮತ್ತು ಬಿಎಫ್‌ಐ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳುವ ಇಬ್ಬರು ಪ್ರತಿನಿಧಿಗಳಲ್ಲಿ ಒಬ್ಬರಾಗಿ ಅವರ ಹೆಸರನ್ನು ಆರಿಸಿತ್ತು.

ನವದೆಹಲಿ: ಮಾಜಿ ಕ್ರೀಡಾ ಸಚಿವ ಅನುರಾಗ್ ಠಾಕೂರ್(Anurag Thakur)ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಭಾರತೀಯ ಬಾಕ್ಸಿಂಗ್ ಫೆಡರೇಶನ್ (BFI) ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹಗೊಂಡಿದ್ದಾರೆ. ಇದು ಅವರು ಅನರ್ಹವಾಗುತ್ತಿರುವುದು ಎರಡನೇ ಬಾರಿಗೆ. ಆಗಸ್ಟ್ 21 ರಂದು ನಡೆಯಲಿರುವ 2025-29ರ ಸಾಲಿನ ಚುನಾವಣೆಗೆ ಬಿಡುಗಡೆಗೊಳಿಸಿದ ಮತಾರರ ಪಟ್ಟಿಯಿಂದ ಅವರ ಹೆಸರನ್ನು ಕೈಬಿಟ್ಟಿರುವುದು ಇದಕ್ಕೆ ಕಾರಣ.

ಹಿಂದಿನ ಪದಾಧಿಕಾರಗಳ ಅಧಿಕಾರವಧಿ ಫೆ.2ರಂದೇ ಅಂತ್ಯವಾಗಿತ್ತು. ಬಳಿಕ ಮಾ.28ರಂದು ಚುನಾವಣೆ ನಿಗದಿಯಾಗಿತ್ತು. ಈ ವೇಳೆ ಚುನಾವಣೆಗೆ ಠಾಕೂರ್ ಕೂಡ ಸ್ಪರ್ಧೆಯಲ್ಲಿದ್ದರು. ಆದರೆ ಬಿಎಫ್‌ಐ ಅಧ್ಯಕ್ಷ, ಅಜಯ್ ಸಿಂಗ್ ಹೊರಡಿಸಿದ 60 ಸದಸ್ಯರ ಎಲೆಕ್ಟೊರಲ್‌ ಕಾಲೇಜು ಪಟ್ಟಿದಿಂದ ಅನುರಾಗ್ ಅವರ ಹೆಸರನ್ನು ಕೈಬಿಡಲಾಗಿತ್ತು. ಇದರಿಂದ ಹಲವರು ಅಪಸ್ವರ ಎತ್ತಿ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಚುನಾವಣೆ ಮುಂದೂಡಿಕೆಯಾಗಿತ್ತು. ಬಳಿಕ ವಿಶ್ವ ಬಾಕ್ಸಿಂಗ್ ಸಮಿತಿ ಮಧ್ಯಂತರ ಸಮಿತಿ ರಚಿಸಿ, ಆ.31ರೊಳಗೆ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು.

ಮಧ್ಯಂತರ ಸಮಿತಿಯು ಇತ್ತೀಚೆಗೆ ಮಾಡಿದ ಸಾಂವಿಧಾನಿಕ ಬದಲಾವಣೆಗಳ ವಿರುದ್ಧ ಅವರ ಬಣವು ಹೊಸ ಕಾನೂನು ಸವಾಲನ್ನು ಸಲ್ಲಿಸಿದ ಬಳಿಕ, ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ ಅನುರಾಗ್‌ ಠಾಕೂರ್‌ ಅವರ ಹೆಸರನ್ನು ನಾಮನಿರ್ದೇಶನಗೊಳಿಸಿತ್ತು. ಮತ್ತು ಬಿಎಫ್‌ಐ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಳ್ಳುವ ಇಬ್ಬರು ಪ್ರತಿನಿಧಿಗಳಲ್ಲಿ ಒಬ್ಬರಾಗಿ ಅವರ ಹೆಸರನ್ನು ಆರಿಸಿತ್ತು. ವಿಶ್ವ ಬಾಕ್ಸಿಂಗ್‌ನಿಂದ ಅಂಗೀಕಾರಗೊಂಡಿರುವ ಬಿಎಫ್‌ಐ ಸಂವಿಧಾನದ ವಿಧಿ 20ರ ಪ್ರಕಾರ, ಅನುರಾಗ್‌ ನಾಮನಿರ್ದೇಶನ ಊರ್ಜಿತವಾಗಿಲ್ಲ ಎಂದು ಮಧ್ಯಂತರ ಸಮಿತಿಯ ಮುಖ್ಯಸ್ಥ ಫೈರುಜ್‌ ಮೊಹಮದ್‌ ತಿಳಿಸಿದ್ದಾರೆ.

ಇದನ್ನೂ ಓದಿ ಅನುರಾಗ್ ಠಾಕೂರ್ ನಾಮಪತ್ರ ತಿರಸ್ಕರಿಸಿದ ಭಾರತದ ಬಾಕ್ಸಿಂಗ್ ಒಕ್ಕೂಟ