ಅನುರಾಗ್ ಠಾಕೂರ್ ನಾಮಪತ್ರ ತಿರಸ್ಕರಿಸಿದ ಭಾರತದ ಬಾಕ್ಸಿಂಗ್ ಒಕ್ಕೂಟ
ಠಾಕೂರ್ ಬಣದವರು ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿದ್ದು, ಅಗತ್ಯವಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಅವರು 2008ರಿಂದ ಸದಸ್ಯರಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಭಂಡಾರಿ ಪಿಟಿಗೆ ತಿಳಿಸಿದ್ದಾರೆ.


ನವದೆಹಲಿ: ಭಾರತೀಯ ಬಾಕ್ಸಿಂಗ್ ಫೆಡರೇಶನ್(Boxing Federation of India) ಎಲೆಕ್ಟೋರಲ್ ಕಾಲೇಜು ಅಂತಿಮ ಪಟ್ಟಿ(Electoral College List)ಯಿಂದ ಬಿಜೆಪಿ ಸಂಸದ ಅನುರಾಗ್ ಠಾಕೂರ್(Anurag Thakur) ಅವರನ್ನು ಹೊರಗಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. ಬಿಎಫ್‌ಐ ಅಧ್ಯಕ್ಷ, ಅಜಯ್ ಸಿಂಗ್ ಹೊರಡಿಸಿದ 60 ಸದಸ್ಯರ ಎಲೆಕ್ಟೊರಲ್ ಕಾಲೇಜು ಪಟ್ಟಿದಿಂದ ಅನುರಾಗ್ ಅವರ ಹೆಸರನ್ನು ಕೈಬಿಡಲಾಗಿದೆ. ಬಿಎಫ್‌ಐ ಕಾರ್ಯದರ್ಶಿ ಹೇಮಂತ ಕಲಿತಾ ಅವರು ಅನುರಾಗ್ ಠಾಕೂರ್ ಹೆಸರನ್ನು ಒಳಗೊಂಡ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದರೂ, ಚುನಾವಣಾ ಅಧಿಕಾರಿ ನ್ಯಾಯಮೂರ್ತಿ (ನಿವೃತ್ತ) ಆರ್.ಕೆ. ಗೌಬಾ ಅವರು ಹೊರಡಿಸಿದ ಆದೇಶದಲ್ಲಿ ಮತ್ತೊಂದು ಪಟ್ಟಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಎಂದು ಹೇಳಿದ್ದಾರೆ. ಇದು ಅನುರಾಗ್ ಠಾಕೂರ್‌ಗೆ ಹಿನ್ನಡೆಯಾಗಿದೆ.
ಠಾಕೂರ್ ಬಣದವರು ಚುನಾವಣಾ ಅಧಿಕಾರಿಯನ್ನು ಭೇಟಿಯಾಗಿದ್ದು, ಅಗತ್ಯವಿದ್ದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ. ಅನುರಾಗ್ ಠಾಕೂರ್ ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್‌ನ ಸದಸ್ಯರಾಗಿದ್ದಾರೆ. ಅವರು 2008ರಿಂದ ಸದಸ್ಯರಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಬಾಕ್ಸಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜೇಶ್ ಭಂಡಾರಿ ಪಿಟಿಗೆ ತಿಳಿಸಿದ್ದಾರೆ.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಾರ್ಚ್ 14ರಿಂದ 16ರವರೆಗೆ ಕಾಲಾವಕಾಶವಿದ್ದು, ಮಾರ್ಚ್ 28ರಂದು ಚುನಾವಣೆ ನಡೆಯಲಿದೆ.ಅನು ಬಿಎಫ್‌ಐ ಮಾರ್ಚ್ 7ರಂದು ಎಲ್ಲ ಸಂಯೋಜಿತ ರಾಜ್ಯ ಸಂಘಗಳಿಗೆ ನೋಟಿಸ್ ಕಳುಹಿಸಿತ್ತು. ರಾಜ್ಯ ಘಟಕಗಳ ಚುನಾವಣಾ ವಾರ್ಷಿಕ ಮಹಾಸಭೆಯ ಸಮಯದಲ್ಲಿ ಪ್ರಾಮಾಣಿಕ ಮತ್ತು ನಿಯಮನುಸಾರ ಆಯ್ಕೆಯಾದ ಚುನಾಯಿತ ಸದಸ್ಯರು ಮಾತ್ರ ಆಯಾ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸಲು ಅಧಿಕಾರ ಹೊಂದಿರುತ್ತಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಿತ್ತು.
ಇದನ್ನೂ ಓದಿ ಮತ್ತೆ ಸಕ್ರಿಯಗೊಂಡ ಭಾರತೀಯ ಕುಸ್ತಿ ಸಂಸ್ಥೆ; ಸಂಭ್ರಮದಲ್ಲಿ ಕುಸ್ತಿಪಟುಗಳು
ಠಾಕೂರ್ ಅವರು ಹಿಮಾಚಲಪ್ರದೇಶ ರಾಜ್ಯ ಸಂಸ್ಥೆಯ ಚುನಾಯಿತ ಸದಸ್ಯರಲ್ಲ, ಅದಕ್ಕಾಗಿಯೇ ಅವರ ಹೆಸರನ್ನು ತಿರಸ್ಕರಿಸಲಾಗಿದೆ. ಎಲ್ಲ ಹೆಸರುಗಳನ್ನು ಪರಿಶೀಲಿಸುವುದು ಹಾಗೂ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಚುನಾವಣಾ ಅಧಿಕಾರಿಗೆ ಕಳುಹಿಸುವುದು ಬಿಎಫ್ಐನ ಕೆಲಸ ಎಂದು ಬಿಎಫ್ಐ ಮೂಲವೊಂದು ತಿಳಿಸಿದೆ.
'ಅನುರಾಗ್ ಠಾಕೂರ್ ಚುನಾಯಿತ ಸದಸ್ಯರು. ಅವರು ಕಳೆದ ಕೆಲವು ವರ್ಷಗಳಿಂದ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸದಸ್ಯರಾಗಿದ್ದಾರೆ. ನಮ್ಮಲ್ಲಿ ಎಲ್ಲ ದಾಖಲೆಗಳಿವೆ' ಎಂದು ಠಾಕೂರ್ ಬಣದವರು ತಿಳಿಸಿದ್ದಾರೆ.