WI vs PAK: ಅಂತಿಮ ಎಸೆತದಲ್ಲಿ ಬೌಂಡರಿ ಬಾರಿಸಿ ಪಾಕ್‌ಗೆ ಸೋಲುಣಿಸಿದ ಹೋಲ್ಡರ್
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಆರಂಭ ಉತ್ತಮವಾಗಿರಲಿಲ್ಲ. 50 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹಸನ್ ನವಾಜ್ 23 ಎಸೆತಗಳಲ್ಲಿ 40 ರನ್ ಮತ್ತು ನಾಯಕ ಸಲ್ಮಾನ್ ಆಘಾ 33 ಎಸೆತಗಳಲ್ಲಿ 38 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ಚೇತರಿಕೆ ನೀಡಿದರು. ಜಾಸನ್ ಹೋಲ್ಡರ್ 19 ರನ್‌ಗೆ 4 ವಿಕೆಟ್ ಕಿತ್ತು ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು.

ಫ್ಲೋರಿಡಾ: ಜಾಸನ್ ಹೋಲ್ಡರ್(Jason Holder) ಅವರ ಆಲ್‌ರೌಂಡರ್ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಪಾಕಿಸ್ತಾನ(WI vs PAK) ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರೋಚಕ 2 ವಿಕೆಟ್ ಅಂತರದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡ ಸತತ ಏಳು ಪಂದ್ಯಗಳ ಸೋಲಿಗೆ ಬ್ರೇಕ್ ಹಾಕಿತು.
ಭಾರತೀಯ ಕಾಲಮಾನದಂತೆ ಭಾನುವಾರ ಬೆಳಗಿನ ಜಾವ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 133ರನ್ ಬಾರಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ 8 ವಿಕೆಟ್‌ಗೆ 135 ರನ್ ಬಾರಿಸಿ ಗೆಲುವು ದಾಖಲಿಸಿತು.ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5-0 ಅಂತರದಲ್ಲಿ ಸೋಲು ಕಂಡಿದದ್ದ ವಿಂಡೀಸ್ ಕೊನೆಗೂ ತವರಿನಲ್ಲಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ವೇಳೆ ವಿಂಡೀಸ್ ಕೂಡ ಪಾಕ್‌ನಂತೆ ಆರಂಭಿಕ ಆಘಾತ ಎದುರಿಸಿತು. ಗುಡಕೇಶ್ ಮೋತಿ(28) ಅವರದ್ದೇ ತಂಡದ ದಾಖಲಾದ ಗರಿಷ್ಠ ಮೊತ್ತ. ಅಂತಿಮ ಓವರ್‌ನಲ್ಲಿ ವಿಂಡೀಸ್ ಗೆಲುವಿಗೆ 8 ರನ್ ಬೇಕಿತ್ತು. ಶಾಹೀನ್ ಅಫ್ರಿದಿ ಎಸೆದ ಈ ಓವರ್‌ನ ಮೊದಲ ಎಸೆತದಲ್ಲಿ ಒಂದು ರನ್ ದಾಖಲಾಯಿತು. ಮುಂದಿನ ಎಸೆತದಲ್ಲಿ ವಿಕೆಟ್ ಬಿತ್ತು. ಮೂರು, ನಾಲ್ಕು ಮತ್ತು 5ನೇ ಎಸೆತದಲ್ಲಿ ತಲಾ ರನ್ ದಾಖಲಾಯಿತು. ಅಂತಿಮ ಎಸೆತದಲ್ಲಿ ಗೆಲುವಿಗೆ ಮೂರು ರನ್ ಬೇಕಿದ್ದಾಗ ಹೋಲ್ಡರ್ ಬೌಂಡರಿ ಬಾರಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಹೋಲ್ಡರ್ ಅಜೇಯ 16 ರನ್ ಗಳಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಆರಂಭ ಉತ್ತಮವಾಗಿರಲಿಲ್ಲ. 50 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡಿತು. ಈ ವೇಳೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಹಸನ್ ನವಾಜ್ 23 ಎಸೆತಗಳಲ್ಲಿ 40 ರನ್ ಮತ್ತು ನಾಯಕ ಸಲ್ಮಾನ್ ಆಘಾ 33 ಎಸೆತಗಳಲ್ಲಿ 38 ರನ್ ಗಳಿಸಿ ಪಾಕಿಸ್ತಾನ ತಂಡಕ್ಕೆ ಚೇತರಿಕೆ ನೀಡಿದರು. ಜಾಸನ್ ಹೋಲ್ಡರ್ 19 ರನ್‌ಗೆ 4 ವಿಕೆಟ್ ಕಿತ್ತು ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರು.
ಇದನ್ನೂ ಓದಿ IND vs ENG 5th Test: ಯಶಸ್ವಿ ಜೈಸ್ವಾಲ್ ಶತಕ, ಮೂರನೇ ದಿನ ಭಾರತ ತಂಡಕ್ಕೆ ಮೇಲುಗೈ!