ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವಿಶ್ವ ಕಪ್ ಫೈನಲ್; ಐತಿಹಾಸಿಕ ಪದಕ ಗೆದ್ದ ಜ್ಯೋತಿ ಸುರೇಖಾ

ಸೆಮಿಫೈನಲ್‌ನಲ್ಲಿ, ಜ್ಯೋತಿ ವಿಶ್ವದ ನಂ. 1 ಆಟಗಾರ್ತಿ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ವಿರುದ್ಧ 143-145 ಅಂತರದಲ್ಲಿ ಸೋತರು. ಹೀಗಾಗಿ ಫೈನಲ್‌ ಪ್ರವೇಶದ ಅವಕಾಶ ಕಳೆದುಕೊಂಡರು. ಫೈನಲ್‌ ತಲುಪಿದ್ದರೆ ಕನಿಷ್ಠ ಬೆಳ್ಳಿ ಪದಕ ಜಯಿಸಬಹುದಿತ್ತು. ಆದಾಗ್ಯೂ, ಕಂಚಿನ ಪದಕದ ಪಂದ್ಯದಲ್ಲಿ ಜ್ಯೋತಿ ಉತ್ತಮ ಪ್ರದರ್ಶನ ನೀಡಿದರು.

ನಾನ್‌ಜಿಂಗ್ (ಚೀನಾ): ಭಾರತದ ಬಿಲ್ಲುಗಾರ್ತಿ ಜ್ಯೋತಿ ಸುರೇಖಾ ವೆಣ್ಣಮ್(Jyothi Surekha Vennam) ವಿಶ್ವಕಪ್ ಫೈನಲ್‌ನಲ್ಲಿ(World Cup Final) ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕಾಂಪೌಂಡ್ ಬಿಲ್ಲುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶನಿವಾರ ನಡೆದ ಸ್ಫರ್ಧೆಯಲ್ಲಿ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಈ ಸಾಧನೆಗೈದರು.

ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್, ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಗ್ರೇಟ್ ಬ್ರಿಟನ್‌ನ ಎಲ್ಲಾ ಗಿಬ್ಸನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ, 15 ಪರಿಪೂರ್ಣ ಗುರಿಗಳೊಂದಿಗೆ 150-145 ಅಂಕಗಳಿಂದ ಜಯಗಳಿಸಿ, ಟೂರ್ನಮೆಂಟ್‌ನಲ್ಲಿ ತನ್ನ ಮೊದಲ ಪೋಡಿಯಂ ಫಿನಿಶ್ ಅನ್ನು ಖಚಿತಪಡಿಸಿಕೊಂಡರು. ಎಂಟು ಬಿಲ್ಲುಗಾರರ ವಿಶ್ವಕಪ್ ಋತುವಿನ ಅಂತಿಮ ಪಂದ್ಯದಲ್ಲಿ 29 ವರ್ಷದ ಭಾರತೀಯ ಆಟಗಾರ್ತಿ ಅಮೆರಿಕದ ಅಲೆಕ್ಸಿಸ್ ರುಯಿಜ್ ವಿರುದ್ಧ 143-140 ಕ್ವಾರ್ಟರ್ ಫೈನಲ್ ಗೆಲುವಿನೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಿದ್ದರು.

ಸೆಮಿಫೈನಲ್‌ನಲ್ಲಿ, ಜ್ಯೋತಿ ವಿಶ್ವದ ನಂ. 1 ಆಟಗಾರ್ತಿ ಮೆಕ್ಸಿಕೋದ ಆಂಡ್ರಿಯಾ ಬೆಸೆರಾ ವಿರುದ್ಧ 143-145 ಅಂತರದಲ್ಲಿ ಸೋತರು. ಹೀಗಾಗಿ ಫೈನಲ್‌ ಪ್ರವೇಶದ ಅವಕಾಶ ಕಳೆದುಕೊಂಡರು. ಫೈನಲ್‌ ತಲುಪಿದ್ದರೆ ಕನಿಷ್ಠ ಬೆಳ್ಳಿ ಪದಕ ಜಯಿಸಬಹುದಿತ್ತು. ಆದಾಗ್ಯೂ, ಕಂಚಿನ ಪದಕದ ಪಂದ್ಯದಲ್ಲಿ ಜ್ಯೋತಿ ಉತ್ತಮ ಪ್ರದರ್ಶನ ನೀಡಿದರು.

ಇದನ್ನೂ ಓದಿ AUS vs IND 1st ODI: ಭಾರತ-ಆಸೀಸ್‌ ಮೊದಲ ಪಂದ್ಯದ ಪಿಚ್‌ ರಿಪೋರ್ಟ್‌, ಹವಾಮಾನ ವರದಿ ಹೇಗಿದೆ?

ಮಹಿಳೆಯರ ಕಾಂಪೌಂಡ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಅರ್ಹತಾ ಸುತ್ತಿನ ಸ್ಪರ್ಧಿಯಾಗಿದ್ದ ಮಧುರಾ ಧಮನ್‌ಗಾಂವ್ಕರ್, ಮೆಕ್ಸಿಕೋದ ಮರಿಯಾನಾ ಬರ್ನಾಲ್ ವಿರುದ್ಧ 142-145 ಅಂತರದಲ್ಲಿ ಸೋತು ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದರು.