ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಪ್ರೆಸ್ಟೀಜ್ ಗಾಲ್ಫ್ ಶೈರ್ ನಲ್ಲಿ ಆವಿಷ್ಕಾರಕ ಮಾದರಿಯಲ್ಲಿ ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಪ್ರಾರಂಭ

“ದಿ ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಬರೀ ಗಾಲ್ಫ್ ಟೂರ್ನಮೆಂಟ್ ಗಿಂತಲೂ ಹೆಚ್ಚಿನದಾಗಿದೆ. ಇದು ಭಾರತೀಯ ಕ್ರೀಡೆ ಮತ್ತು ಉದ್ಯಮಕ್ಕೆ ಮಹತ್ತರ ಕ್ಷಣವಾಗಿದೆ. ಭಾರತದಲ್ಲಿ ಪಿಜಿಟಿಐ ಮತ್ತು ಡಬ್ಲ್ಯೂಜಿಎ ಒಟ್ಟಿಗೆ ಅನುಮೋದಿಸಿದ ಮೊದಲ ವೃತ್ತಿಪರ ಗಾಲ್ಫ್ ಕಾರ್ಯಕ್ರಮವಾಗಿ ಇದು ಪುರುಷ ಹಾಗೂ ಮಹಿಳಾ ವೃತ್ತಿಪರರನ್ನು ಮೇಲೆ ಪರಸ್ಪರ ಬಹುಮಾನಕ್ಕೆ ಸ್ಪರ್ಧಿಸಲು ಒಂದೇ ವೇದಿಕೆಗೆ ತಂದಿದೆ

ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಪ್ರಾರಂಭ

Profile Ashok Nayak Apr 25, 2025 12:27 AM

ಬೆಂಗಳೂರು: ಕಪಿಲ್ ದೇವ್- ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಇಂದು ಬೆಂಗಳೂರಿನ ಪ್ರತಿಷ್ಠಿತ ಪ್ರೆಸ್ಟೀಜ್ ಗಾಲ್ಫ್ ಶೈರ್ ಕ್ಲಬ್ ನಲ್ಲಿ ಪ್ರಾರಂಭವಾಯಿತು. ಮೊಟ್ಟಮೊದಲ ಬಾರಿಗೆ ಭಾರತದ ಮುಂಚೂಣಿಯ ಪುರುಷ ಹಾಗೂ ಮಹಿಳಾ ವೃತ್ತಿಪರರು ಪರಸ್ಪರ ರೂ.2 ಕೋಟಿಗಳ ಬಹುಮಾನಕ್ಕೆ ಹಣಾಹಣಿ ನಡೆಸಲಿದ್ದು ಈ ಕ್ರೀಡೆಗೆ ಮಹತ್ತರ ಕ್ಷಣವಾಗಿಸಿದೆ. ಕ್ರಿಕೆಟ್ ಪಟು ಕಪಿಲ್ ದೇವ್ ಮತ್ತು ಪ್ರೀಮಿಯಂ ಕನ್ಸಲ್ಟಿಂಗ್ ಸಂಸ್ಥೆ ಗ್ರಾಂಟ್ ಥಾರ್ನ್ಟನ್ ಭಾರತ್ ಜಂಟಿಯಾಗಿ ಪ್ರಸ್ತುತಪಡಿಸುತ್ತಿರುವ ಈ ಟೂರ್ನಮೆಂಟ್ ಅನ್ನು ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಮತ್ತು ವಿಮೆನ್ಸ್ ಗಾಲ್ಫ್ಅಸೋಸಿಯೇಷನ್ ಆಫ್ ಇಂಡಿಯಾ (ಡಬ್ಲ್ಯೂ.ಜಿ.ಎ.ಐ.) ಜಂಟಿ ಯಾಗಿ ಮಂಜೂರು ಮಾಡಿವೆ.

ಇದು ಭಾರತದ ಮೊದಲ ಮಿಶ್ರ ಮಾದರಿಯ ವೃತ್ತಿಪರ ಗಾಲ್ಫ್ ಟೂರ್ನಮೆಂಟ್ ಆಗಿದ್ದು ಈ ಸ್ಪರ್ಧಾತ್ಮಕ ಕ್ರೀಡೆಯಲ್ಲಿ ಸಮಾನತೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ಈ ಟೂರ್ನಮೆಂಟ್ 54-ಹೋಲ್ ಚಾಂಪಿಯನ್ ಶಿಪ್ ಮಾದರಿಯಲ್ಲಿ ಮತ್ತು ವಿಶಿಷ್ ಪ್ರೊ-ಆಮ್ ಕಾಂಪೊನೆಂಟ್ ರೀತಿಯಲ್ಲಿ ಅನಾವರಣಗೊಳ್ಳಲಿದ್ದು ಆಟಗಾರರು ಮತ್ತು ಅಭಿಮಾನಿಗಳಿಗೆ ಸೊಗಸಾದ ಸ್ಫರ್ಧೆ ಮತ್ತು ಸ್ಫೂರ್ತಿಯುತ ಆಟ ನೀಡುತ್ತದೆ.

ಇದನ್ನೂ ಓದಿ: Bangalore News: ಸಾಯಿ ಬಾಬಾ ಪಾದುಕೆ ದರ್ಶನ ಪಡೆಯುತ್ತಿರುವ ಭಕ್ತರು

ಈ ಆಟ ಹೇಗೆ ಆಡಲಾಗುತ್ತದೆ ಎನ್ನುವುದು ಇಲ್ಲಿದೆ:

 54-ಹೋಲ್ ಚಾಂಪಿಯನ್ ಶಿಪ್ ಏಪ್ರಿಲ್ 24ರಿಂದ 26ರವರೆಗೆ ನಡೆಯಲಿದ್ದು 60 ಪುರುಷ ಮತ್ತು 12 ಮಹಿಳಾ ವೃತ್ತಿಪರರು ಬಹುಮಾನಕ್ಕೆ ಸ್ಪರ್ಧಿಸಲಿದ್ದಾರೆ

 ಪ್ರತಿ ಆಟಗಾರರೂ ಅವರ ವೈಯಕ್ತಿಕ ಸಾಧನೆ ಆಧರಿಸಿ ಬಹುಮಾನದ ಭಾಗವನ್ನು ಪಡೆಯುತ್ತಾರೆ

ವೃತ್ತಿಪರ ಮತ್ತು ಪ್ರೊ-ಆಮ್ ಆಟದ ಏಕೀಕರಣ:

 ಈ ಟೂರ್ನಮೆಂಟ್ ಮೂರು ಸುತ್ತುಗಳ ಪ್ರೊ-ಆಮ್ ಹೊಂದಿದ್ದು ಇದರೊಂದಿಗೆ ವೃತ್ತಿಪರ ಸುತ್ತುಗಳಿರುತ್ತವೆ

 ಪ್ರತಿದಿನ, 48 ವೃತ್ತಿಪರರು ಬೆಳಿಗ್ಗೆ ಆಡುತ್ತಾರೆ, ಇತರೆ 24 ಮಂದಿ ಮಧ್ಯಾಹ್ನ 72 ಹವ್ಯಾಸಿಗಳೊಂದಿಗೆ ಆಡುತ್ತಾರೆ

 ಈ ರೊಟೇಷನ್ ಸಿಸ್ಟಂನಿಂದ ಪ್ರತಿ ವೃತ್ತಿಪರರೂ ಎರಡು ಬೆಳಗಿನ ಸೆಷನ್ ಗಳು ಮತ್ತು ಒಂದು ಮಧ್ಯಾಹ್ನದ ಪ್ರೊ-ಆಮ್ ಅನ್ನು ಮೂರು ದಿನಗಳು ಆಡುವಂತೆ ಮಾಡುತ್ತದೆ

ಪ್ರೊ-ಆಮ್ ಮಾದರಿಯ ವಿಶೇಷತೆಗಳು:

 ಪ್ರತಿ ತಂಡದಲ್ಲೂ ಒಬ್ಬ ವೃತ್ತಿಪರ ಮತ್ತು ಮೂರು ಹವ್ಯಾಸಿಗಳಿರುತ್ತಾರೆ

 ಹವ್ಯಾಸಿಗಳು ಸ್ಕ್ರಾಂಬಲ್ ಫಾರ್ಮಾಟ್ ನಲ್ಲಿ ಆಡುತ್ತಾರೆ, ವೃತ್ತಿಪರರು ಸ್ಟ್ರೋಕ್ ಪ್ಲೇ ಮುಂದುವರಿಸುತ್ತಾರೆ

 ಪ್ರೊ-ಆಮ್ ದಿನಗಳಲ್ಲಿ ವೃತ್ತಿಪರರ ಅಂಕವನ್ನು ಪ್ರೊಫೆಷಲನ್ ಲೀಡರ್ ಬೋರ್ಡ್ ಮತ್ತು ಪ್ರೊ-ಆಮ್ ಚಾಂಪಿಯನ್ ಶಿಪ್ ಎರಡರಲ್ಲೂ ಪರಿಗಣಿಸಲಾಗುತ್ತದೆ.

 ಪ್ರೊ-ಆಮ್ ಸ್ಟಾಂಡಿಂಗ್ಸ್ ನಲ್ಲಿ ಟಾಪ್ ಮೂವರು ವೃತ್ತಿಪರರು ಬಹುಮಾನದ ಹಣವನ್ನು ಪಡೆಯವ ಮೂಲಕ ಪ್ರತಿ ಸುತ್ತೂ ಪರಿಗಣಿಸುವಂತೆ ಮಾಡುತ್ತಾರೆ.

ಉದ್ಘಾಟನೆಯಲ್ಲಿ ಮಾತನಾಡಿದ ಗ್ರಾಂಟ್ ಥಾರ್ನ್ಟನ್ ಭಾರತ್ ಸಿಇಒ ವಿಶೇಷ್ ಸಿ. ಚಾಂದಿಯೊಕ್, “ದಿ ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ 2025 ಬರೀ ಗಾಲ್ಫ್ ಟೂರ್ನಮೆಂಟ್ ಗಿಂತಲೂ ಹೆಚ್ಚಿನದಾಗಿದೆ. ಇದು ಭಾರತೀಯ ಕ್ರೀಡೆ ಮತ್ತು ಉದ್ಯಮಕ್ಕೆ ಮಹತ್ತರ ಕ್ಷಣವಾಗಿದೆ. ಭಾರತದಲ್ಲಿ ಪಿಜಿಟಿಐ ಮತ್ತು ಡಬ್ಲ್ಯೂಜಿಎ ಒಟ್ಟಿಗೆ ಅನುಮೋದಿಸಿದ ಮೊದಲ ವೃತ್ತಿಪರ ಗಾಲ್ಫ್ ಕಾರ್ಯಕ್ರಮವಾಗಿ ಇದು ಪುರುಷ ಹಾಗೂ ಮಹಿಳಾ ವೃತ್ತಿಪರರನ್ನು ಮೇಲೆ ಪರಸ್ಪರ ಬಹುಮಾನಕ್ಕೆ ಸ್ಪರ್ಧಿಸಲು ಒಂದೇ ವೇದಿಕೆಗೆ ತಂದಿದೆ ಮತ್ತು ಕ್ರಿಕೆಟ್, ಉದ್ಯಮ, ಸರ್ಕಾರ, ಕಲೆ ಮತ್ತು ಫ್ಯಾಷನ್ ಕ್ಷೇತ್ರದ ಖ್ಯಾತನಾಮರನ್ನು ಹವ್ಯಾಸಿಗಳಾಗಿ ತರುತ್ತದೆ. ನಾವು ಗಾಲ್ಫ್ ಮಾತ್ರವಲ್ಲ ಭಾರತೀಯ ಕ್ರೀಡೆಯ ಭವಿಷ್ಯವನ್ನು ವಿಸ್ತಾರ, ಲಭ್ಯ ಮತ್ತು ನಿಜಕ್ಕೂ ಸಮಾನವಾಗಿ ಮರು ರೂಪಿಸುವ ಉದ್ದೇಶ ಹೊಂದಿದ್ದೇವೆ” ಎಂದರು.

ಪಿಜಿಟಿಐ ಅಧ್ಯಕ್ಷ ಮತ್ತು ಖ್ಯಾತ ಕ್ರಿಕೆಟ್ ಪಟು ಕಪಿಲ್ ದೇವ್, “ಕಪಿಲ್ ದೇವ್-ಗ್ರಾಂಟ್ ಥಾರ್ನ್ಟನ್ ಇನ್ವಿಟೇಷನಲ್ ನ ಮೂರನೇ ಆವೃತ್ತಿಯೊಂದಿಗೆಎ ನಾವು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದು ಈ ವರ್ಷದ ಕಾರ್ಯಕ್ರಮವನ್ನು ಅವಿಸ್ಮರಣೀಯವಾಗಿಸಲಿದ್ದೇವೆ. ಭಾರತದಲ್ಲಿ ಗಾಲ್ಫ್ ಉತ್ತೇಜಿಸಲು ಗ್ರಾಂಟ್ ಥಾರ್ನ್ಟನ್ ಭಾರತ್ ನೀಡಿರುವ ಬೆಂಬಲಕ್ಕೆ ನಾನು ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ ಮತ್ತು ಪ್ರೆಸ್ಟೀಜ್ ಗಾಲ್ಫ್ ಶೈರ್ ಬೆಂಗಳೂರು ತಮ್ಮ ಸ್ಥಳ ನೀಡಿರುವುದಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತೇನೆ. ಗಾಲ್ಫ್ ಭಾರತದಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿದೆ. ಈ ಟೂರ್ನಮೆಂಟ್ ಮೂಲಕ ದೊಡ್ಡ ಗಾಲ್ಫರ್ ಗಳ ಸಮುದಾಯ ಸೃಷ್ಟಿಸುವ, ಮುಖ್ಯವಾಗಿ ಮುಂದಿನ ತಲೆಮಾರಿನ ಗಾಲ್ಫರ್ ಗಳನ್ನು ಪೋಷಿಸುವ ಉದ್ದೇಶ ಹೊಂದಿದ್ದೇವೆ” ಎಂದರು.

ಈ ಟೂರ್ನಮೆಂಟ್ ನಲ್ಲಿ ಗಗನ್ ಜೀತ್ ಭುಲ್ಲಾರ್, ಅಜೀತೇಶ್ ಸಂಧು, ರಹಿಲ್ ಗಂಗ್ ಜೀ, ರಶೀದ್ ಖಾನ್, ಯುವರಾಜ್ ಸಂಧು, ಉದಯನ್ ಮಾನೆ, ಮನು ಗಂದಾಸ್, ಓಂ ಪ್ರಕಾಶ್ ಚೌಹಾಣ್, ವರುಣ್ ಪಾರಿಖ್ ಮತ್ತು ಸಚಿನ್ ಬೈಸೊಯಾ ಮತ್ತಿತರ ಮುಂಚೂಣಿಯ ಗಾಲ್ಫರ್ ಗಳು ಭಾಗವಹಿಸಲಿದ್ದಾರೆ.

ಮಹಿಳೆಯರಲ್ಲಿ ವಾಣಿ ಕಪೂರ್, ಸ್ನೇಹಾ ಸಿಂಗ್, ಅಮನ್ ದೀಪ್ ಕೌರ್, ಸೆಹೆರ್ ಕೌರ್ ಅಟ್ವಾಲ್, ಪ್ರಣವಿ ಎಸ್. ಅರಸ್, ನೇಹಾ ತ್ರಿಪಾಠ, ತ್ವೇಷಾ ಮಲಿಕ್, ರಿದ್ದಿಮಾ ದಿಲಾವರಿ, ಜಾಸ್ಮಿನ್ ಶೇಖರ್, ಹಿತಾಶೀ ಬಕ್ಷಿ, ಅವನಿ ಪ್ರಶಾಂತ್ ಮತ್ತು ವಿಧಾತ್ರಿ ಅರಸ್ ಇದ್ದಾರೆ.