ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ಭಾರತ ಪರ ವಿಶೇಷ ಟೆಸ್ಟ್‌ ದಾಖಲೆ ಬರೆದ ಕೆ.ಎಲ್‌ ರಾಹುಲ್‌

ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಏಷ್ಯಾದ ಆರಂಭಿಕ ಆಟಗಾರ ಎಂಬ ಹಿರಿಮೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಸುನಿಲ್ ಗವಾಸ್ಕರ್ (1979 ರಲ್ಲಿ 542) ಮೊದಲಿಗ. 21 ನೇ ಶತಮಾನದಲ್ಲಿ ಗ್ರೇಮ್ ಸ್ಮಿತ್ (2003 ರಲ್ಲಿ 714 ರನ್) ನಂತರ ವಿದೇಶದಲ್ಲಿ ಈ ಸಾಧನೆ ಮಾಡಿದ ಎರಡನೇ ಪ್ರವಾಸಿ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ.

ಭಾರತ ಪರ ವಿಶೇಷ ಟೆಸ್ಟ್‌ ದಾಖಲೆ ಬರೆದ ಕೆ.ಎಲ್‌ ರಾಹುಲ್‌

Profile Abhilash BC Jul 27, 2025 7:11 PM

ಮ್ಯಾಂಚೆಸ್ಟರ್‌: ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ, ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಅವರು ಇಂಗ್ಲೆಂಡ್‌(ENG vs IND) ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್‌ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 90 ರನ್‌ ಬಾರಿಸಿದ ರಾಹುಲ್‌, ವಿದೇಶದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಆರಂಭಿಕ ಬ್ಯಾಟರ್‌ ಎನಿಸಿಕೊಂಡರು.

ದಾಖಲೆ ದಿಗ್ಗಜ ಸುನೀಲ್‌ ಗವಾಸ್ಕರ್‌ ಹೆಸರಿನಲ್ಲಿದೆ. ಅವರು ಎರಡು ಬಾರಿ 500 ಪ್ಲಸ್‌ ಮೊತ್ತ ಗಳಿಸಿದ್ದಾರೆ. 1971ರಲ್ಲಿ ವೆಸ್ಟ್‌ ಇಂಡೀಸ್‌ನಲ್ಲಿ 774 ರನ್‌. ಇದಾದ ಬಳಿಕ 1979 ರಲ್ಲಿ ಇಂಗ್ಲೆಂಡ್‌ನಲ್ಲಿ 542 ರನ್‌ ಗಳಿಸಿದ್ದರು. ರಾಹುಲ್‌ 511* ರನ್‌ ಗಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಏಷ್ಯಾದ ಆರಂಭಿಕ ಆಟಗಾರ ಎಂಬ ಹಿರಿಮೆಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಸುನಿಲ್ ಗವಾಸ್ಕರ್ (1979 ರಲ್ಲಿ 542) ಮೊದಲಿಗ. 21 ನೇ ಶತಮಾನದಲ್ಲಿ ಗ್ರೇಮ್ ಸ್ಮಿತ್ (2003 ರಲ್ಲಿ 714 ರನ್) ನಂತರ ವಿದೇಶದಲ್ಲಿ ಈ ಸಾಧನೆ ಮಾಡಿದ ಎರಡನೇ ಪ್ರವಾಸಿ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೂ ರಾಹುಲ್ ಪಾತ್ರರಾಗಿದ್ದಾರೆ.

311 ರನ್‌ ಬೆನ್ನಟ್ಟಿದ ಭಾರತ ಖಾತೆ ತೆರೆಯುವ ಮುನ್ನವೇ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಶುಭಮನ್‌ ಗಿಲ್‌ ಮತ್ತು ರಾಹುಲ್‌ ಜತೆಗೂಡಿ ಮೂರನೇ ವಿಕೆಟ್‌ 188 ರನ್‌ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಇದೇ ವೇಳೆ ಗಿಲ್ ಮತ್ತು ಕೆಎಲ್ ರಾಹುಲ್ ತಂಡ ಶೂನ್ಯಕ್ಕೆ ಎರಡು ವಿಕೆಟ್ ಕಳೆದುಕೊಂಡ ಬಳಿಕ ಇದುವರೆಗಿನ ಅತ್ಯಧಿಕ ಜೊತೆಯಾಟ ನಡೆಸಿದರು. ಇದು ಮೊಹಿಂದರ್ ಅಮರನಾಥ್ ಮತ್ತು ಗುಂಡಪ್ಪ ವಿಶ್ವನಾಥ್ ಅವರ ಹಿಂದಿನ 105 ರನ್‌ಗಳ ದಾಖಲೆಯನ್ನು ಮೀರಿಸಿತು.

ಇದನ್ನೂ ಓದಿ Shubman Gill: ಗಿಲ್‌ ಶತಕದ ಆರ್ಭಟಕ್ಕೆ ಹಲವು ದಿಗ್ಗಜರ ದಾಖಲೆ ಪತನ