ಕೋಲಾರ: ಭಾರತದಲ್ಲಿ ಗಾಲ್ಫ್ ಕ್ರೀಡೆಯ ಅಧಿಕೃತ ಅನುಮೋದನೆಯ ಸಂಸ್ಥೆ ದಿ ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಮತ್ತು ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿ ಇಂದು ಕೋಲಾರ್ ಓಪನ್ 2025 ಪವರ್ಡ್ ಬೈ ಝಿಯಾನ್ ಹಿಲ್ಸ್ ಅನ್ನು ಜಂಟಿಯಾಗಿ ಪ್ರಕಟಿಸಿದ್ದು ಇದು ಕೋಲಾರದ ಭವ್ಯವಾದ ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯಲ್ಲಿ ಮಂಗಳವಾರ ಆರಂಭವಾಗಿದ್ದು, 29ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದ ಒಟ್ಟು ಬಹುಮಾನ ಒಂದು ಕೋಟಿ ರೂ. ಇದೆ.
ಕೋಲಾರ್ ಓಪನ್ ಮೂಲಕ ಪಿಜಿಟಿಐ ಮೊಟ್ಟಮೊದಲ ಬಾರಿಗೆ ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಗೆ ಪ್ರವೇಶಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಪ್ರಮುಖ ಭಾರತೀಯ ವೃತ್ತಿಪರರಲ್ಲಿ ಅಂಗದ್ ಕೀಮಾ, ಒಲಂಪಿಕ್ ಪಟು ಉದಯನ್ ಮಾನೆ, ಓಂ ಪ್ರಕಾಶ್ ಚೌಹಾಣ್, ಮನು ಗಂದಾಸ್, ಅರ್ಜುನ್ ಪ್ರಸಾದ್ ಮತ್ತು ಶೌರ್ಯ ಭಟ್ಟಾಚಾರ್ಯ ಒಳಗೊಂಡಿದ್ದಾರೆ.
ಪ್ರಮುಖ ವಿದೇಶೀಯರಲ್ಲಿ ಶ್ರೀಲಂಕಾದ ಎನ್.ತಂಗರಾಜ ಮತ್ತು ಕೆ. ಪ್ರಭಾಗರನ್, ಬಾಂಗ್ಲಾದೇಶದ ಜಮಾಲ್ ಹುಸೇನ್ ಮತ್ತು ಬಾದಲ್ ಹುಸೇನ್, ಇಟಲಿಯ ಮಿಷೆಲ್ ಆರ್ಟೊಲನಿ ಮತ್ತು ಫೆಡೆರಿಕೊ ಝುಚೆಟಿ, ಝೆಕಿಯಾದ ಸ್ಟೆಪನ್ ಡನೆಕ್, ಅಮೆರಿಕಾದ ಕೊಯಿಚಿರೊ ಸಟೊ, ನೇಪಾಳದ ಸುಭಾಷ್ ತಮಾಂಗ್ ಅಲ್ಲದೆ ಉಗಾಂಡಾದ ಜೊಷುವಾ ಸೀಲ್ ಒಳಗೊಂಡಿದ್ದಾರೆ.
ಇದನ್ನೂ ಓದಿ: Women's Cricket: ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕನ್ನಡತಿ ವೇದಾ ಕೃಷ್ಣಮೂರ್ತಿ!
ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಜಾರ್ಜ್ ಮೆನೊಂಪರಂಪಿಲ್, “ನಾವು ಇತ್ತೀಚೆಗೆ ಒಂಭತ್ತು ರಂಧ್ರಗಳ ನಿರ್ಮಾಣ ಪೂರ್ಣಗೊಳಿಸಿದೆವು ಮತ್ತು ಅಧಿಕೃತ ವಿಶ್ವ ಗಾಲ್ಫ್ ರ‍್ಯಾಂಕಿಂಗ್ ಹೊಂದಿರುವ ಮೊದಲ ಕೋಲಾರ್ ಓಪನ್ ಪಿಜಿಟಿಐ ಟೂರ್ನಮೆಂಟ್ ಅನ್ನು ಸ್ವಾಗತಿಸಲು ಬಹಳ ಸಂತೋಷ ಹೊಂದಿದ್ದೇವೆ. ನಾವು ಉತ್ಸಾಹಕರ ಸ್ಪರ್ಧೆ ಎದುರು ನೋಡು ತ್ತಿದ್ದೇವೆ ಮತ್ತು ಆಟಗಾರರಿಗೆ ಸ್ಮರಣೀಯ ಅನುಭವ ನೀಡಲಿದ್ದೇವೆ. ಇದು ಪಿಜಿಟಿಐ ಕ್ಯಾಲೆಂಡರ್ ನಲ್ಲಿ ನಿಯಮಿತವಾಗಿ ಮುಂದುವರಿಯಬೇಕೆಂದು ಮತ್ತು ಹೆಚ್ಚು ಗಾಲ್ಫರ್ ಗಳು ಮತ್ತು ಪ್ರವಾಸಿಗ ರನ್ನು ಈ ಪ್ರದೇಶಕ್ಕೆ ಆಕರ್ಷಿಸಲು ನೆರವಾಗುತ್ತದೆ ಎಂದು ಆಶಿಸುತ್ತೇವೆ” ಎಂದರು.
ಪಿಜಿಟಿಐ ಸಿಇಒ ಶ್ರೀ ಅಮನ್ ದೀಪ್ ಜೊಹ್ಲ್, “ಭಾರತದಾದ್ಯಂತ ವೃತ್ತಿಪರ ಗಾಲ್ಫರ್ ಗಳ ನಾವು ಉದ್ಘಾಟನೆಯ ಕೋಲಾರ್ ಓಪನ್ ಅ ಹೆಜ್ಜೆ ಗುರುತನ್ನು ವಿಸ್ತರಿಸಲು ನಮ್ಮ ಮುಂದುವರಿದ ಭಾಗವಾಗಿ ಕೋಲಾರ್ ಓಪನ್ ನ ಉದ್ಘಾಟನಾ ಆವೃತ್ತಿ ಪ್ರಾರಂಭಿಸಲು ಬಹಳ ಸಂತೋಷ ಹೊಂದಿದ್ದೇವೆ. ನಾವು ಝಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಗೆ ಈ ಕ್ರೀಡೆಯ ಅಭಿವೃದ್ಧಿ ಮತ್ತು ಭಾರತೀಯ ವೃತ್ತಿಪರರಿಗೆ ಗರಿಷ್ಠ ಆಡುವ ಅವಕಾಶಗಳನ್ನು ಸೃಷ್ಟಿಸಿದ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ. ಇತ್ತೀಚೆಗೆ ನಿರ್ಮಾಣವಾದ ಬ್ಯಾಕ್-ನೈನ್ ಮೊಟ್ಟಮೊದಲ ಬಾರಿಗೆ ಅನಾವರಣ ಗೊಳ್ಳುತ್ತಿದ್ದು ಭಾರತದ ಮುಂಚೂಣಿಯ ಗಾಲ್ಫಿಂಗ್ ವೃತ್ತಿಪರರು ಈ ವಾರ ಪರೀಕ್ಷಿಸಲಿದ್ದು ಅಪಾರ ಹಸಿರು, ಅಸಂಖ್ಯ ಪೆನಾಲ್ಟಿ ಪ್ರದೇಶಗಳು ಮತ್ತು ಗಾಳಿಯು ಕಠಿಣ ಸವಾಲನ್ನೆಸೆಯಲಿದೆ” ಎಂದರು.
ಸವಾಲಿನ, ಚಾಂಪಿಯನ್ ಶಿಪ್ ಮಟ್ಟದ 18-ಹೋಲ್ ಗಾಲ್ಫ್ ಕೋರ್ಸ್ ಅನ್ನು ಆರ್ಕಿಟೆಕ್ಟ್ ರೊನಾಲ್ಡ್ ಫ್ರೀಂ ವಿನ್ಯಾಸಗೊಳಿಸಿದ್ದು ಅದು ಝಿಯಾನ್ ಹಿಲ್ಸ್ ಆಕರ್ಷಣೆಯಾಗಿದೆ