ದುಬೈ: ನೂತನ ಏಕದಿನ ಶ್ರೇಯಾಂಕದಲ್ಲಿ(ICC ODI Team Rankings) ಭಾರತ ತಂಡ(Team India) ತನ್ನ ಅಗ್ರಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ವೆಸ್ಟ್‌ಇಂಡೀಸ್(WI vs PAK ODI) ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಸೋತಿರುವ ಪಾಕಿಸ್ತಾನ 5ನೇ ಸ್ಥಾನಕ್ಕೆ ಕುಸಿದಿದೆ. ಪಾಕಿಸ್ತಾನವು 34 ಪಂದ್ಯಗಳಲ್ಲಿ 3,465 ಅಂಕ ಗಳಿಸಿದೆ.
ಶ್ರೀಲಂಕಾ ವಿರುದ್ಧ ತನ್ನ ಏಕದಿನ ಸರಣಿಯಲ್ಲಿ ಸೋತಿರುವ ಬಾಂಗ್ಲಾದೇಶ ತಂಡ 10ನೇ ಸ್ಥಾನಕ್ಕೆ ಕುಸಿದಿದೆ. ವೆಸ್ಟ್‌ಇಂಡೀಸ್ ತಂಡವು 78 ರೇಟಿಂಗ್ ಪಾಯಿಂಟ್ಸ್ ನೊಂದಿಗೆ 9ನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಸದ್ಯ 6ನೇ ಹಾಗೂ 8ನೇ ಸ್ಥಾನದಲ್ಲಿವೆ. ಈ ಎರಡು ತಂಡಗಳು ಇತ್ತೀಚೆಗೆ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ್ದವು.
2023ರ ಏಕದಿನ ವಿಶ್ವಕಪ್ ಜಯಿಸಿದ್ದ ಆಸ್ಟ್ರೇಲಿಯವು 109 ರೇಟಿಂಗ್ ಪಾಯಿಂಟ್ಸ್ ನೊಂದಿಗೆ 3ನೇ ಸ್ಥಾನದಲ್ಲಿದೆ. ಭಾರತಕ್ಕಿಂತ 15 ಅಂಕ ಹಿಂದಿರುವ ಆಸ್ಟ್ರೇಲಿಯಕ್ಕೆ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಸದ್ಯ ನ್ಯೂಜಿಲ್ಯಾಂಡ್ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನವು ಆ.12ರಂದು ವಿಂಡೀಸ್ ವಿರುದ್ಧ ತನ್ನ 3ನೇ ಪಂದ್ಯವನ್ನು ಆಡಲಿದೆ. ಭಾರತ ತಂಡವು ಅಕ್ಟೋಬರ್ ನಲ್ಲಿ ತನ್ನ ಏಕದಿನ ಸರಣಿಯನ್ನು ಆಡಲಿದೆ. ಆಸ್ಟ್ರೇಲಿಯ ಪ್ರವಾಸದ ವೇಳೆ 3 ಪಂದ್ಯಗಳ ಸರಣಿಯನ್ನಾಡಲಿದೆ.
6 ವರ್ಷಗಳ ಬಳಿಕ ಗೆಲುವು
ಸೋಮವಾರ ನಡೆದ ಪಾಕಿಸ್ತಾನ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು 5 ವಿಕೆಟ್ ಅಂತರದಿಂದ ಮಣಿಸಿತು. ಇದು 6 ವರ್ಷದ ಬಳಿಕ ಪಾಕಿಸ್ತಾನ ವಿರುದ್ಧ ವಿಂಡೀಸ್‌ಗೆ ಒಲಿದ ಗೆಲುವಾಗಿದೆ.
ಕೆರಿಬಿಯನ್ ತಂಡವು ಕೊನೆಯ ಬಾರಿಗೆ 2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು. ಇದಾದ ಬಳಿಕ ಎರಡೂ ದೇಶಗಳು 2022ರಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಿದ್ದವು ಇದರಲ್ಲಿ ಪಾಕಿಸ್ತಾನವು ಕ್ಲೀನ್ ಸ್ವೀಪ್ ಮಾಡಿತ್ತು. ಪ್ರಸ್ತುತ ಸರಣಿಯ ಮೊದಲ ಪಂದ್ಯವನ್ನು ಸೋತ ನಂತರ, ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪ್ರವಾಸಿ ತಂಡದ ವಿರುದ್ಧ ಗೆಲುವಿನ ಸಾಧನೆಗೈದಿದೆ.
ಇದನ್ನೂ ಓದಿ ICC Rankings: ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಪ್ರಗತಿ ಸಾಧಿಸಿದ ಪಂತ್