ICC Rankings: ರ್ಯಾಂಕಿಂಗ್ನಲ್ಲಿ ಜೀವನಶ್ರೇಷ್ಠ ಪ್ರಗತಿ ಸಾಧಿಸಿದ ಪಂತ್
ಅವಳಿ ಶತಕ ಬಾರಿಸಿದ್ದ ಪಂತ್ ಒಂದು ಸ್ಥಾನದ ಏರಿಕೆ ಕಂಡು ಸದ್ಯ 801 ರೇಟಿಂಗ್ ಅಂಕ ಪಡೆದಿದ್ದಾರೆ. ಇದೇ ವೇಳೆ ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಶುಭಮನ್ ಗಿಲ್ 5 ಸ್ಥಾನಗಳ ಜಿಗಿತ ಕಂಡು 20ನೇ, ಕನ್ನಡಿಗ ಕೆ.ಎಲ್ ರಾಹುಲ್ 10 ಸ್ಥಾನ ಪ್ರಗತಿಯೊಂದಿಗೆ 38ನೇ ಸ್ಥಾನ ಪಡೆದಿದ್ದಾರೆ.


ದುಬೈ: ಲೀಡ್ಸ್ನಲ್ಲಿ ಮುಕ್ತಾಯ ಕಂಡ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ನ ಎರಡೂ ಇನಿಂಗ್ಸ್ನಲ್ಲಿ ಶತಕ ಬಾರಿಸಿ ಮಿಂಚಿದ್ದ ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್(Rishabh Pant) ಮತ್ತು ಶುಭಮನ್ ಗಿಲ್(Shubman Gill) ನೂತನ ಟೆಸ್ಟ್(ICC Rankings) ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ. ಪಂತ್ ಜೀವನಶ್ರೇಷ್ಠ 7ನೇ ಸ್ಥಾನ ಪಡೆದಿದ್ದಾರೆ. ಮೊದಲ ಇನಿಂಗ್ಸ್ನಲ್ಲಿ ಶತಕ ಬಾರಿಸಿದ್ದ ಯಶಸ್ವಿ ಜೈಸ್ವಾಲ್ 4ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಅವಳಿ ಶತಕ ಬಾರಿಸಿದ್ದ ಪಂತ್ ಒಂದು ಸ್ಥಾನದ ಏರಿಕೆ ಕಂಡು ಸದ್ಯ 801 ರೇಟಿಂಗ್ ಅಂಕ ಪಡೆದಿದ್ದಾರೆ. ಇದೇ ವೇಳೆ ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಶುಭಮನ್ ಗಿಲ್ 5 ಸ್ಥಾನಗಳ ಜಿಗಿತ ಕಂಡು 20ನೇ, ಕನ್ನಡಿಗ ಕೆ.ಎಲ್ ರಾಹುಲ್ 10 ಸ್ಥಾನ ಪ್ರಗತಿಯೊಂದಿಗೆ 38ನೇ ಸ್ಥಾನ ಪಡೆದಿದ್ದಾರೆ.
ಭಾರತೀಯ ಆಟಗಾರರು ಮಾತ್ರವಲ್ಲದೆ ಇಂಗ್ಲೆಂಡ್ ಆಟಗಾರರು ಕೂಡ ಶ್ರೇಯಾಂಕದಲ್ಲಿ ತಮ್ಮ ಸ್ಥಾನಗಳನ್ನು ವೃದ್ಧಿಸಿಕೊಂಡಿದ್ದಾರೆ. ಶತಕ ವೀರರಾದ ಬೆನ್ ಡಕೆಡ್(8) ಮತ್ತು ಓಲಿ ಪೋಪ್(19) ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಮುಶ್ಫಿಕರ್ ರಹೀಂ ಮತ್ತು ಶ್ರೀಲಂಕಾದ ಪಾಥುಮ್ ನಿಸ್ಸಂಕ ತಲಾ 21 ಸ್ಥಾನಗಳ ಏರಿಕೆಯೊಂದಿಗೆ ಕ್ರಮವಾಗಿ 28 ಮತ್ತು 31ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ನ ಜೋ ರೂಟ್ ಅಗ್ರಸ್ಥಾನದಲ್ಲೇ ಮುಂದುವರಿದರೆ, ಮತೋರ್ವ ಆಟಗಾರ ಹ್ಯಾರಿ ಬ್ರೂಕ್ ಕೂಡ ದ್ವಿತೀಯ ಸ್ಥಾನ ಉಳಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ನ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನ ಪಡೆದಿದ್ದಾರೆ.
ಅಗ್ರಸ್ಥಾನದಲ್ಲೇ ಮುಂದುವರಿದ ಬುಮ್ರಾ
ಬೌಲಿಂಗ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದರು. ಇದೇ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದ್ದ ರವೀಂದ್ರ ಜಡೇಜಾ ಮೂರು ಸ್ಥಾನಗಳ ನಷ್ಟದೊಂದಿಗೆ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಸದ್ಯ 706 ರೇಟಿಂಗ್ ಅಂಕದೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ ICC women’s ODI Rankings: ಬ್ಯಾಟಿಂಗ್ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನಕ್ಕೇರಿದ ಮಂಧನಾ
ಟಾಪ್-5 ಬ್ಯಾಟರ್
ಜೋ ರೂಟ್-(889)
ಹ್ಯಾರಿ ಬ್ರೂಕ್-(874)
ಕೇನ್ ವಿಲಿಯಮ್ಸನ್-(867)
ಯಶಸ್ವಿ ಜೈಸ್ವಾಲ್-(851)
ಸ್ಟೀವನ್ ಸ್ಮಿತ್- (824)
ಟಾಪ್-5 ಬೌಲರ್
ಜಸ್ಪ್ರೀತ್ ಬುಮ್ರಾ- (907)
ಕಗಿಸೊ ರಬಾಡ-(868)
ಪ್ಯಾಟ್ ಕಮಿನ್ಸ್-(847)
ನೋಮನ್ ಅಲಿ-(806)
ಜೋಶ್ ಹ್ಯಾಜಲ್ವುಡ್-(805)