Nat Sciver-Brunt: ಮಹಿಳಾ ಹಂಡ್ರೆಡ್ ಲೀಗ್‌ನಲ್ಲಿ ನೂತನ ದಾಖಲೆ ಬರೆದ ಇಂಗ್ಲೆಂಡ್ ನಾಯಕಿ
ರಾಕೆಟ್ಸ್ ಪರ, ಬ್ರಯೋನಿ ಸ್ಮಿತ್ ಆಕ್ರಮಣಕಾರಿಯಾಗಿ ಆಡಿದರು, 19 ಎಸೆತಗಳಲ್ಲಿ 29 ರನ್ ಗಳಿಸಿದರು. ಬ್ರಂಟ್ ತೀವ್ರವಾಗಿ ಹೋರಾಡಿದರೂ ಕೂಡ ರಾಕೆಟ್ಸ್ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಫೀನಿಕ್ಸ್ ಪರ ಹನ್ನಾ ಬೇಕರ್ ಮತ್ತು ಎಮಿಲಿ ಆರ್ಲಾಟ್ ತಲಾ ಎರಡು ವಿಕೆಟ್ ಪಡೆದರು.


ಲಂಡನ್: ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ನ್ಯಾಟ್ ಸ್ಕಿವರ್-ಬ್ರಂಟ್(Nat Sciver-Brunt) ದಿ ಹಂಡ್ರೆಡ್‌ನಲ್ಲಿ(The Hundred) 1,000 ರನ್‌ಗಳನ್ನು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 30 ಪಂದ್ಯಗಳಲ್ಲಿ 1,031 ರನ್‌ಗಳನ್ನು ಗಳಿಸಿದರು. ಟ್ರೆಂಟ್ ರಾಕೆಟ್ಸ್ ಅನ್ನು ಪ್ರತಿನಿಧಿಸುವ ಅವರು 49.09 ರ ಗಮನಾರ್ಹ ಬ್ಯಾಟಿಂಗ್ ಸರಾಸರಿ ಹೊಂದಿದಾರೆ.
ಆಗಸ್ಟ್ 8, ಶುಕ್ರವಾರ ರಾತ್ರಿ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ರಾಕೆಟ್ಸ್ ವಿರುದ್ಧದ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ಪಂದ್ಯದಲ್ಲಿ ಬ್ರಂಟ್ ಈ ಮೈಲಿಗಲ್ಲು ಸಾಧಿಸಿದರು. ಡ್ಯಾನಿ ವ್ಯಾಟ್ ಮತ್ತು ಲಾರಾ ವೋಲ್ವಾರ್ಡ್ಟ್ ಕ್ರಮವಾಗಿ 939 ಮತ್ತು 871 ರನ್ ಗಳಿಸಿ ಆ ನಂತರದ ಸ್ಥಾನದಲ್ಲಿದ್ದಾರೆ. ಈ ಲೀಗ್‌ನ ಪುರುಷರ ತಂಡದ ಪರ ಇದುವರೆಗೂ ಯಾರು ಸಾವಿರ ರನ್ ಪೂರೈಸಿಲ್ಲ. ಫಿಲ್ ಸಾಲ್ಟ್ 36 ಪಂದ್ಯಗಳಿಂದ 995 ರನ್ ಗಳಿಸಿದ್ದೇ ಅತ್ಯಈಕ ಸ್ಕೋರ್ ಆಗಿದೆ.
ಪಂದ್ಯದಲ್ಲಿ ಬ್ರಂಟ್ 40 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 64 ರನ್ ಗಳಿಸಿದರು. ಆದರೆ ರಾಕೆಟ್ಸ್ ತಂಡ 11 ರನ್‌ಗಳಿಂದ ಸೋತ ಕಾರಣ ಅವರ ಬ್ಯಾಟಿಂಗ್ ಹೋರಟ ವ್ಯರ್ಥವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಫೀನಿಕ್ಸ್ ಐದು ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿತು. ಎಮ್ಮಾ ಲ್ಯಾಂಬ್ 32 ಎಸೆತಗಳಲ್ಲಿ 55 ರನ್ ಗಳಿಸಿ ತಂಡದ ಮುನ್ನಡೆಗೆ ಕಾರಣರಾದರು ಮೇರಿ ಕೆಲ್ಲಿ 10 ಎಸೆತಗಳಲ್ಲಿ 23 ರನ್ ಗಳಿಸಿದರು. ರಾಕೆಟ್ಸ್ ಪರ, ಬ್ರಯೋನಿ ಸ್ಮಿತ್ ಆಕ್ರಮಣಕಾರಿಯಾಗಿ ಆಡಿದರು, 19 ಎಸೆತಗಳಲ್ಲಿ 29 ರನ್ ಗಳಿಸಿದರು. ಬ್ರಂಟ್ ತೀವ್ರವಾಗಿ ಹೋರಾಡಿದರೂ ಕೂಡ ರಾಕೆಟ್ಸ್ ಆರು ವಿಕೆಟ್ ನಷ್ಟಕ್ಕೆ 137 ರನ್ ಗಳಿಸಲಷ್ಟೇ ಶಕ್ತವಾಯಿತು. ಫೀನಿಕ್ಸ್ ಪರ ಹನ್ನಾ ಬೇಕರ್ ಮತ್ತು ಎಮಿಲಿ ಆರ್ಲಾಟ್ ತಲಾ ಎರಡು ವಿಕೆಟ್ ಪಡೆದರು.
ದಿ ಹಂಡ್ರೆಡ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ
ಸ್ಕಿವರ್-ಬ್ರಂಟ್- 1031 ರನ್
ಡ್ಯಾನಿ ವ್ಯಾಟ್-939 ರನ್
ಲಾರಾ ವೋಲ್ವಾರ್ಡ್-871 ರನ್
ಸೋಫಿಯಾ ಡಂಕ್ಲಿ-852 ರನ್
ಟಮ್ಮಿ ಬ್ಯೂಮಾಂಟ್-767 ರನ್
ಪುರುಷರ ದಿ ಹಂಡ್ರೆಡ್ ಅತಿ ಹೆಚ್ಚು ರನ್ ಗಳಿಸಿದವರು
ಫಿಲ್ ಸಾಲ್ಟ್- 995 ರನ್
ಜೇಮ್ಸ್ ಮೈಕೆಲ್ ವಿನ್ಸ್-986 ರನ್
ಬೆನ್ ಡಕೆಟ್-891 ರನ್
ಡೇವಿಡ್ ಮಲನ್-849 ರನ್
ವಿಲ್ ಜ್ಯಾಕ್ಸ್-814
ಇದನ್ನೂ ಓದಿ IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!