ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neeraj Chopra: ಡೈಮಂಡ್‌ ಲೀಗ್‌ ಫೈನಲ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

Diamond League 2025 final: ಆಗಸ್ಟ್ 22ರಂದು ನಡೆಯಲಿರುವ ಬ್ರಸೆಲ್ಸ್‌ ಆವೃತ್ತಿಯಲ್ಲಿಯೂ ಚೋಪ್ರಾ ಸ್ಪರ್ಧಿಸುವ ಖಚಿತತೆ ಇಲ್ಲ. 2022 ರಲ್ಲಿ ಡೈಮಂಡ್ ಲೀಗ್ ಗೆದ್ದಿರುವ ನೀರಜ್, ಇಲ್ಲಿಯವರೆಗೆ ಎರಡು ಹಂತಗಳಲ್ಲಿ ಸ್ಪರ್ಧಿಸಿದ್ದರು. ಮೇ ತಿಂಗಳಲ್ಲಿ ದೋಹಾ ಡಿಎಲ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ ಅವರು 90 ಮೀಟರ್ ಗಡಿಯನ್ನು ದಾಟಿದ್ದರು.

ಡೈಮಂಡ್‌ ಲೀಗ್‌ ಫೈನಲ್‌ಗೆ ಅರ್ಹತೆ ಪಡೆದ ನೀರಜ್‌ ಚೋಪ್ರಾ

Abhilash BC Abhilash BC Aug 18, 2025 10:30 AM

ನವದೆಹಲಿ: ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ(Neeraj Chopra), ಪೋಲೆಂಡ್‌ನ ಸಿಲೆಸಿಯಾದಲ್ಲಿ ಕಳೆದ ಶನಿವಾರ ನಡೆದ ಡೈಮಂಡ್‌ ಲೀಗ್‌ನಲ್ಲಿ ಭಾಗವಹಿಸದಿದ್ದರೂ, ಈ ತಿಂಗಳ ಅಂತ್ಯದಲ್ಲಿ ಸ್ವಿಟ್ಜರ್ಲೆಂಡ್‌ನ ಜೂರಿಚ್‌ನಲ್ಲಿ ನಡೆಯಲಿರುವ ಡೈಮಂಡ್‌ ಲೀಗ್‌ ಫೈನಲ್‌ಗೆ(Diamond League 2025 final) ಕ್ವಾಲಿಫೈ ಆಗಿದ್ದಾರೆ. ಲೀಗ್‌ನಲ್ಲಿ ಇದುವರೆಗೆ 15 ಅಂಕಗಳನ್ನು ಹೊಂದಿರುವ ಚೋಪ್ರಾ ಫೈನಲ್‌ನ ಆರು ಕ್ರೀಡಾಪಟುಗಳಲ್ಲಿ ಒಬ್ಬರಾಗಿ ಸ್ಥಾನ ಪಡೆದಿದ್ದಾರೆ.

ಡೈಮಂಡ್ ಲೀಗ್ ಅಂಕಪಟ್ಟಿಯಲ್ಲಿ ಚೋಪ್ರಾ ಪ್ರಸ್ತುತ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಿನಿಡಾಡ್‌–ಟೊಬ್ಯಾಗೊದ ಕೆಶೋರ್ನ್ ವಾಲ್‌ಕಾಟ್ ಅಗ್ರಸ್ಥಾನದಲ್ಲಿದ್ದರೆ, ಜರ್ಮನಿಯ ಜೂಲಿಯನ್ ವೆಬರ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಜುಲೈ 5 ರಂದು ಬೆಂಗಳೂರಿನಲ್ಲಿ ನಡೆದ NC ಕ್ಲಾಸಿಕ್‌ನಲ್ಲಿ ಚೋಪ್ರಾ 86.18 ಮೀಟರ್ ಎಸೆದು ಪ್ರಶಸ್ತಿಯನ್ನು ಗೆದ್ದಿದ್ದರು.

ಆಗಸ್ಟ್ 22ರಂದು ನಡೆಯಲಿರುವ ಬ್ರಸೆಲ್ಸ್‌ ಆವೃತ್ತಿಯಲ್ಲಿಯೂ ಚೋಪ್ರಾ ಸ್ಪರ್ಧಿಸುವ ಖಚಿತತೆ ಇಲ್ಲ. 2022 ರಲ್ಲಿ ಡೈಮಂಡ್ ಲೀಗ್ ಗೆದ್ದಿರುವ ನೀರಜ್, ಇಲ್ಲಿಯವರೆಗೆ ಎರಡು ಹಂತಗಳಲ್ಲಿ ಸ್ಪರ್ಧಿಸಿದ್ದರು. ಮೇ ತಿಂಗಳಲ್ಲಿ ದೋಹಾ ಡಿಎಲ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ ಅವರು 90 ಮೀಟರ್ ಗಡಿಯನ್ನು ದಾಟಿದರು. ಆದಾಗ್ಯೂ, ಅವರು ಎರಡನೇ ಸ್ಥಾನ ಪಡೆದರು. ನಂತರ ಚೋಪ್ರಾ ಜೂನ್‌ನಲ್ಲಿ 88.16 ಮೀಟರ್ ಎಸೆಯುವ ಮೂಲಕ ಪ್ಯಾರಿಸ್ ಡಿಎಲ್ ಪ್ರಶಸ್ತಿಯನ್ನು ಗೆದ್ದರು.