ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Neeraj Chopra: ಪ್ರಶಸ್ತಿ ಗೆದ್ದರೂ ಪ್ರದರ್ಶನ ತೃಪ್ತಿ ತಂದಿಲ್ಲ; ನೀರಜ್‌ ಬೇಸರ

ದಕ್ಷಿಣ ಆಫ್ರಿಕಾದ ಡೋವ್‌ ಸ್ಮಿತ್‌ 84.12 ಮೀಟರ್‌ನೊಂದಿಗೆ ಬೆಳ್ಳಿ, ಗ್ರೆನಡಾದ ಆ್ಯಂಡರ್‌ಸನ್‌ ಪೀಟರ್ಸ್‌ 83.63 ಮೀಟರ್‌ನೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡರು. ನೀರಜ್‌ ಈ ಹಿಂದಿನ ಎರಡು ಆವೃತ್ತಿಯಲ್ಲಿ ಸ್ಫರ್ಧಿಸುವ ಅವಕಾಶ ಪಡೆದಿದ್ದರೂ ಕೂಡ ಗಾಯದಿಂದ ಹಿಂದೆ ಸರಿದಿದ್ದರು. ಇದೀಗ ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದರು.

ಒಸ್ಟ್ರಾವಾ(ಚೆಕ್‌ ಗಣರಾಜ್ಯ): ಮಂಗಳವಾರ ರಾತ್ರಿ ಇಲ್ಲಿ ನಡೆದಿದ್ದ ಪ್ರತಿಷ್ಠಿತ ಗೋಲ್ಡನ್‌ ಸ್ಪೈಕ್‌ ಕೂಟದಲ್ಲಿ(Ostrava Golden Spike) ನೀರಜ್‌ ಚೋಪ್ರಾ(Neeraj Chopra) ಅವರು 85.29 ಮೀಟರ್‌ ಎಸೆತದೊಂದಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದರು. ಆದರೆ ಪ್ರಶಸ್ತಿ ಗೆದ್ದರೂ ಪ್ರದರ್ಶನ ತೃಪ್ತಿ ತಂದಿಲ್ಲ ಎಂದು ನೀರಜ್‌ ಹೇಳಿದ್ದಾರೆ.

ಗೆಲುವಿನ ಬಳಿಕ ಮಾತನಾಡಿದ ನೀರಜ್‌ "ನನ್ನ ಈ ಪ್ರದರ್ಶನದಿಂದ ನಾನು ಅಷ್ಟೊಂದು ಸಂತೋಷವಾಗಿಲ್ಲ, ಆದರೆ ನಾನು ಗೆದ್ದ ಟ್ರೋಫಿಯಿಂದ ನನಗೆ ತುಂಬಾ ಸಂತೋಷವಾಗಿದೆ. ನಾನು ಬಾಲ್ಯದಲ್ಲಿ ಈ ಟೂರ್ನಿಯನ್ನು ಬಹಳಷ್ಟು ನೋಡುತ್ತಿದ್ದೆ. ನನ್ನ ಕೋಚ್‌ ಜಾನ್ ಝೆಲೆಜ್ನಿ ಮತ್ತು ಉಸೇನ್ ಬೋಲ್ಟ್‌ರಂತಹ ಜನರು ಗೋಲ್ಡನ್ ಸ್ಪೈಕ್ ಗೆಲ್ಲುವುದನ್ನು ನಾನು ನೋಡುತ್ತಾ ಬೆಳೆದವನು. ಹೀಗಾಗಿ ನಾನು ಕೂಡ ಇಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದೆ. ಈಗ ಕನಸು ನನಸಾಗಿದೆ. ಆದರೆ ಉತ್ತಮ ಪ್ರದರ್ಶನ ನೀಡಿಲ್ಲ ಎನ್ನುವ ಬಗ್ಗೆ ನನಗೆ ಬೇಸರವಿದೆʼ ಎಂದರು.

ನೀರಜ್‌ 3ನೇ ಪ್ರಯತ್ನದಲ್ಲಿ 85.29 ಮೀಟರ್‌ ದೂರಕ್ಕೆ ಜಾವೆಲಿನ್ ಎಸೆದು ಅಗ್ರಸ್ಥಾನ ಪಡೆದುಕೊಂಡರು. ಮೊದಲ ಎಸೆತದಲ್ಲಿ ಫೌಲ್‌ ಮಾಡಿದ್ದ ನೀರಜ್‌, 2ನೇ ಪ್ರಯತ್ನದಲ್ಲಿ 83.45 ಮೀ. ದಾಖಲಿಸಿದರು. 4 ಮತ್ತು 5ನೇ ಪ್ರಯತ್ನದಲ್ಲಿ ಕ್ರಮವಾಗಿ 82.17 ಮೀ. ಹಾಗೂ 81.01 ಮೀ. ಎಸೆದ ಅವರ 6ನೇ ಎಸೆತ ಫೌಲ್‌ ಆಯಿತು.