ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

2026ರ ಮಹಿಳಾ ಟಿ 20 ವಿಶ್ವಕಪ್ ಅರ್ಹತಾ ಪಂದ್ಯಕ್ಕೆ ನೇಪಾಳ ಆತಿಥ್ಯ

2026 ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ವೇಳಾಪಟ್ಟಿಯನ್ನು ಈಗಾಗಲೇ ದೃಢಪಡಿಸಲಾಗಿದೆ. ಪಂದ್ಯಾವಳಿ ಜೂನ್ 12 ರಿಂದ ಜುಲೈ 5, 2026 ರವರೆಗೆ ನಡೆಯಲಿದ್ದು, ಓಲ್ಡ್ ಟ್ರಾಫರ್ಡ್, ಹೆಡಿಂಗ್ಲೆ, ಹ್ಯಾಂಪ್‌ಶೈರ್ ಬೌಲ್ ಮತ್ತು ಬ್ರಿಸ್ಟಲ್ ಕೌಂಟಿ ಮೈದಾನ ಸೇರಿದಂತೆ ಏಳು ಸ್ಥಳಗಳಲ್ಲಿ 24 ದಿನಗಳಲ್ಲಿ 33 ಪಂದ್ಯಗಳನ್ನು ಒಳಗೊಂಡಿರುತ್ತದೆ. ಫೈನಲ್ ಪಂದ್ಯವು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ದುಬೈ: ಮುಂದಿನ ವರ್ಷ ಜನವರಿ 12 ರಿಂದ ಫೆಬ್ರವರಿ 16 ರವರೆಗೆ ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026 ಅರ್ಹತಾ(Women’s T20 World Cup 2026 Qualifier) ಸುತ್ತಿನ ಪಂದ್ಯಾವಳಿಗೆ ನೇಪಾಳ(Nepal) ಆತಿಥ್ಯ ವಹಿಸಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯಲಿರುವ ಮುಖ್ಯ ಕ್ರೀಡಾಕೂಟದಲ್ಲಿ ಹತ್ತು ತಂಡಗಳು ನಾಲ್ಕು ಸ್ಥಾನಗಳಿಗಾಗಿ ಸ್ಪರ್ಧಿಸಲಿವೆ.

ಬಾಂಗ್ಲಾದೇಶ ಮತ್ತು ಐರ್ಲೆಂಡ್ ತಂಡಗಳು ಐಸಿಸಿ ಮಹಿಳಾ ಟಿ20 ವಿಶ್ವಕಪ್ 2024 ರಲ್ಲಿ ಭಾಗವಹಿಸುವ ಮೂಲಕ ಅರ್ಹತಾ ಸುತ್ತಿಗೆ ನೇರ ಪ್ರವೇಶ ಪಡೆದಿವೆ. ಥೈಲ್ಯಾಂಡ್ ಮತ್ತು ನೇಪಾಳ ಏಷ್ಯಾ ಪ್ರಾದೇಶಿಕ ಪಂದ್ಯದ ಮೂಲಕ ತಮ್ಮ ಸ್ಥಾನಗಳನ್ನು ಗಳಿಸಿದೆ. ಉಳಿದ ಐದು ಸ್ಥಾನಗಳನ್ನು ಪ್ರಾದೇಶಿಕ ಅರ್ಹತಾ ಪಂದ್ಯಗಳ ಮೂಲಕ ನಿರ್ಧರಿಸಲಾಗುತ್ತದೆ. ಆಫ್ರಿಕಾ ಮತ್ತು ಯುರೋಪ್‌ನಿಂದ ತಲಾ ಎರಡು ತಂಡಗಳು ಮತ್ತು ಪೂರ್ವ ಏಷ್ಯಾ-ಪೆಸಿಫಿಕ್ ಪ್ರದೇಶದಿಂದ ಒಂದು ತಂಡಗಳು ಆಯ್ಕೆಯಾಗುತ್ತೆ.

ನೇಪಾಳದಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಐದು ತಂಡಗಳ ಎರಡು ಗುಂಪುಗಳು, ನಂತರ ಸೂಪರ್ ಸಿಕ್ಸ್ ಹಂತ ಮತ್ತು ಫೈನಲ್ ಪಂದ್ಯ ನಡೆಯಲಿದೆ. ಸಂಪೂರ್ಣ ಪಂದ್ಯಗಳ ಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಏತನ್ಮಧ್ಯೆ, 2026 ರ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ವೇಳಾಪಟ್ಟಿಯನ್ನು ಈಗಾಗಲೇ ದೃಢಪಡಿಸಲಾಗಿದೆ. ಪಂದ್ಯಾವಳಿ ಜೂನ್ 12 ರಿಂದ ಜುಲೈ 5, 2026 ರವರೆಗೆ ನಡೆಯಲಿದ್ದು, ಓಲ್ಡ್ ಟ್ರಾಫರ್ಡ್, ಹೆಡಿಂಗ್ಲೆ, ಹ್ಯಾಂಪ್‌ಶೈರ್ ಬೌಲ್ ಮತ್ತು ಬ್ರಿಸ್ಟಲ್ ಕೌಂಟಿ ಮೈದಾನ ಸೇರಿದಂತೆ ಏಳು ಸ್ಥಳಗಳಲ್ಲಿ 24 ದಿನಗಳಲ್ಲಿ 33 ಪಂದ್ಯಗಳನ್ನು ಒಳಗೊಂಡಿರುತ್ತದೆ. ಫೈನಲ್ ಪಂದ್ಯವು ಲಾರ್ಡ್ಸ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ IND vs ENG Weather Report: ಮೊದಲ ದಿನವೇ ಭಾರೀ ಮಳೆ ಭೀತಿ