ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG Weather Report: ಮೊದಲ ದಿನವೇ ಭಾರೀ ಮಳೆ ಭೀತಿ

4ನೇ ಟೆಸ್ಟ್‌ನ ಕೊನೆ 2 ದಿನ ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಹೊರತಾಗಿಯೂ ಇಂಗ್ಲೆಂಡ್‌ ತುಂಬು ಆತ್ಮವಿಶ್ವಾಸದೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ಬೆನ್‌ ಸ್ಟೋಕ್ಸ್‌ರ ಅಲಭ್ಯತೆ ತಂಡಕ್ಕೆ ಕಾಡಬಹುದು. ಬ್ಯಾಟಿಂಗ್‌ನಲ್ಲಿ 304 ರನ್‌ ಕಲೆಹಾಕಿರುವ ಸ್ಟೋಕ್ಸ್‌, 17 ವಿಕೆಟ್‌ ಕೂಡಾ ಪಡೆದಿದ್ದಾರೆ.

ಓವಲ್‌ ಟೆಸ್ಟ್‌ನ ಮೊದಲ ದಿನವೇ ಭಾರೀ ಮಳೆ ಭೀತಿ

Profile Abhilash BC Jul 31, 2025 11:54 AM

ಲಂಡನ್‌: ಭಾರತ ತಂಡ ಇಂದಿನಿಂದ ಲಂಡನ್‌ನ ಓವಲ್‌ನಲ್ಲಿ(Oval) ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಐದನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ(IND vs ENG 5th Test) ಆತಿಥೇಯ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಸರಣಿ ಸೋಲಿನಿಂದ ಪಾರಾಗಲು ಶುಭಮನ್ ಗಿಲ್ ನೇತೃತ್ವದ ಟೀಂ ಇಂಡಿಯಾಗೆ ಈ ಪಂದ್ಯ ಗೆಲ್ಲಲೇ ಬೇಕು. ಗೆದ್ದರೆ 2-2 ಅಂತರದಲ್ಲಿ ಸರಣಿಯನ್ನು ಸಮಬಲಗೊಳಿಸಿದ ಸಾಧನೆ ಮಾಡಲಿದೆ. ಆದರೆ ಪಂದ್ಯಕ್ಕೆ ಮಳೆ(IND vs ENG Weather Report) ಭೀತಿಯೂ ಎದುರಾಗಿದೆ.

ಪಂದ್ಯದ ಆರಂಭಿಕ ದಿನದಂದು ಮಳೆಯಾಗುವ ಸಾಧ್ಯತೆ ಅಧಿಕ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಪಂದ್ಯ ವಿಳಂಬವಾಗಿ ಆರಂಭವಾಗುವ ಸಾಧ್ಯತೆ ಇದೆ. ಅಕ್ಯೂವೆದರ್ ಪ್ರಕಾರ, ಸ್ಥಳೀಯ ಸಮಯ ಮಧ್ಯಾಹ್ನ 2 ಗಂಟೆಯ ವೇಳೆಗೆ ಮಳೆಯಾಗುವ ಸಾಧ್ಯತೆ ಶೇಕಡಾ 50 ರಷ್ಟು ಇರಲಿದೆ. ಶೇಕಡಾ 85 ರಷ್ಟು ಮೋಡ ಕವಿದ ವಾತಾವರಣವೂ ಇರುತ್ತದೆ ಎಂದು ಹೇಳಿದೆ. ಸರಣಿಯಲ್ಲಿ ಇಂಗ್ಲೆಂಡ್ ಇನ್ನೂ ಮುನ್ನಡೆ ಕಾಯ್ದುಕೊಂಡಿರುವುದರಿಂದ, ಮಳೆಯಿಂದ ಪಂದ್ಯ ಡ್ರಾ ಗೊಂಡರೆ ಭಾರತಕ್ಕೆ ಸರಣಿ ಸೋಲು ಎದುರಾಗಲಿದೆ.

ಓವಲ್‌ ಕ್ರೀಡಾಂಗಣ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತದ ಪಂದ್ಯಗಳಿಗೆ ಹೆಸರುವಾಸಿ. ಮೊದಲ 3 ದಿನ ವೇಗದ ಬೌಲರ್‌ಗಳು ಮೇಲುಗೈ ಸಾಧಿಸಲಿದ್ದು, ಕೊನೆ ದಿನ ಸ್ಪಿನ್ನರ್‌ಗಳಿಗೆ ನೆರವಾಗಬಹುದು. ಭಾರತ ಕುಲ್‌ದೀಪ್‌ ಯಾದವ್‌ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.

4ನೇ ಟೆಸ್ಟ್‌ನ ಕೊನೆ 2 ದಿನ ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ನೀಡಿದ್ದ ಹೊರತಾಗಿಯೂ ಇಂಗ್ಲೆಂಡ್‌ ತುಂಬು ಆತ್ಮವಿಶ್ವಾಸದೊಂದಿಗೆ ಈ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಆದರೆ ಬೆನ್‌ ಸ್ಟೋಕ್ಸ್‌ರ ಅಲಭ್ಯತೆ ತಂಡಕ್ಕೆ ಕಾಡಬಹುದು. ಬ್ಯಾಟಿಂಗ್‌ನಲ್ಲಿ 304 ರನ್‌ ಕಲೆಹಾಕಿರುವ ಸ್ಟೋಕ್ಸ್‌, 17 ವಿಕೆಟ್‌ ಕೂಡಾ ಪಡೆದಿದ್ದಾರೆ. ಉಳಿದಂತೆ ಯುವ ಆಲ್ರೌಂಡರ್‌ ಜೇಕಬ್‌ ಬೆಥೆಲ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಇದನ್ನೂ ಓದಿ IND vs ENG 5th Test: ಭಾರತ ಪರ 4 ಬದಲಾವಣೆ ಸಾಧ್ಯತೆ; ಕರುಣ್‌ಗೆ ಮತ್ತೊಂದು ಅವಕಾಶ