ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

NC Classic javelin event: ನೀರಜ್ ಚೋಪ್ರಾ ಆಹ್ವಾನ ನಿರಾಕರಿಸಿದ ಪಾಕ್‌ನ ಅರ್ಷದ್‌ ನದೀಂ

ಮೂಲ ವೇಳಾಪಟ್ಟಿಯಂತೆ ಈ ಟೂರ್ನಿ ಪಂಚಕುಲದಲ್ಲಿ ನಡೆಯಬೇಕಿತ್ತು. ಆದರೆ ಪಂಚಕುಲದ ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಸ್ಪರ್ಧೆಗೆ ವಿಶ್ವ ಅಥ್ಲೆಟಿಕ್ಸ್‌ನಿಂದ ‘ಎ’ ಕೆಟಗರಿ ಸ್ಥಾನಮಾನ ದೊರೆಕಿದೆ.

ನೀರಜ್ ಚೋಪ್ರಾ ಆಹ್ವಾನ ನಿರಾಕರಿಸಿದ ಪಾಕ್‌ನ ಅರ್ಷದ್‌ ನದೀಂ

Profile Abhilash BC Apr 24, 2025 1:38 PM

ನವದೆಹಲಿ: ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ಎನ್‌ಸಿ ಕ್ಲಾಸಿಕ್‌ ಜಾವೆಲಿನ್(NC Classic javelin event) ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕ, ಭಾರತದ ಜಾವೆಲಿನ್ ತಾರೆ ನೀರಜ್‌ ಚೋಪ್ರಾ(Neeraj Chopra) ನೀಡಿದ ಆಹ್ವಾನವನ್ನು ಪ್ಯಾರಿಸ್‌ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ, ಪಾಕಿಸ್ತಾನದ ಅರ್ಷದ್ ನದೀಮ್(Arshad Nadeem) ನಿರಾಕರಿಸಿದ್ದಾರೆ. ಏಷ್ಯನ್ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಾಗಿ ಸಿದ್ಧತೆ ನಡೆಸುವ ಸಲುವಾಗಿ ತಮಗೆ ಭಾಗವಹಿಸಲು ಆಗುತ್ತಿಲ್ಲ ಎಂದು ನದೀಮ್ ಹೇಳಿದ್ದಾರೆ. ತಮ್ಮನ್ನು ಈ ಕೂಟಕ್ಕೆ ಆಹ್ವಾನಿಸಿದ್ದಕ್ಕೆ ಅವರು ನೀರಜ್‌ಗೆ ಕೃತಜ್ಞರಾಗಿರುವುದಾಗಿಯೂ ತಿಳಿಸಿದ್ದಾರೆ.

ಮೇ 27 ರಿಂದ 31ರವರೆಗೆ ನಡೆಯಲಿರುವ ಏಷ್ಯನ್ ಚಾಂಪಿಯನ್‌ಷಿಪ್‌ಗಾಗಿ ನಾನು ಕಠಿಣ ಶ್ರಮ ಹಾಕುತ್ತಿದ್ದೇನೆ. ಹೀಗಾಗಿ ಮೇ 24ರಂದು ಬೆಂಗಳೂರಿನಲ್ಲಿ ನಡೆಯುವ ನೀರಜ್ ಚೋಪ್ರಾ ಕ್ಲಾಸಿಕ್‌ ಸ್ಪರ್ಧೆಯಲ್ಲಿ ಪಾಲ್ಗೊಳಲು ಸಾಧ್ಯವಿಲ್ಲ ಎಂದು ನದೀಮ್ ತಿಳಿಸಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚು ವಿಜೇತ ಗ್ರೆನೆಡಾದ ಪೀಟರ್ಸ್, ಜರ್ಮನಿಯ ರೋಹ್ಲರ್, ರಿಯೊ ಒಲಿಂಪಿಕ್ಸ್‌ ಬೆಳ್ಳಿ ವಿಜೇತ ಕೆನ್ಯಾದ ಜೂಲಿಯಸ್ ಯೆಗೊ ಮತ್ತು ಅಮೆರಿಕದ ಕರ್ಟಿಸ್ ಥಾಂಪ್ಸನ್ ಅವರು ಕೂಟದಲ್ಲಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿದ್ದಾರೆ.

ಮೂಲ ವೇಳಾಪಟ್ಟಿಯಂತೆ ಈ ಟೂರ್ನಿ ಪಂಚಕುಲದಲ್ಲಿ ನಡೆಯಬೇಕಿತ್ತು. ಆದರೆ ಪಂಚಕುಲದ ತಾವೂ ದೇವಿಲಾಲ್ ಕ್ರೀಡಾಂಗಣದಲ್ಲಿ ನೇರಪ್ರಸಾರಕ್ಕೆ ಸಾಕಷ್ಟು ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಈ ಸ್ಪರ್ಧೆಗೆ ವಿಶ್ವ ಅಥ್ಲೆಟಿಕ್ಸ್‌ನಿಂದ ‘ಎ’ ಕೆಟಗರಿ ಸ್ಥಾನಮಾನ ದೊರೆಕಿದೆ.

ಇದನ್ನೂ ಓದಿ Neeraj Chopra: ವಿಶ್ವ ಅಥ್ಲೆಟಿಕ್ ಮ್ಯೂಸಿಯಂ ಸೇರಿದ ನೀರಜ್‌ ಚೋಪ್ರಾ ಒಲಿಂಪಿಕ್ಸ್‌ ಜೆರ್ಸಿ

ಕಂಠೀರವ ಕ್ರೀಡಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಜೆಎಸ್‌ಡಬ್ಲ್ಯೂ ತಂಡವು ಕೂಟವನ್ನು ಯಶಸ್ವಿಯಾಗಿ ಆಯೋಜಿಸಲು ಸಜ್ಜಾಗಿದೆ. ಇದು ಟೋಕಿಯೊದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗೆ ಅರ್ಹತೆ ಪಡೆಯಲು ಉತ್ತಮ ವೇದಿಕೆಯಾಗಿದೆ. ಭಾರತದಲ್ಲಿ ವಿಶ್ವ ಮಟ್ಟದ ಆಟಗಾರರೊಂದಿಗೆ ನೀರಜ್‌ ಕಣಕ್ಕಿಳಿಯುತ್ತಿರುವ ಮೊದಲ ಟೂರ್ನಿ ಇದಾಗಿರುವ ಕಾರಣ ಅವರ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.