ಬೆಂಗಳೂರು: ಕಳೆದ ಒಂದು ದಶಕದಿಂದ ಗ್ಯಾಲಂಟ್ ಸ್ಪೋರ್ಟ್ಸ್ (Gallant Sports) ಭಾರತದಾದ್ಯಾಂತ ಉನ್ನತ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ ನಿರ್ಮಾಣದಲ್ಲಿ ಪ್ರಸಿದ್ಧಿಯಾಗಿದೆ. ಶಾಲೆಗಳು, ಕಂಪನಿಗಳು ಮತ್ತು ಸಂಸ್ಥೆಗಳಿಗೆ ವಿಶ್ವಮಟ್ಟದ ಸೌಲಭ್ಯಗಳನ್ನು ನಿರ್ಮಿಸುವುದು, ದೈರ್ಯಶೀಲವಾದ ಫ್ಲರಿಂಗ್ ಸಿಸ್ಟಂಗಳನ್ನು ಅಳವಡಿಸುವುದರಲ್ಲಿ ಗ್ಯಾಲಂಟ್ ಸ್ಪೋರ್ಟ್ಸ್ ಮುಂಚೂಣಿಯಲ್ಲಿದೆ. ಇದೀಗ ಗ್ಯಾಲಂಟ್ ಸ್ಪೋರ್ಟ್ಸ್ ತನ್ನ ಮುಂದಿನ ಬೆಳವಣಿಗೆ ಹಂತಕ್ಕೆ ಹೆಜ್ಜೆ ಇಟ್ಟು, ‘ಗ್ಯಾಲಂಟ್ ಪಾರ್ಟ್ನರ್’ (Gallant Partner) ಅನ್ನು ಪ್ರಾರಂಭಿಸಿದೆ. ಇದು ಡೀಲರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು ಮತ್ತು ರಿಸೇಲರ್‌ಗಳಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ವಿತರಣೆ ಪ್ಲಾಟ್‌ಫಾರ್ಮ್ ಆಗಿದ್ದು, ಪಾರ್ಟ್ನರ್‌ಗಳಿಗೆ ವೃದ್ಧಿಯ ಹೊಸ ದಾರಿಯನ್ನು ತೆರೆಯಲಿದೆ.
ಗ್ಯಾಲಂಟ್ ಪಾರ್ಟ್ನರ್ ಪ್ಲಾಟ್‌ಫಾರ್ಮ್ ಮೂಲಕ ಪಾರ್ಟ್ನರ್‌ಗಳಿಗೆ ದೊರೆಯುವ ಪ್ರಮುಖ ಪ್ರಯೋಜನಗಳು
- ಪಾರ್ಟ್ನರ್‌ಗಳಿಗೆ ವಿಶೇಷ wholesale ಬೆಲೆ
- ನಿರ್ಧಾರ ತೆಗೆದುಕೊಳ್ಳುವಿಕೆ ಸುಲಭಗೊಳಿಸುವ ಸಂಪೂರ್ಣ ಉತ್ಪನ್ನ ಮಾಹಿತಿ
- 24/7 ಸಹಾಯ ಮತ್ತು ನಿರಂತರ ಬೆಂಬಲ ವ್ಯವಸ್ಥೆ
- ಪಾರದರ್ಶಕ, ಪಾರ್ಟ್ನರ್-ಪ್ರಥಮ ದೃಷ್ಟಿಕೋನದಿಂದ ವಿಶ್ವಸಾರ್ಹತೆ ಮತ್ತು ದೀರ್ಘಕಾಲಿಕ ಮೌಲ್ಯ ನಿರ್ಮಾಣ
Subroto Cup (U-15): ಫೈನಲ್‌ಗೇರಿದ ಮಿನರ್ವಾ ಪಬ್ಲಿಕ್ ಸ್ಕೂಲ್-ವಿದ್ಯಾಚಲ್ ಇಂಟರ್ ನ್ಯಾಷನಲ್ ಸ್ಕೂಲ್!
ಈ ಪ್ರಾರಂಭವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಿಕೊಳ್ಳಲು, ಗ್ಯಾಲಂಟ್ ಸ್ಪೋರ್ಟ್ಸ್ ತನ್ನ ಕ್ರೀಡಾ ಫ್ಲೋರಿಂಗ್ ಮತ್ತು ಟರ್ಫ್ ಪರಿಹಾರಗಳ ವಿಸ್ತೃತ ಶ್ರೇಣಿಯನ್ನು ಪರಿಚಯಿಸಿದೆ. ಪಾರ್ಟ್ನರ್‌ಗಳಿಗೆ ವಿಶೇಷ ಪ್ರಾರಂಭಿಕ ಬೆಲೆಗೆ ಈ ಹೊಸ ಉತ್ಪನ್ನ ಶ್ರೇಣಿ ಲಭ್ಯವಾಗಿದೆ.
ಹೊಸ ಉತ್ಪನ್ನ ಶ್ರೇಣಿಯಲ್ಲಿ
- ಪ್ರೀ-ಫ್ಯಾಬ್ರಿಕೇಟೆಡ್ ರಬ್ಬರ್ ಫ್ಲೋರಿಂಗ್‌ಗಳು: 6mm, 8mm, 13mm ಆಯ್ಕೆಗಳು
- ಶಾಕ್ ಪ್ಯಾಡ್‌ಗಳು: 5mm ಅಂಡರ್‌ಲೆ, 10mm ಜಿಯೋ ಟೆಕ್ಸ್ಟೈಲ್ ಜೊತೆಗೆ, 20mm
- ಕೃತಕ ಟರ್ಫ್: X-Play, 35mm ಲ್ಯಾಂಡ್‌ಸ್ಕೇಪ್ ಟರ್ಫ್, 45mm ಲ್ಯಾಂಡ್‌ಸ್ಕೇಪ್ ಟರ್ಫ್, Libra 50mm
- PVC ವಿನೈಲ್ ಫ್ಲೋರಿಂಗ್‌ಗಳು: ಗ್ಯಾಲಂಟ್ ಬಾಲ್, ಗ್ಯಾಲಂಟ್ ಶಟ್ಲ್
Asia Cup 2025: ಯುಎಇ ವಿರುದ್ದದ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ XI ಆರಿಸಿದ ಕೆ ಶ್ರೀಕಾಂತ್!
ಈ ಸಂದರ್ಭದಲ್ಲಿ ಗ್ಯಾಲಂಟ್ ಸ್ಪೋರ್ಟ್ಸ್ ಮತ್ತು ಇನ್‌ಫ್ರಾನ ಸಂಸ್ಥಾಪಕ ಮತ್ತು ಸಿಇಒ ನಸೀರ್ ಅಲಿ ಅವರು ಮಾತನಾಡಿ, ‘ಗ್ಯಾಲಂಟ್ ಪಾರ್ಟ್ನರ್’ ಮೂಲಕ, ನಾವು ನಮ್ಮ ಪಾರ್ಟ್ನರ್‌ಗಳನ್ನು ಕೇವಲ ರಿಸೇಲರ್‌ಗಳೆಂದು ಮಾತ್ರವಲ್ಲ, ವೃದ್ಧಿ ಸಹಭಾಗಿಗಳೆಂದು ಪರಿಗಣಿಸುತ್ತಿದ್ದೇವೆ. ವಿಶೇಷ ಬೆಲೆ, ಹೊಸ ಉತ್ಪನ್ನಗಳು ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಒದಗಿಸುವ ಮೂಲಕ, ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಪಾರ್ಟ್ನರ್‌ಗಳು ನಮ್ಮ ಜೊತೆಗೆ ವೃದ್ಧಿಯಾಗಲು ಸಜ್ಜಾಗಿಸುತ್ತಿದ್ದೇವೆ ಎಂದರು.