2026ರ ಏಷ್ಯಾ ಕ್ರೀಡಾಕೂಟಕ್ಕೆ ಕಾಲಿಡಲು ಯೋಗಾಸನ ಸಜ್ಜು!
ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಯೋಗಾಸನವು ಪ್ರದರ್ಶನ ಕ್ರೀಡೆಯಾಗಿ ಪದಾರ್ಪಣೆ ಮಾಡಲಿದೆ ಎಂದು ಏಷ್ಯನ್ ಯೋಗಾಸನದ ಪ್ರಧಾನ ಕಾರ್ಯದರ್ಶಿ ಉಮಂಗ್ ಡಾನ್ ತಿಳಿಸಿದ್ದಾರೆ. 'ಯೋಗಾಸನವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಪ್ರದರ್ಶನ ಕ್ರೀಡೆಗಳ ಪಟ್ಟಿಗೆ ಸೇರಿಸುವುದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಏಷ್ಯಾ ಕ್ರೀಡಾಕೂಟಕ್ಕೆ ಯೋಗಾಸನವನ್ನು ಸೇರಿಸಲು ಸಿದ್ದತೆ ನಡೆಯುತ್ತಿದೆ. -

ನವದೆಹಲಿ: ಒಂದು ವರ್ಷದೊಳಗೆ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಯೋಗಾಸನವು ಪ್ರದರ್ಶನ ಕ್ರೀಡೆಯಾಗಿ ಪದಾರ್ಪಣೆ ಮಾಡಲಿದೆ. ಈ ಬಗ್ಗೆ ಮಾತನಾಡಿದ ಏಷ್ಯನ್ ಯೋಗಾಸನದ ಪ್ರಧಾನ ಕಾರ್ಯದರ್ಶಿ ಉಮಂಗ್ ಡಾನ್ 'ಯೋಗಾಸನವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಪ್ರದರ್ಶನ ಕ್ರೀಡೆಗಳ ಪಟ್ಟಿಗೆ ಸೇರಿಸುವುದು ದೊಡ್ಡ ಹೆಜ್ಜೆಯಾಗಿದೆ. ಒಮ್ಮೆ ಯೋಗಾಸನವು ಕೋರ್ ಕ್ರೀಡೆಗಳ ವಿಭಾಗಕ್ಕೆ ಸೇರಿದರೆ, ಅದು ಏಷ್ಯನ್ ಬೀಚ್ ಗೇಮ್ಸ್ ಹಾಗೂ ಏಷ್ಯನ್ ಇಂಡೋರ್ ಗೇಮ್ಸ್ ಮುಂತಾದ ಬಹು-ಕ್ರೀಡಾಕೂಟಗಳಲ್ಲಿ ಸೇರಿಕೊಳ್ಳುವ ಅವಕಾಶವು ಕೂಡ ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.
ಏಷ್ಯನ್ ಯೋಗಾಸನವು ಸ್ಪಷ್ಟ ರಚನೆಯೊಂದಿಗೆ ಚೊಚ್ಚಲ ಪಂದ್ಯಕ್ಕೆ ಅಡಿಪಾಯ ಹಾಕುತ್ತಿದೆ. "ಏಷ್ಯನ್ ಚಾಂಪಿಯನ್‌ಶಿಪ್‌ನ ಎಲ್ಲಾ ಚಿನ್ನದ ಪದಕ ವಿಜೇತರನ್ನು ಪ್ರದರ್ಶನ ಕಾರ್ಯಕ್ರಮಕ್ಕೆ ಪರಿಗಣಿಸಲಾಗುತ್ತಿದ್ದು, 20 ದೇಶಗಳಿಂದ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ದೇಶಕ್ಕೆ ಇಬ್ಬರು ಕ್ರೀಡಾಪಟುಗಳಂತೆ ಏಷ್ಯಾದಾದ್ಯಂತ ನಿಯೋಗಗಳನ್ನು ಕರೆತರುವುದು ನಮ್ಮ ಗುರಿಯಾಗಿದೆ," ಎಂದು ಉಮಂಗ್ ಡಾನ್ ವಿವರಿಸಿದ್ದಾರೆ.
China Masters: ಫೈನಲ್‌ನಲ್ಲಿ ಭಾರತದ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಗೆ ಆಘಾತ!
ಸೌದಿ ಅರೇಬಿಯಾ ಹಾಗೂ ನೇಪಾಳದಂತಹ ದೇಶಗಳಲ್ಲಿ ಯೋಗಾಸನ ಈಗ ಅಧಿಕೃತವಾಗಿ ಮಾನ್ಯತೆ ಪಡೆದಿದೆ. ಭಾರತದಲ್ಲಿ ಕಳೆದ ಆರು ವರ್ಷಗಳಲ್ಲಿ ಇದು ಹಂತ ಹಂತವಾಗಿ ಬೆಳೆಯುತ್ತಿದೆ. ಶಾಲೆಗಳು, ವಿಶ್ವವಿದ್ಯಾಲಯಗಳು, ಪೊಲೀಸ್ ಹಾಗೂ ರಕ್ಷಣಾ ಪಡೆಗಳಲ್ಲಿಯೂ ವ್ಯಾಪಿಸಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳು ಶಕ್ತಿಕೇಂದ್ರಗಳಾಗಿದ್ದು, ತ್ರಿಪುರಾ ಮುಂತಾದ ಪ್ರದೇಶಗಳು ಶಾಲಾ ಮಟ್ಟದಲ್ಲೇ ತಮ್ಮ ಗುರುತು ಮೂಡಿಸುತ್ತಿದೆ.
ಸೆ 29 ರಂದು 30ನೇ ಫೆನೆಸ್ಟಾ ಓಪನ್ ನ್ಯಾಷನಲ್ ಟೆನಿಸ್ ಚಾಂಪಿಯನ್‌ಶಿಪ್ ಆರಂಭ!
ಭವಿಷ್ಯದ ಬಗ್ಗೆ ಮಾತನಾಡಿದ ಉಮಂಗ್ ಡಾನ್ 'ಯೋಗಾಸನ ಲೀಗ್ ಮಾದರಿ ಕ್ರೀಡೆಯ ಜನಪ್ರಿಯತೆಯನ್ನು ಹೆಚ್ಚಿಸಬಲ್ಲದು. ಚಾಂಪಿಯನ್‌ಶಿಪ್‌ಗಳಲ್ಲಿ ನಿಯಮಗಳು ಕಟ್ಟುನಿಟ್ಟಾಗಿರುವುದರಿಂದ ಸೃಜನಶೀಲತೆಗೆ ಅವಕಾಶ ಕಡಿಮೆ. ಆದರೆ ಲೀಗ್‌ಗಳಲ್ಲಿ ಕಲಾತ್ಮಕ ಅಂಶಗಳು, ಪ್ರಾಪ್ಸ್‌ಗಳ ಬಳಕೆ ಇತ್ಯಾದಿಗಳನ್ನು ಸೇರಿಸಿ ಪ್ರೇಕ್ಷಕರಿಗೆ ಹೆಚ್ಚು ಮನರಂಜನೆಯ ಅನುಭವ ನೀಡಬಹುದು. ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಗುರಿ ಅಲ್ಲ, ಯೋಗಾಸನವನ್ನು ಆಟಗಾರರು, ಪ್ರೇಕ್ಷಕರು ಮತ್ತು ಜಾಗತಿಕ ವೇದಿಕೆಯಿಗಾಗಿ ರೂಪಿಸುವುದೇ ನಮ್ಮ ಉದ್ದೇಶ ನಮ್ಮ ಉದ್ದೇಶವಾಗಿದೆ ಎಂದರು.