Asia Cup 2025: ಏಷ್ಯಾ ಕಪ್ ನಡೆಯದಿದ್ದರೆ ಪಾಕ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಸಭೆಯನ್ನು ಢಾಕಾದಲ್ಲಿ ನಡೆಸಿದರೆ ಅದನ್ನು ಬಹಿಷ್ಕರಿಸಲು ಬಿಸಿಸಿಐ ನಿರ್ಧರಿಸಿದೆ. ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳೂ ಭಾರತದ ಈ ನಡೆಯನ್ನು ಬೆಂಬಲಿಸಿದೆ. ಜುಲೈ 24 ರಂದು ಬಾಂಗ್ಲಾದೇಶದ ರಾಜಧಾನಿಯಲ್ಲಿ ಎಸಿಸಿ ಸಭೆ ನಿಗದಿಯಾಗಿದೆ.


ನವದೆಹಲಿ: ಈ ಬಾರಿಯ ಏಷ್ಯಾ ಕಪ್ ಕ್ರಿಕೆಟ್(Asia Cup 2025) ಕೂಟ ನಡೆಯುವುದು ಅನುಮಾನ ಎನ್ನಲಾಗಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಸಭೆಯನ್ನು ಬಿಸಿಸಿಐ(BCC) ಬಹಿಷ್ಕರಿಸಿದ ಕಾರಣ ಏಷ್ಯಾಕಪ್ ಅನಿಶ್ಚಿತೆಯಲ್ಲಿದೆ. ಒಂದೊಮ್ಮೆ ಟೂರ್ನಿ ರದ್ದುಗೊಂಡರೆ ಈಗಾಗಲೇ ಆರ್ಥಿಕ ಸಂಷ್ಟದಲ್ಲಿರುವ ಪಾಕಿಸ್ತಾನಕ್ಕೆ ಇನ್ನಷ್ಟು ಹೊಡೆತ ಬೀಳಲಿದೆ. ಪಾಕಿಸ್ತಾನ(Pakistan) ಬರೋಬ್ಬರಿ 35 ಕೋಟಿ ರೂ.(ಪಾಕಿಸ್ತಾನದ116 ಕೋಟಿ ರೂ.) ಕಳೆದುಕೊಳ್ಳಲಿದೆ.
ಭಾರತ-ಪಾಕ್ ಸಂಘರ್ಷದ ಹಿನ್ನೆಲೆಯಲ್ಲಿ ಪಾಕ್ ವಿರುದ್ಧದ ಎಸಿಸಿ ಮತ್ತು ಐಸಿಸಿ ಪಂದ್ಯಗಳಿಂದ ಭಾರತ ಹಿಂದೆ ಸರಿಯುವ ಭೀತಿಯೂ ಇರುವುದರಿಂದ ಪಾಕ್ ಕ್ರಿಕೆಟ್ ಮಂಡಳಿಗೆ ದೊಡ್ಡ ಮಟ್ಟದ ಆದಾಯ ನಷ್ಟ ಆಗಲಿದೆ. ಪಿಸಿಬಿ ಹಾಲಿ ವರ್ಷದಲ್ಲಿ ಐಸಿಸಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಆದಾಯದಿಂದ ಸುಮಾರು 265 ಕೋಟಿ ರೂ.(ಪಾಕ್‌ನ 880 ಕೋಟಿ ರೂ.) ಪಾಲು ನಿರೀಕ್ಷಿಸಿತ್ತು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಸಭೆಯನ್ನು ಢಾಕಾದಲ್ಲಿ ನಡೆಸಿದರೆ ಅದನ್ನು ಬಹಿಷ್ಕರಿಸಲು ಬಿಸಿಸಿಐ ನಿರ್ಧರಿಸಿದೆ. ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳೂ ಭಾರತದ ಈ ನಡೆಯನ್ನು ಬೆಂಬಲಿಸಿದೆ. ಜುಲೈ 24 ರಂದು ಬಾಂಗ್ಲಾದೇಶದ ರಾಜಧಾನಿಯಲ್ಲಿ ಎಸಿಸಿ ಸಭೆ ನಡೆಯಲಿದೆ.
ಇದನ್ನೂ ಓದಿ Asia Cup 2025: ಎಸಿಸಿ ಸಭೆ ಬಹಿಷ್ಕರಿಸಿದ ಬಿಸಿಸಿಐ; ಅನಿಶ್ಚಿತತೆಯಲ್ಲಿ ಏಷ್ಯಾಕಪ್
ಎಸಿಸಿಯ ಮುಖ್ಯಸ್ಥರಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರಿಗೆ ಬಿಸಿಸಿಐ ಈಗಾಗಲೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದೆ. ಒಂದು ವೇಳೆ ಎಸಿಸಿ ಸಭೆಯನ್ನು ಢಾಕಾದಲ್ಲಿ ನಡೆಸಿದರೆ, ತಾವು ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಸಭೆಗೆ ಕೇವಲ ಒಂದು ದಿನ ಬಾಕಿಯಿದ್ದು, ಸ್ಥಳ ಬದಲಾವಣೆಯ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಮಾಡಿಲ್ಲ.