ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R Ashwin: ಬಿಗ್ ಬ್ಯಾಷ್ ಲೀಗ್‌ ಆಡಲು ಮುಂದಾದ ಆರ್‌. ಅಶ್ವಿನ್‌

"ಅಶ್ವಿನ್ ಅವರಂತಹ ಅರ್ಹತೆ ಹೊಂದಿರುವ ಆಟಗಾರರನ್ನು ಬಿಬಿಎಲ್‌ಗೆ ಕರೆತರುವುದು ಹಲವು ಹಂತಗಳಲ್ಲಿ ಉತ್ತಮವಾಗಿರುತ್ತದೆ. ಅವರು ಚಾಂಪಿಯನ್ ಕ್ರಿಕೆಟಿಗ" ಎಂದು ಗ್ರೀನ್‌ಬರ್ಗ್ ಕ್ರಿಕ್‌ಬಜ್‌ಗೆ ತಿಳಿಸಿದರು. ಯುಎಇ ಇಂಟರ್‌ನ್ಯಾಷನಲ್‌ ಲೀಗ್‌ ಟಿ20(ಐಎಲ್‌ಟಿ20)ನಲ್ಲಿಯೂ ಅಶ್ವಿನ್‌ ಆಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಚೆನ್ನೈ: ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ನಿವೃತ್ತಿ ಘೋಷಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್(R Ashwin) ಅವರು ಆಸ್ಟ್ರೇಲಿಯಾದ ಪ್ರಮುಖ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL) ನಲ್ಲಿ ಆಡುವ ಸಾಧ್ಯತೆ ಇದೆ. ಒಂದೊಮ್ಮೆ ಅವರು ಆಡಿದರೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ.

ಕ್ರಿಕ್‌ಬಜ್‌ನ ವರದಿಯ ಪ್ರಕಾರ, ಅನುಭವಿ ಆಫ್ ಸ್ಪಿನ್ನರ್ ಅಶ್ವಿನ್, ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಿಇಒ ಟಾಡ್ ಗ್ರೀನ್‌ಬರ್ಗ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಅಶ್ವಿನ್ ಈ ಹಿಂದೆ ಜಾಗತಿಕ ಟಿ 20 ಲೀಗ್‌ಗಳಲ್ಲಿ ಅವಕಾಶಗಳನ್ನು ಅನ್ವೇಷಿಸುವ ಬಗ್ಗೆ ಸುಳಿವು ನೀಡಿದ್ದರು.

"ಅಶ್ವಿನ್ ಅವರಂತಹ ಅರ್ಹತೆ ಹೊಂದಿರುವ ಆಟಗಾರರನ್ನು ಬಿಬಿಎಲ್‌ಗೆ ಕರೆತರುವುದು ಹಲವು ಹಂತಗಳಲ್ಲಿ ಉತ್ತಮವಾಗಿರುತ್ತದೆ. ಅವರು ಚಾಂಪಿಯನ್ ಕ್ರಿಕೆಟಿಗ" ಎಂದು ಗ್ರೀನ್‌ಬರ್ಗ್ ಕ್ರಿಕ್‌ಬಜ್‌ಗೆ ತಿಳಿಸಿದರು. ಯುಎಇ ಇಂಟರ್‌ನ್ಯಾಷನಲ್‌ ಲೀಗ್‌ ಟಿ20(ಐಎಲ್‌ಟಿ20)ನಲ್ಲಿಯೂ ಅಶ್ವಿನ್‌ ಆಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಕೇರಂ ಬಾಲ್ ತಜ್ಞ ಎಂದೇ ಕರೆಯಲಾಗುವ ಅಶ್ವಿನ್‌ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದಿದ್ದ ಆಸೀಸ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ಈ ಹಠಾತ್ ಘೋಷಣೆ ಹಲವರಲ್ಲಿ ಆಘಾತ, ಇನ್ನೂ ಕೆಲವರಲ್ಲಿ ಅಚ್ಚರಿ ಮೂಡಿಸಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ 2ನೇ ಅತೀ ಹೆಚ್ಚು ವಿಕೆಟ್‌ ಉರುಳಿಸಿದ ಸಾಧನೆ ಅಶ್ವಿನ್‌ (537) ಹೆಸರಿನಲ್ಲಿದೆ. ದಾಖಲೆ ಅನಿಲ್‌ ಕುಂಬ್ಳೆ ಹೆಸರಲ್ಲಿದೆ (619). ವಿಶ್ವದ ಬೌಲಿಂಗ್‌ ಸಾಧಕರ ಯಾದಿಯಲ್ಲಿ ಅಶ್ವಿನ್‌ಗೆ 7ನೇ ಸ್ಥಾನ.

ಇದನ್ನೂ ಓದಿ ʻಪಿಚ್‌ ಮೇಲೆ ಪ್ರಪೋಸ್‌ ಮಾಡಿದ್ದೆʼ: ತಮ್ಮ ಲವ್‌ ಸ್ಟೋರಿಯನ್ನು ರಿವೀಲ್‌ ಮಾಡಿದ ಆರ್‌ ಅಶ್ವಿನ್‌!

ಒಟ್ಟಾರೆಯಾಗಿ, ಅಶ್ವಿನ್‌ 220 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ, 30.22 ರ ಸರಾಸರಿಯಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ, ಅವರ ಅತ್ಯುತ್ತಮ 4/34. ಬ್ಯಾಟಿಂಗ್‌ನಲ್ಲಿ, ಅವರು 833 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಗರಿಷ್ಠ 50 ರನ್‌ಗಳು ಮತ್ತು 13.02 ಸರಾಸರಿಯಿದೆ.