ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohit Sharma: ಸಚಿನ್‌ ಬಳಿಕ ಆಸೀಸ್‌ ವಿರುದ್ಧ ವಿಶೇಷ ದಾಖಲೆ ಬರೆದ ರೋಹಿತ್‌

ಏಕದಿನ ಕ್ರಿಕೆಟ್‌ನಲ್ಲಿ ಸಿಡ್ನಿಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿ ಏಷ್ಯಾದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ರೋಹಿತ್‌ ಪಾಲಾಯಿತು. ಒಂದು ಸಿಕ್ಸರ್‌ ಬಾರಿಸುವ ಮೂಲಕ ಅವರು ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಜಯಸೂರ್ಯ ಜತೆ ಜಂಟಿ ದಾಖಲೆ ಹೊಂದಿದ್ದರು. ಸದ್ಯ ರೋಹಿತ್‌ 10*ಸಿಕ್ಸರ್‌ ಬಾರಿಸಿದ್ದಾರೆ.

ಸಿಡ್ನಿ: ಟೀಮ್‌ ಇಂಡಿಯಾದ ಮಾಜಿ ನಾಯಕ ರೋಹಿತ್‌ ಶರ್ಮ(Rohit Sharma) ಅವರು ಆಸ್ಟ್ರೇಲಿಯಾ ವಿರುದ್ಧ 2,500 ಏಕದಿನ ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್(Sachin Tendulkar) 71 ಪಂದ್ಯಗಳಲ್ಲಿ ಒಂಬತ್ತು ಶತಕ ಮತ್ತು 15 ಅರ್ಧಶತಕ ಸೇರಿದಂತೆ 3,077 ರನ್ ಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್ ಆಸ್ಟ್ರೇಲಿಯಾ ವಿರುದ್ಧದ ಕೇವಲ 49 ನೇ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.

ಇದು ಮಾತ್ರವಲ್ಲದೆ ರೋಹಿತ್ ಮತ್ತೊಂದು ಮೈಲಿಗಲ್ಲು ಸಾಧಿಸುವ ಮೂಲಕ ಏಕದಿನ ಪಂದ್ಯಗಳಲ್ಲಿ 100 ಕ್ಯಾಚ್‌ಗಳನ್ನು ಪಡೆದ 6ನೇಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿರಾಟ್ ಕೊಹ್ಲಿ (163), ಮೊಹಮ್ಮದ್ ಅಜರುದ್ದೀನ್ (156), ಸಚಿನ್ ತೆಂಡೂಲ್ಕರ್ (140), ರಾಹುಲ್ ದ್ರಾವಿಡ್ (124), ಮತ್ತು ಸುರೇಶ್ ರೈನಾ (102) ಮೊದಲ ಐವರು.

ಏಕದಿನ ಕ್ರಿಕೆಟ್‌ನಲ್ಲಿ ಸಿಡ್ನಿಯಲ್ಲಿ ಅತ್ಯಧಿಕ ಸಿಕ್ಸರ್‌ ಬಾರಿಸಿ ಏಷ್ಯಾದ ಮೊದಲ ಬ್ಯಾಟರ್‌ ಎಂಬ ದಾಖಲೆಯೂ ರೋಹಿತ್‌ ಪಾಲಾಯಿತು. ಒಂದು ಸಿಕ್ಸರ್‌ ಬಾರಿಸುವ ಮೂಲಕ ಅವರು ಕೀರ್ತಿಗೆ ಭಾಜನರಾದರು. ಇದಕ್ಕೂ ಮುನ್ನ ಜಯಸೂರ್ಯ ಜತೆ ಜಂಟಿ ದಾಖಲೆ ಹೊಂದಿದ್ದರು. ಸದ್ಯ ರೋಹಿತ್‌ 10*ಸಿಕ್ಸರ್‌ ಬಾರಿಸಿದ್ದಾರೆ.



ಇದನ್ನೂ ಓದಿ ಇಂದೋರ್‌ನಲ್ಲಿ ಆಸ್ಟ್ರೇಲಿಯಾದ ಇಬ್ಬರು ಕ್ರಿಕೆಟಿಗರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ

ಅಶ್ವಿನ್‌ ದಾಖಲೆ ಸರಿಗಟ್ಟಿದ ರಾಣಾ

ಸಿಡ್ನಿ ಪಂದ್ಯದಲ್ಲಿ 4 ವಿಕೆಟ್‌ ಕೀಳುವ ಮೂಲಕ ವೇಗಿ ಹರ್ಷಿತ್‌ ರಾಣಾ ಅವರು ಮಾಜಿ ಆಟಗಾರ ಆರ್‌ ಅಶ್ವಿನ್‌ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಮೊದಲ 8 ಏಕದಿನ ಪಂದ್ಯಗಳ ನಂತರ ಭಾರತ ಪರ ಅತಿ ಹೆಚ್ಚು ವಿಕೆಟ್‌ ಕಿತ್ತ ಮೂರನೇ ಬೌಲರ್‌ ಎನಿಸಿಕೊಂಡಿದ್ದಾರೆ. 16 ವಿಕೆಟ್‌ ಪಡೆದಿದ್ದಾರೆ. ದಾಖಲೆ ಅಜಿತ್‌ ಅಗರ್ಕರ್‌ ಹೆಸರಿನಲ್ಲಿದೆ. ಅವರು 19 ವಿಕೆಟ್‌ ಉರುಳಿಸಿದ್ದಾರೆ.