ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohit Sharma: ಕ್ಯಾಚ್‌ ಮೂಲಕ ದಾಖಲೆ ಬರೆದ ರೋಹಿತ್‌ ಶರ್ಮ

Rohit Completes 100 ODI catches: ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ, ಹರ್ಷಿತ್‌ ರಾಣಾ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 236ರನ್‌ಗೆ ಆಲೌಟ್‌ ಆಯಿತು. ಮೊಹಮ್ಮದ್‌ ಸಿರಾಜ್‌, ಅಪಾಯಕಾರಿ ಟ್ರಾವಿಸ್‌ ಹೆಡ್‌(29) ವಿಕೆಟ್‌ ಕೀಳುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ(IND vs AUS 3rd ODI) ಪಂದ್ಯದಲ್ಲಿ ಎರಡು ಕ್ಯಾಚ್‌ಗಳನ್ನು ಹಿಡಿದ ರೋಹಿತ್‌ ಶರ್ಮ(Rohit Sharma), ಈ ಕ್ಯಾಚ್‌ಗಳ ಮೂಲಕ ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಫೀಲ್ಡರ್‌ ಆಗಿ ಭಾರತ ಪರ 100 ಕ್ಯಾಚ್‌ಗಳನ್ನು ಪೂರ್ತಿಗೊಳಿಸಿದರು. ಈ ಸಾಧನೆಗೈದ 6ನೇ ಭಾರತೀಯ ಎನಿಸಿಕೊಂಡರು. ಅತ್ಯಧಿಕ ಕ್ಯಾಚ್‌ ದಾಖಲೆ ವಿರಾಟ್‌ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 163 ಕ್ಯಾಚ್‌ ಹಿಡಿದಿದ್ದಾರೆ.

ಭಾರತ ಪರ ಫೀಲ್ಡರ್ ಆಗಿ 100+ ಕ್ಯಾಚ್‌ಗಳು (ODI)

ವಿರಾಟ್‌ ಕೊಹ್ಲಿ-163*

ಮೊಹಮ್ಮದ್‌ ಅಜರುದ್ದೀನ್-156

ಸಚಿನ್‌ ತೆಂಡೂಲ್ಕರ್-140

ರಾಹುಲ್‌ ದ್ರಾವಿಡ್-124

ಸುರೇಶ್‌ ರೈನಾ-102

ರೋಹಿತ್ ಶರ್ಮಾ-100*

ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆಸ್ಟ್ರೇಲಿಯಾ, ಹರ್ಷಿತ್‌ ರಾಣಾ ಘಾತಕ ಬೌಲಿಂಗ್‌ ದಾಳಿಗೆ ತತ್ತರಿಸಿ 46.4 ಓವರ್‌ಗಳಲ್ಲಿ 236ರನ್‌ಗೆ ಆಲೌಟ್‌ ಆಯಿತು. ಮೊಹಮ್ಮದ್‌ ಸಿರಾಜ್‌, ಅಪಾಯಕಾರಿ ಟ್ರಾವಿಸ್‌ ಹೆಡ್‌(29) ವಿಕೆಟ್‌ ಕೀಳುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆ ಬಳಿಕ ಸ್ಪಿನ್ನರ್‌ಗಳಾದ ಅಕ್ಷರ್‌ ಪಟೇಲ್‌ ಮತ್ತು ವಾಷಿಂಗ್ಟನ್‌ ಸುಂದರ್‌ ತಮ್ಮ ಸ್ಪಿನ್‌ ಕೈಚಳಕ ತೋರುವ ಮೂಲಕ ಆಸೀಸ್‌ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದರು.



ಕಳೆದ ಎರಡು ಪಂದ್ಯಗಳಲ್ಲಿ ನಿರೀಕ್ಷಿತ ಬೌಲಿಂಗ್‌ ನಡೆಸುವಲ್ಲಿ ವಿಫಲವಾಗಿದ್ದ ಕಾರಣ ಭಾರೀ ಟೀಕೆಗೆ ಒಳಗಾಗಿದ್ದ ವೇಗಿ ಹರ್ಷೀತ್‌ ರಾಣಾ ಅವರು ಈ ಪಂದ್ಯದಲ್ಲಿ 39 ರನ್‌ಗೆ 4 ವಿಕೆಟ್‌ ಕಿತ್ತು ಎಲ್ಲ ಟೀಕೆಗೆ ಉತ್ತರ ನೀಡಿದರು.

ಇದನ್ನೂ ಓದಿ Nitish Reddy: ನಿತೀಶ್ ರೆಡ್ಡಿಗೆ ಮತ್ತೆ ಗಾಯ; ಟಿ20 ಸರಣಿಗೆ ಅನುಮಾನ

ಗಾಯಾಳು ನಿತೀಶ್‌ ಕುಮಾರ್‌ ರೆಡ್ಡಿ ಬದಲು ಆಡಲಿಳಿದ ಕುಲ್‌ದೀಪ್‌ ಯಾದವ್‌ ನಿರೀಕ್ಷಿತ ಬೌಲಿಂಗ್‌ ನಡೆಸಲು ವಿಫಲರಾದರು. 50 ರನ್‌ ನೀಡಿ ಕೇವಲ ಒಂದು ವಿಕೆಟ್‌ ಮಾತ್ರ ಪಡೆದರು. ಪ್ರಸಿದ್ಧ್‌ ಕೃಷ್ಣ ಕೂಡ ದುಬಾರಿಯಾದರು. ಒಂದು ಕ್ಯಾಚ್‌ ಕೂಡ ಕೈಚೆಲ್ಲಿದರು. ಆಸೀಸ್‌ ಪರ ಮ್ಯಾಟ್ ರೆನ್ಶಾ ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಅವರು 56 ರನ್‌ ಗಳಿಸಿದರು.