ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ಸ್ಯಾಮ್ಸನ್‌ ಉಳಿಸಿಕೊಳ್ಳಲು ರಾಜಸ್ಥಾನ್‌ ರಾಯಲ್ಸ್‌ ನಿರ್ಧಾರ

2025ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ಗಾಯದ ಕಾರಣದಿಂದ ಹಲವು ಪಂದ್ಯಗಳನ್ನು ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಯಾನ್‌ ಪರಾಗ್‌ ಉಸ್ತುವಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಸಂಜು ಆಡಿದ್ದ 9 ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು ಒಟ್ಟಾರೆ ಅವರು 285 ರನ್‌ ಗಳಿಸಿದ್ದರು.

ಸ್ಯಾಮ್ಸನ್‌ ಉಳಿಸಿಕೊಳ್ಳಲು ರಾಜಸ್ಥಾನ್‌ ರಾಯಲ್ಸ್‌ ನಿರ್ಧಾರ

Abhilash BC Abhilash BC Aug 6, 2025 3:45 PM

ಮುಂಬೈ: ಸಂಜು ಸ್ಯಾಮ್ಸನ್‌(Sanju Samson) ಅವರು 2026ರ ಐಪಿಎಲ್‌ಗೂ(IPL 2026) ಮೊದಲು ರಾಜಸ್ಥಾನ್‌ ರಾಯಲ್ಸ್‌(Rajasthan Royals) ತಂಡವನ್ನು ತೊರೆದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಜತೆ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಒಂದು ತಿಂಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಇದೀಗ ಈ ವದಂತಿಗಳಿಗೆ ಬ್ರೇಕ್‌ ಬಿದ್ದಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು ಬಿಟ್ಟು ಯಾವುದೇ ಹೊಸ ಫ್ರಾಂಚೈಸಿಯನ್ನು ಸೇರುತ್ತಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

"ಆರ್‌ಆರ್ ತಂಡವು ಸ್ಯಾಮ್ಸನ್ ಅಥವಾ ಅವರ ಯಾವುದೇ ಆಟಗಾರರನ್ನು ಸದ್ಯಕ್ಕೆ ಟ್ರೇಡ್‌ ವಿಂಡೋ ನಿಯಮದ ಪ್ರಕಾರ ವಿನಿಮಯ ಮಾಡಿಕೊಳ್ಳದಿರಲು ನಿರ್ಧರಿಸಿದೆ. ಸ್ಯಾಮ್ಸನ್ ರಾಯಲ್ಸ್ ತಂಡದ ಪ್ರಮುಖ ಭಾಗವಾಗಿದ್ದು, ತಂಡದ ನಾಯಕರಾಗಿದ್ದಾರೆ" ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ.



2025ರ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್‌ ಗಾಯದ ಕಾರಣದಿಂದ ಹಲವು ಪಂದ್ಯಗಳನ್ನು ಆಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ ರಿಯಾನ್‌ ಪರಾಗ್‌ ಉಸ್ತುವಾರಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಸಂಜು ಆಡಿದ್ದ 9 ಪಂದ್ಯಗಳಲ್ಲಿ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫಲರಾಗಿದ್ದರು ಒಟ್ಟಾರೆ ಅವರು 285 ರನ್‌ ಗಳಿಸಿದ್ದರು.

ಇದನ್ನೂ ಓದಿ ICC Test Rankings: ಜೀವನಶ್ರೇಷ್ಠ 15ನೇ ಸ್ಥಾನಕ್ಕೆ ಜಿಗಿದ ಸಿರಾಜ್‌, ಜೈಸ್ವಾಲ್‌ ಕೂಡ ಪ್ರಗತಿ

2021 ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕನಾಗಿ ಆಯ್ಕೆಯಾದ ಸಂಜು 2022ರಲ್ಲಿ ತಂಡವನ್ನು ಫೈನಲ್‌ಗೇರಿಸಿದ್ದರು. ಸ್ಯಾಮ್ಸನ್ ನೇತೃತ್ವದಲ್ಲಿ ರಾಯಲ್ಸ್ 33 ಪಂದ್ಯಗಳಲ್ಲಿ ಜಯಗಳಿಸಿದೆ ಮತ್ತು 32 ಪಂದ್ಯಗಳಲ್ಲಿ ಸೋತಿದೆ. ರಾಜಸ್ಥಾನ್‌ ಪರ ಸಂಜು 4027 ರನ್ ಗಳಿಸಿದ್ದಾರೆ.