ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kabaddi: ಕಬಡ್ಡಿ ಜಿಲ್ಲಾಮಟ್ಟಕ್ಕೆ ಆಯ್ಕೆ

ನಗರದ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆ ಯಲ್ಲಿ, ಕಬಡ್ಡಿ ವಿಭಾಗ ದಲ್ಲಿ, ನಗರದ ಶ್ರೀ ವಿವೇಕಾನಂದ ಶಾಲೆಯ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ

ಗೌರಿಬಿದನೂರು: ನಗರದ ನೇತಾಜಿ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾ ಸ್ಪರ್ಧೆ ಯಲ್ಲಿ, ಕಬಡ್ಡಿ ವಿಭಾಗದಲ್ಲಿ, ನಗರದ ಶ್ರೀ ವಿವೇಕಾನಂದ ಶಾಲೆಯ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಹಂತಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀ ವಿವೇಕಾನಂದ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಸಿಎನ್. ನಂಜೇಗೌಡ ಅವರು ಜಿಲ್ಲಾ ಹಂತಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಾ, ನಮ್ಮ ಶಾಲೆಯ ಕಬಡ್ಡಿ ತಂಡದ ಕ್ರೀಡಾಪಟುಗಳು ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ಜಿಲ್ಲಾ ಹಂತಕ್ಕೆ ಆಯ್ಕೆಯಾಗಿ ನಮ್ಮ ಶಾಲೆಗೆ ಹೆಸರು ತಂದಿದ್ದಾರೆ,ಮುಂದೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

ಇದನ್ನೂ ಓದಿ: Pro Kabaddi: ಟೈ ಬ್ರೇಕರ್‌ನಲ್ಲಿ ಪಲ್ಟಿ ಹೊಡೆದ ಬುಲ್ಸ್‌; ಪುಣೆಗೆ ರೋಚಕ ಗೆಲುವು

ಈ ಸಂಧರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಹನುಮಂತರಾಯಪ್ಪ , ಮುಖ್ಯ ಶಿಕ್ಷಕರಾದ ಯಶೋಧ, ಅಂತರಾಷ್ಟ್ರೀಯ ತೀರ್ಪುಗಾರರಾದ ವೈ .ಕೆ. ಪ್ರಕಾಶ್ ತೀರ್ಪುಗಾರರಾದ, ಮಾರುತೇಶ್, ಅಂಜಿನಪ್ಪ, ದಿನೇಶ್, ವಿವೇಕಾನಂದ ಶಾಲೆಯ ಸಂಯೋಜಕರಾದ ,ವರದರಾಜ ದೈಹಿಕ ಶಿಕ್ಷಕರಾದ ರಾಮ್ ಪ್ರಸಾದ್ ಅನಿತಾ ,ಶಾಲಾ ವ್ಯವಸ್ಥಾಪಕರಾದ ಅನು,ಕೋಚ್ ಗಳಾದ ಗಿರೀಶ್ ನಾಯಕ್, ಭರತ್, ಪವನ್ ಕುಮಾರ್ ಶಿಕ್ಷಕ ವೃಂದದವರು, ವಿಜೇತರಾದಂತಹ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ ಅನು, ಭರತ್, ಗಿರೀಶ್ ನಾಯಕ್ ಮತ್ತು ಪವನ್ ಅವರಿಗೆ ಕೃತಜ್ಞತೆಗಳನ್ನು ತಿಳಿಸಿ ಅಭಿನಂದಿಸಿದರು.