ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shreyas Iyer: ತಾಯಿಯ ಗೂಗ್ಲಿ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆದ ಶ್ರೇಯಸ್‌ ಅಯ್ಯರ್‌

ಶ್ರೇಯಸ್‌ ಅಯ್ಯರ್‌ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದರು. ಪಂಜಾಬ್‌ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ 6 ರನ್‌ ಅಂತರದಿಂದ ಸೋತು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿತ್ತು.

ಮುಂಬಯಿ: ಭಾರತದ ಸ್ಟಾರ್ ಕ್ರಿಕೆಟಿಗ ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ತಮ್ಮ ಮನೆಯಲ್ಲಿ ತಾಯಿಯೊಂದಿಗೆ(Shreyas Iyer Mother Bowling) ಕಳೆದ ಸುಂದರ ಕ್ಷಣದ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕರ್ತವ್ಯದಿಂದ ದೂರವಿರುವ ಶ್ರೇಯಸ್, ತಮ್ಮ ಮನೆಯೊಳಗೆ ತಾಯಿ ಜತೆ ಕ್ರಿಕೆಟ್ ಆಡುತ್ತಾ ಎಂಜಾಯ್‌ ಮಾಡಿದ್ದಾರೆ. ತಾಯಿ ಮತ್ತು ಮಗನ ಕ್ರಿಕೆಟ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral videos) ಆಗಿದೆ.

ಶ್ರೇಯಸ್‌ ಅವರ ತಾಯಿ ರೋಹಿಣಿ ಅಯ್ಯರ್‌ ಅವರು ಮನೆಯ ಪೇಸೆಜ್‌ನಲ್ಲಿ ಮಗನಿಗೆ ಬೌಲಿಂಗ್‌ ಮಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ತಾಯಿ ಎಸೆದ ಎಸೆತವೊಂದನ್ನು ಶ್ರೇಯಸ್‌ ತಪ್ಪಿಸಿಕೊಳ್ಳುತ್ತಾರೆ. ಈ ವೇಳೆ ತಾಯಿ ಸಂಭ್ರಮಿಸುವ ವಿಡಿಯೊವನ್ನು ಅಯ್ಯರ್‌ ಹಂಚಿಕೊಂಡಿದ್ದಾರೆ. ಇದೇ ವಿಡಿಯೊವನ್ನು ಪಂಜಾಬ್ ಕಿಂಗ್ಸ್ ಕೂಡ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಹಾಸ್ಯಮಯ ಕಾಮೆಂಟ್ ಮಾಡಿದೆ.



ಈ ವಿಡಿಯೊ ಕಂಡ ನೆಟ್ಟಿಗರೊಬ್ಬರು ʼಒಂದು ಬೌನ್ಸರ್ ಮತ್ತು ನಂತರ ಒಂದು ಯಾರ್ಕರ್, ನಿಮಗೆ ವಿಕೆಟ್ ಸಿಗುತ್ತದೆʼ ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು "ಅವರು(ಶ್ರೇಯಸ್‌ ತಾಯಿ) ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿದಾರಾ? ಎಂದು ಜುಲೈ 2 ರಿಂದ ಪ್ರಾರಂಭವಾಗುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದ್ದಾರೆ.

ಶ್ರೇಯಸ್‌ ಅಯ್ಯರ್‌ ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ನಾಯಕನಾಗಿದ್ದರು. ಪಂಜಾಬ್‌ ತಂಡ ಫೈನಲ್‌ನಲ್ಲಿ ಆರ್‌ಸಿಬಿ ವಿರುದ್ಧ 6 ರನ್‌ ಅಂತರದಿಂದ ಸೋತು ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ಅವಕಾಶ ಕಳೆದುಕೊಂಡಿತ್ತು.

ಇತ್ತೀಚೆಗಷ್ಟೇ ಅಯ್ಯರ್‌ ಕುರಿತು ಬಾಲಿವುಡ್​​ ನಟಿ ಎಡಿನ್‌ ರೋಸ್ ನೀಡಿದ್ದ ಅಚ್ಚರಿಯ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಎಡಿನ್ ರೋಸ್, ನನ್ನ ಮನಸ್ಸಿನಲ್ಲಿ, ನಾನು ಈಗಾಗಲೇ ಶ್ರೇಯಸ್ ಅಯ್ಯರ್​ರನ್ನು ಮದುವೆಯಾಗಿದ್ದೇನೆ. ನಾನು ಅವರ ಮಕ್ಕಳ ತಾಯಿ ಎಂದು ನಂಬಿದ್ದೇನೆ. ನಾನು ಅವರನ್ನು ಇಷ್ಟಪಡಲು ಬಲವಾದ ಕಾರಣಗಳಿವೆ. ಶ್ರೇಯಸ್​ಗೆ ಒಳ್ಳೆಯ ಎತ್ತರ ಮತ್ತು ಅವರಿಗೆ ಉತ್ತಮ ಮೈಬಣ್ಣವಿದೆ. ಅವರು ಯಾವಾಗಲೂ ಗಡ್ಡ ಬಿಡುತ್ತಾರೆ ಮತ್ತು ಉತ್ತಮ ಸ್ನಾಯುಗಳನ್ನು ಹೊಂದಿದ್ದಾರೆ. ಶ್ರೇಯಸ್ ಕೂಡ ನನ್ನ ತಂದೆಯಂತೆ ದಕ್ಷಿಣ ಭಾರತೀಯ. ಇನ್ನೇನು ಬೇಕು ಎಂದು ಸ್ಫೋಟಕ ಹೇಳಿಕೆ ನೀಡಿದ್ದರು.