ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubman Gill: ಗಿಲ್‌ ಶತಕದ ಆರ್ಭಟಕ್ಕೆ ಹಲವು ದಿಗ್ಗಜರ ದಾಖಲೆ ಪತನ

78 ರನ್ ಗಳಿಸಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದ ಗಿಲ್‌ 103 ರನ್‌ ಗಳಿಸಿ ಜೋಫ್ರ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. 87ರನ್‌ ಗಳಿಸಿದ್ದ ರಾಹುಲ್‌ 90 ರನ್‌ ಗಳಿಸಿದ ವೇಳೆ ನಾಯಕ ಬೆನ್‌ ಸ್ಟೋಕ್ಸ್‌ ಎಸೆತಕ್ಕೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಕೇವಲ 10 ರನ್‌ ಅಂತರದಿಂದ ಶತಕ ವಂಚಿತರಾದರು.

ಮ್ಯಾಂಚೆಸ್ಟರ್‌: ಭಾರತ ಟೆಸ್ಟ್‌ ತಂಡದ ನಾಯಕ ಶುಭಮನ್ ಗಿಲ್(Shubman Gill) ಅವರು ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್‌(England vs India 4th Test) ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಟೆಸ್ಟ್ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ವಿಶ್ವದ ಎರಡನೇ ಬ್ಯಾಟರ್‌ ಎಂಬ ಹಿರಿಗೆಮೆ ಪಾತ್ರರಾಗಿದ್ದಾರೆ. ಈ ಹಾದಿಯಲ್ಲಿ ಅವರು ಗ್ರೆಗ್ ಚಾಪೆಲ್(Greg Chappell) ಅವರನ್ನು ಹಿಂದಿಕ್ಕಿದರು. ದಾಖಲೆ ಡಾನ್ ಬ್ರಾಡ್ಮನ್(Don Bradman) ಹೆಸರಿನಲ್ಲಿದೆ.

ಗಿಲ್‌ 722* ರನ್‌ ಬಾರಿಸಿದ್ದಾರೆ. ಅಗ್ರಸ್ಥಾನದಲ್ಲಿರುವ ಬ್ರಾಡ್ಮನ್(810) ರನ್‌ ಬಾರಿಸಿದ್ದಾರೆ. ಈ ಆಖಲೆ ಮುರಿಯಲು ಗಿಲ್‌ಗೆ ಇನ್ನು 88 ರನ್‌ ಅಗತ್ಯವಿದೆ. ಅಂತಿಮ ಹಾಗೂ ಐದನೇ ಟೆಸ್ಟ್‌ನಲ್ಲಿ ಇದನ್ನು ಸಾಧಿಸಲು ಗಿಲ್‌ಗೆ ಅವಕಾಶವಿದೆ.

ಟೆಸ್ಟ್ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಅತಿ ಹೆಚ್ಚು ರನ್‌

ಸರ್ ಡಾನ್ ಬ್ರಾಡ್ಮನ್- 810 ರನ್‌

ಶುಭಮನ್ ಗಿಲ್-‌ 722*ರನ್‌

ಗ್ರೆಗ್ ಚಾಪೆಲ್- 702 ರನ್‌

ಕ್ಲೈವ್ ಲಾಯ್ಡ್- 636 ರನ್‌

ಪೀಟರ್ ಮೇ-582 ರನ್‌

ವಿದೇಶದಲ್ಲಿ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್

ವಿದೇಶಿ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಮೈಲುಗಲ್ಲು ನೆಟ್ಟಿದ್ದಾರೆ. ಜತೆಗೆ ಒಂದೇ ಟೆಸ್ಟ್ ಸರಣಿಯಲ್ಲಿ 700 ಕ್ಕೂ ಹೆಚ್ಚು ರನ್ ಗಳಿಸಿದ ನಾಯಕರ ವಿಶೇಷ ಪಟ್ಟಿಗೆ ಸೇರಿದರು. ಈ ಗುಂಪಿನಲ್ಲಿ ಸರ್ ಡಾನ್ ಬ್ರಾಡ್ಮನ್ (ಎರಡು ಬಾರಿ), ಸರ್ ಗಾರ್ಫೀಲ್ಡ್ ಸೋಬರ್ಸ್, ಗ್ರೆಗ್ ಚಾಪೆಲ್, ಸುನಿಲ್ ಗವಾಸ್ಕರ್, ಡೇವಿಡ್ ಗೋವರ್, ಗ್ರಹಾಂ ಗೂಚ್ ಮತ್ತು ಗ್ರೇಮ್ ಸ್ಮಿತ್ ಸೇರಿದ್ದಾರೆ.

ಇದನ್ನೂ ಓದಿ IPL 2025: ಶತಕದ ಜತೆಯಾಟದಲ್ಲಿ ದಾಖಲೆ ಬರೆದ ಗಿಲ್‌-ಸುದರ್ಶನ್‌ ಜೋಡಿ

78 ರನ್ ಗಳಿಸಿದ್ದಲ್ಲಿಂದ ಅಂತಿಮ ದಿನದಾಟ ಆರಂಭಿಸಿದ ಗಿಲ್‌ 103 ರನ್‌ ಗಳಿಸಿ ಜೋಫ್ರ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. 87ರನ್‌ ಗಳಿಸಿದ್ದ ರಾಹುಲ್‌ 90 ರನ್‌ ಗಳಿಸಿದ ವೇಳೆ ನಾಯಕ ಬೆನ್‌ ಸ್ಟೋಕ್ಸ್‌ ಎಸೆತಕ್ಕೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದು ಕೇವಲ 10 ರನ್‌ ಅಂತರದಿಂದ ಶತಕ ವಂಚಿತರಾದರು.