ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suryakumar Yadav: ಪಾಕ್‌ ಸಚಿವ ನಖ್ವಿ ಕೈಕುಲುಕಿದ ಸೂರ್ಯಕುಮಾರ್; ನೆಟ್ಟಿಗರ ಭಾರೀ ಆಕ್ರೋಶ

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತ ಪಾಕಿಸ್ತಾನ ಜತೆಗಿನ ಎಲ್ಲ ಸಂಬಂಧಗಳನ್ನು ಕೊನೆಗೊಳಿಸಿದೆ. ಹೀಗಿರುವಾಗ ಸೂರ್ಯಕುಮಾರ್‌ ಅವರು ಪಾಕ್‌ ಸಚಿವರೂ ಆಗಿರುವ ನಖ್ವಿ ಅವರ ಕೈ ಕುಲುಕಿದ್ದು ತಪ್ಪು ಎಂದು ನೆಟ್ಟಿಗರು ಹೇಳಿದ್ದಾರೆ. ಅಲ್ಲದೆ ಕಮೆಂಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರು 2025ರ ಏಶ್ಯ ಕಪ್ ಟೂರ್ನಿಗೆ ಮುಂಚಿತವಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಏಶ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ)ಅಧ್ಯಕ್ಷ ಮುಹ್ಸಿನ್ ನಖ್ವಿ(Mohsin Naqvi) ಅವರ ಕೈಕುಲುಕಿದರು. ನಖ್ವಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಅಧ್ಯಕ್ಷರು ಹಾಗೂ ಪಾಕಿಸ್ತಾನದ ಸಚಿವರೂ ಆಗಿದ್ದಾರೆ. ಸೂರ್ಯಕುಮಾರ್ ಅವರು ನಖ್ವಿ ಅವರ ಕೈಕುಲುಕುತ್ತಿರುವ ವಿಡಿಯೊ ವೈರಲ್ ಆಗಿದ್ದು ಹಲವು ನೆಟ್ಟಿಗರು ಸೂರ್ಯ ಮತ್ತು ಬಿಸಿಸಿಐ ವಿರುದ್ಧ ಕಿಡಿ ಕಾರಿದ್ದಾರೆ.

ಏಶ್ಯ ಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ನಂತರ ಎಲ್ಲ 8 ತಂಡಗಳ ನಾಯಕರುಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಸುದ್ದಿಗೋಷ್ಠಿ ಬಳಿಕ ಎಲ್ಲ ತಂಡದ ನಾಯಕರು ಎಸಿಸಿ ಅಧ್ಯಕ್ಷ ಮುಹ್ಸಿನ್ ನಖ್ವಿ ಅವರ ಕೈಕುಲುಕಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತ ಪಾಕಿಸ್ತಾನ ಜತೆಗಿನ ಎಲ್ಲ ಸಂಬಂಧಗಳನ್ನು ಕೊನೆಗೊಳಿಸಿದೆ. ಹೀಗಿರುವಾಗ ಸೂರ್ಯಕುಮಾರ್‌ ಅವರು ಪಾಕ್‌ ಸಚಿವರೂ ಆಗಿರುವ ನಖ್ವಿ ಅವರ ಕೈ ಕುಲುಕಿದ್ದು ತಪ್ಪು ಎಂದು ನೆಟ್ಟಿಗರು ಹೇಳಿದ್ದಾರೆ. ಅಲ್ಲದೆ ಕಮೆಂಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

"ಈ ಜನರು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ಹೇಗೆ ನೋಡುತ್ತಾರೆಂದು ನನಗೆ ತಿಳಿದಿಲ್ಲ. ಅವರು(ಪಾಕಿಸ್ತಾನ) ನಮ್ಮ ಮುಗ್ಧ ಜನರನ್ನು ಕೊಲ್ಲುತ್ತಾರೆ. ಮತ್ತು ಇಲ್ಲಿ ನಾವು ಅವರೊಂದಿಗೆ ಹಸ್ತಲಾಘವ ಮಾಡುತ್ತಿದ್ದೇವೆ. ನಾಚಿಕೆಗೇಡಿನ ಸಂಗತಿ!!" ಎಂದು ನೆಟ್ಟಿರೊಬ್ಬರು ಬರೆದುಕೊಂಡಿದ್ದಾರೆ.



ಇದನ್ನೂ ಓದಿ Asia Cup 2025: ಏಷ್ಯಾ ಕಪ್‌ನಲ್ಲಿ ಭಾರತ ಅತ್ಯಂತ ಯಶಸ್ವಿ ತಂಡ; ಅತ್ಯಧಿಕ 8 ಸಲ ಚಾಂಪಿಯನ್‌ ಆದ ಹೆಗ್ಗಳಿಕೆ

"ಭಾರತೀಯ ನಾಯಕನೊಬ್ಬ ಪಾಕಿಸ್ತಾನದ ಗೃಹ ಸಚಿವರೊಂದಿಗೆ ಫೋಟೋಗೆ ಪೋಸ್ ನೀಡಿ ಕೈಕುಲುಕಿದ್ದು ನಾಚಿಕೆಯ ಕೆಲಸ. ಮೊಹ್ಸಿನ್ ನಖ್ವಿ ಅವರ ಕೈಗಳಲ್ಲಿ ರಕ್ತವಿದೆ. ಮತ್ತು ಅವರು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತದ ವಿನಾಶಕ್ಕೆ ಕರೆ ನೀಡುತ್ತಿದ್ದರು!!" ಎಂದು ಮತ್ತೊಬ್ಬ ನೆಟ್ಟಿಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.