ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

T Dilip: ಭಾರತ ತಂಡದ ಫೀಲ್ಡಿಂಗ್ ಕೋಚ್‌ ಆಗಿ ದಿಲೀಪ್‌ ಮರುನೇಮಕ

ದಿಲೀಪ್‌ ಅವರು ತಮ್ಮ ಹಿಂದಿನ ಅವಧಿಯಲ್ಲಿ, ಫೀಲ್ಡಿಂಗ್ ಗುಣಮಟ್ಟ ಹೆಚ್ಚಿಸಲು ಮತ್ತು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯ ಪ್ರತಿ ಪಂದ್ಯದ ಬಳಿಕ ಉತ್ತಮ ಫೀಲ್ಡಿಂಗ್‌ ನಡೆಸಿದ ಆಟಗಾರನಿಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಿ ಗೌರವಿಸುವ ವಿನೂತನ ಪ್ರಯೋಗವನ್ನು ಮಾಡಿದ್ದರು.

ಭಾರತ ತಂಡದ ಫೀಲ್ಡಿಂಗ್ ಕೋಚ್‌ ಆಗಿ ದಿಲೀಪ್‌ ಮರುನೇಮಕ

Profile Abhilash BC May 28, 2025 9:18 AM

ನವದೆಹಲಿ: ಸೂಕ್ತ ಫೀಲ್ಡಿಂಗ್‌ ಕೋಚ್‌(fielding coach) ಆಯ್ಕೆ ಮಾಡಲು ವಿಫಲವಾದ ನಂತರ, ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ(England tour) ಟಿ. ದಿಲೀಪ್(T Dilip) ಅವರನ್ನು ತಂಡದ ಫೀಲ್ಡಿಂಗ್ ಕೋಚ್ ಆಗಿ ಮರು ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ. 2024-25ರ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಭಾರತದ ಕಳಪೆ ಪ್ರದರ್ಶನದ ನಂತರ, ಕಳೆದ ತಿಂಗಳು ದಿಲೀಪ್ ಮತ್ತು ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರನ್ನು ಕೈಬಿಡಲಾಗಿತ್ತು.

ಹೊಸ ಫೀಲ್ಡಿಂಗ್ ಕೋಚ್ ಆಗಿ ವಿದೇಶಿ ಮಾಜಿ ಕ್ರಿಕೆಟಿಗರನ್ನು ನೇಮಿಸಿಕೊಳ್ಳಲು ಬಿಸಿಸಿಐ ಯೋಜನೆ ರೂಪಿಸಿತ್ತು. ಆದರೆ ಆಡಳಿತ ಮಂಡಳಿಗೆ ಅಗತ್ಯ ಸಮಯದಲ್ಲಿ ಅದು ಸಾಧ್ಯವಾಗದ ಕಾರಣ ಟಿ. ದಿಲೀಪ್ ಅವರನ್ನೇ ಮರು ನೇಮಕ ಮಾಡಲಾಗಿದೆ.

"ದಿಲೀಪ್ ಒಬ್ಬ ಉತ್ತಮ ತರಬೇತುದಾರರಾಗಿದ್ದು, ಅವರು ಮೂರು ವರ್ಷಗಳಿಗೂ ಹೆಚ್ಚು ಕಾಲ (2021 ರಿಂದ) ತಂಡಕ್ಕೆ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಅವರು ತಂಡದಲ್ಲಿರುವ ಹೆಚ್ಚಿನ ಕ್ರಿಕೆಟಿಗರನ್ನು ಬಹಳ ಹತ್ತಿರದಿಂದ ತಿಳಿದಿದ್ದಾರೆ. ಆದ್ದರಿಂದ, ಅವರನ್ನು ದೊಡ್ಡ ಸರಣಿಗೆ (ಇಂಗ್ಲೆಂಡ್ ವಿರುದ್ಧ) ಆಯ್ಕೆ ಮಾಡಿಕೊಳ್ಳುವುದರಿಂದ ತಂಡಕ್ಕೆ ಒಳ್ಳೆಯದಾಗುತ್ತದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ IPL 2025: ಗೆಲುವಿನೊಂದಿಗೆ ನೂತನ ದಾಖಲೆ ಬರೆದ ಆರ್‌ಸಿಬಿ

ದಿಲೀಪ್‌ ಅವರು ತಮ್ಮ ಹಿಂದಿನ ಅವಧಿಯಲ್ಲಿ, ಫೀಲ್ಡಿಂಗ್ ಗುಣಮಟ್ಟ ಹೆಚ್ಚಿಸಲು ಮತ್ತು ಆಟಗಾರರ ಆತ್ಮವಿಶ್ವಾಸ ಹೆಚ್ಚಿಸುವ ಸಲುವಾಗಿ ಏಕದಿನ ವಿಶ್ವಕಪ್‌, ಟಿ20 ವಿಶ್ವಕಪ್‌ ಮತ್ತು ಚಾಂಪಿಯನ್ಸ್‌ ಟ್ರೋಫಿಯ ಪ್ರತಿ ಪಂದ್ಯದ ಬಳಿಕ ಉತ್ತಮ ಫೀಲ್ಡಿಂಗ್‌ ನಡೆಸಿದ ಆಟಗಾರನಿಗೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ನೀಡಿ ಗೌರವಿಸುವ ವಿನೂತನ ಪ್ರಯೋಗವನ್ನು ಮಾಡಿದ್ದರು.

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಗೊಳ್ಳಲಿದೆ. ಸರಣಿಗೆ ಬಿಸಿಸಿಐ ಶನಿವಾರ 18 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಶುಭಮನ್‌ ಗಿಲ್‌ ನೂತನ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು, ರಿಷಭ್‌ ಪಂತ್ ತಂಡದ ಉಪನಾಯಕರಾಗಿದ್ದಾರೆ.