ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

viral video: 'ದಿ ಹಂಡ್ರೆಡ್' ಲೀಗ್‌ ಉದ್ಘಾಟನ ಪಂದ್ಯಕ್ಕೆ ಅಡ್ಡಿಪಡಿಸಿದ ನರಿ

The Hundred: ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಓವಲ್ ಇನ್ವಿನ್ಸಿಬಲ್ಸ್ ತಂಡವು ಲಂಡನ್ ಸ್ಪಿರಿಟ್ ವಿರುದ್ಧ ಆರಾಮದಾಯಕ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕೇನ್ ವಿಲಿಯಮ್ಸನ್ ನಾಯಕತ್ವದ ಸ್ಪಿರಿಟ್ ತಂಡ 80ರನ್‌ಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಓವಲ್ ಇನ್ವಿನ್ಸಿಬಲ್ಸ್ ತಂಡ 4 ವಿಕೆಟ್‌ಗೆ 81 ರನ್‌ ಗಳಿಸಿ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಲಾರ್ಡ್ಸ್‌: ಕ್ರಿಕೆಟ್‌ ಪಂದ್ಯದ ವೇಳೆ ಪ್ರಾಣಿಗಳು ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸುವುದು ಹೊಸದೇನೂ ಅಲ್ಲ. ಸಾಕಷ್ಟು ಸಲ ಇಂತಹ ಘಟನೆಗಳು ನಡೆದಿವೆ. ಹೆಚ್ಚಾಗಿ ಶ್ವಾನಗಳು ಮೈದಾನಕ್ಕೆ ನುಗ್ಗಿದ ಸಾಕಷ್ಟು ಉದಾಹರಣೆಗಳು ಕಾಣಸಿಗುತ್ತವೆ. ಒಂದೊಂದು ಸಲ ಬೆಕ್ಕು, ಹಾವು ಆಟಕ್ಕೆ ಅಡ್ಡಿ ಮಾಡಿದ ಉದಾಹರಣೆಗಳಿವೆ. ಆದರೆ ಈ ಬಾರಿ ಕಾಡಿನ ಅತಿಥಿಯೊಂದು ಪಂದ್ಯಕ್ಕೆ ಅಡ್ಡಿಪಡಿಸಿದ್ದು, ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್(viral video) ಆಗುತ್ತಿದೆ.

ಲಂಡನ್‌ನಲ್ಲಿ ನಡೆಯುತ್ತಿರುವ "ದಿ ಹಂಡ್ರೆಡ್"(The Hundred) ಕ್ರಿಕೆಟ್‌ ಲೀಗ್‌ನ ಉದ್ಘಾಟನ ಪಂದ್ಯದಲ್ಲಿ ನರಿಯೊಂದು ಐಕಾನಿಕ್‌ ಲಾರ್ಡ್ಸ್‌ ಕ್ರೀಡಾಂಗಣಕ್ಕೆ ನುಗ್ಗಿದ ಘಟನೆ ನಡೆದಿದೆ. ಇದರಿಂದ ಕೆಲ ಕ್ಷಣಗಳ ಕಾಲ ಪಂದ್ಯಕ್ಕೆ ಅಡಚಣೆಯುಂಟಾಯಿತು. ನೆರೆದಿದ್ದ ಪ್ರೇಕ್ಷಕರ ಬೊಬ್ಬೆಗೆ ಗಾಬರಿಗೊಂಡ ಈ ನರಿ ಮೈದಾನದಲ್ಲಿ ಹಲವು ಸುತ್ತು ಓಡಿದೆ. ಅತ್ತ ಕಾಮೆಂಟರಿ ಮಾಡುತ್ತಿದ್ದ ಇಯಾನ್ ಮಾರ್ಗನ್ ಮತ್ತು ಸ್ಟುವರ್ಟ್ ಬ್ರಾಡ್ ನರಿಯ ಓಟವನ್ನು ಸುಂದರವಾಗಿ ವರ್ಣಸುತ್ತಿದ್ದರು. ಸದ್ಯ ಈ ವಿಡಿಯೊ ವೈರಲ್‌ ಆಗಿದೆ.



ಲಂಡನ್ ಸ್ಪಿರಿಟ್ ಮತ್ತು ಓವಲ್ ಇನ್ವಿನ್ಸಿಬಲ್ಸ್ ನಡುವಿನ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲ ಈ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಓವಲ್ ಇನ್ವಿನ್ಸಿಬಲ್ಸ್ ತಂಡವು ಲಂಡನ್ ಸ್ಪಿರಿಟ್ ವಿರುದ್ಧ ಆರಾಮದಾಯಕ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಕೇನ್ ವಿಲಿಯಮ್ಸನ್ ನಾಯಕತ್ವದ ಸ್ಪಿರಿಟ್ ತಂಡ 80ರನ್‌ಗೆ ಆಲೌಟ್‌ ಆಯಿತು. ಗುರಿ ಬೆನ್ನಟ್ಟಿದ ಓವಲ್ ಇನ್ವಿನ್ಸಿಬಲ್ಸ್ ತಂಡ 4 ವಿಕೆಟ್‌ಗೆ 81 ರನ್‌ ಗಳಿಸಿ 6 ವಿಕೆಟ್‌ ಅಂತರದ ಗೆಲುವು ಸಾಧಿಸಿತು.

ಇದನ್ನೂ ಓದಿ IND vs ENG: ಶುಭಮನ್‌ ಗಿಲ್‌ ಇನ್ನೂ ಕಲಿಯಬೇಕೆಂದಿದ್ದ ಕಪಿಲ್‌ ದೇವ್‌ಗೆ ಯೋಗರಾಜ್‌ ಸಿಂಗ್‌ ತಿರುಗೇಟು!