ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Open 2025 final: ನಾಳೆ ಅಲ್ಕರಾಜ್‌-ಸಿನ್ನರ್‌ ಫೈನಲ್‌ ಸೆಣಸಾಟ

Sinner vs Alcaraz: ಹಾಲಿ ವರ್ಷದ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಸುತ್ತಿನಲ್ಲಿ ಅಲ್ಕರಾಜ್‌ ಮತ್ತು ಸಿನ್ನರ್‌ ಎದುರಾಗುತ್ತಿರುವ ಮೂರನೇ ಮುಖಾಮುಖಿ ಇದಾಗಿದೆ. ಉಭಯ ಆಟಗಾರರು ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸೆಣಸಾಟ ನಡೆಸಿದ್ದರು. ಫ್ರೆಂಚ್‌ ಓಪನ್‌ನಲ್ಲಿ ಅಲ್ಕರಾಜ್‌ ಗೆದ್ದರೆ, ವಿಂಬಲ್ಡನ್‌ನಲ್ಲಿ ಸಿನ್ನರ್‌ ಗೆದ್ದಿದ್ದರು.

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಫೈನಲ್‌(US Open 2025 final) ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ ನಡೆಯುವ ಫೈನಲ್‌ ಪಂದ್ಯದ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ ಎರಡು ಶ್ರೇಯಾಂಕಿತ ಆಟಗಾರರಾದ ಜಾನಿಕ್‌ ಸಿನ್ನರ್‌(Jannik Sinner) ಮತ್ತು ಕಾರ್ಲೊಸ್‌ ಅಲ್ಕರಾಜ್‌(Carlos Alcaraz) ಮುಖಾಮುಖಿಯಾಗಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಅರಿನಾ ಸಬಲೆಂಕಾ ಮತ್ತು ಅಮಂಡಾ ಅನಿಸಿಮೋವಾ ಸೆಣಸಾಟ ನಡೆಸಲಿದ್ದಾರೆ.

ಮೂರನೇ ಫೈನಲ್‌ ಮುಖಾಮುಖಿ

ಹಾಲಿ ವರ್ಷದ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಸುತ್ತಿನಲ್ಲಿ ಅಲ್ಕರಾಜ್‌ ಮತ್ತು ಸಿನ್ನರ್‌ ಎದುರಾಗುತ್ತಿರುವ ಮೂರನೇ ಮುಖಾಮುಖಿ ಇದಾಗಿದೆ. ಉಭಯ ಆಟಗಾರರು ವಿಂಬಲ್ಡನ್‌ ಮತ್ತು ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸೆಣಸಾಟ ನಡೆಸಿದ್ದರು. ಫ್ರೆಂಚ್‌ ಓಪನ್‌ನಲ್ಲಿ ಅಲ್ಕರಾಜ್‌ ಗೆದ್ದರೆ, ವಿಂಬಲ್ಡನ್‌ನಲ್ಲಿ ಸಿನ್ನರ್‌ ಗೆದ್ದಿದ್ದರು.

ಜಾನಿಕ್ ಸಿನ್ನರ್ ಮತ್ತು ಕಾರ್ಲೋಸ್ ಅಲ್ಕರಾಜ್ ನಡುವಿನ ಯುಎಸ್ ಓಪನ್ ಫೈನಲ್ ಪಂದ್ಯವು ಈ ಋತುವಿನ ಕೊನೆಯ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಅನ್ನು ನಿರ್ಧರಿಸುವುದಲ್ಲದೆ, ಎಟಿಪಿ ಶ್ರೇಯಾಂಕದಲ್ಲಿ ವಿಶ್ವದ ನಂ. 1 ಸ್ಥಾನವನ್ನು ಸಹ ನಿರ್ಧರಿಸುತ್ತದೆ.

ಜೂನ್ 10, 2024 ರಂದು ಮೊದಲ ಬಾರಿಗೆ ವಿಶ್ವದ ನಂ. 1 ಸ್ಥಾನವನ್ನು ವಶಪಡಿಸಿಕೊಂಡಾಗಿನಿಂದ ಸಿನ್ನರ್‌, ಸತತ 65 ವಾರಗಳ ಕಾಲ ವಿಶ್ವದ ನಂ. 1 ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಅಲ್ಕರಾಜ್ 2023ರಲ್ಲಿ ಅಗ್ರ ಸ್ಥಾನವನ್ನು ಹೊಂದಿದ್ದರು. ಮತ್ತು ಒಟ್ಟು 36 ವಾರಗಳ ಕಾಲ ಇದನ್ನು ಉಳಿಸಿಕೊಂಡಿದ್ದರು.

ಇದನ್ನೂ ಓದಿ US Open 2025: ಜೋಕೋ 25ನೇ ಗ್ರ್ಯಾನ್‌ಸ್ಲಾಂ ಪ್ರಯತ್ನ ವಿಫಲ; ಸೆಮಿಯಲ್ಲಿ ಸೋಲು