ಬೆಂಗಳೂರು: ಇದುವರೆಗಿನ ಐಪಿಎಲ್(IPL) ಜರ್ನಿಯಲ್ಲಿ ಏಕೈಕ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bengaluru) ತಂಡದ ಪರ ಆಡಿದ್ದ ವಿರಾಟ್ ಕೊಹ್ಲಿ(Virat Kohli) ಅವರು ಮುಂದಿನ ಆವೃತ್ತಿಗೂ ಮುನ್ನ ಆರ್‌ಸಿಬಿ(RCB) ಜತೆಗಿನ ನಂಟು ಕಳೆದುಕೊಳ್ಳುವ ಸಾಧ್ಯತೆಯೊಂದು ಕಂಡುಬಂದಿದೆ. ವರದಿಗಳ ಪ್ರಕಾರ ಕೊಹ್ಲಿ ಇನ್ನೂ ಫ್ರಾಂಚೈಸಿ ಜತೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಹೀಗಾಗಿ ಅವರು ಫ್ರಾಂಚೈಸಿ ಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಐಪಿಎಲ್ ಮಿನಿ-ಹರಾಜಿಗೆ ಮುಂಚಿತವಾಗಿ ಕೊಹ್ಲಿ ಹೊಸ ಒಪ್ಪಂದಕ್ಕೆ ಸಹಿ ಹಾಕದ ಕಾರಣ, ಮಾಜಿ ನಾಯಕ ಫ್ರಾಂಚೈಸಿಯನ್ನು ತೊರೆಯಬಹುದು ಅಥವಾ ಐಪಿಎಲ್‌ನಿಂದ ನಿವೃತ್ತರಾಗಬಹುದು ಎಂಬ ಊಹಾಪೋಹಗಳು ಹರಡಿವೆ.
ಆದಾಗ್ಯೂ, ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್, ಕೊಹ್ಲಿ ಫ್ರಾಂಚೈಸಿಯೊಂದಿಗೆ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕದಿರುವುದು ತಂಡದ ಮಾಲೀಕತ್ವ ಬದಲಾವಣೆಯ ಸೂಚನೆಯಾಗಿರಬಹುದು ಎಂದು ಹೇಳುವ ಮೂಲಕ ವದಂತಿಗಳನ್ನು ತಳ್ಳಿಹಾಕಿದರು. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್, ಕೊಹ್ಲಿ ತಮ್ಮ ಮಾತಿನಂತೆ ವರ್ತಿಸುವ ವ್ಯಕ್ತಿ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಂದಿಗೂ ತಂಡಗಳನ್ನು ಬದಲಾಯಿಸುವುದಿಲ್ಲ. ಅವರು ಸಹಿ ಹಾಕಿಲ್ಲ ಎಂದರೆ ಅದು ಫ್ರಾಂಚೈಸಿ ಮಾಲಿಕರ ಬದಲಾವಣೆಯ ಭಾಗ ಎಂದಿದ್ದಾರೆ.
ಇದನ್ನೂ ಓದಿ Bengaluru Stampede: ಕಾಲ್ತುಳಿತ ಪ್ರಕರಣ; ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಆರ್‌ಸಿಬಿ-ಕೆಎಸ್‌ಸಿಎ
ಇತ್ತೀಚೆಗಷ್ಟೇ ಸೀರಂ ಇನ್ ಸ್ಟಿಟ್ಯೂಟ್ ಸಿಇಒ ಆದಾರ್ ಪೂನಾವಾಲ ಅವರು ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿತ್ತು. ವರದಿಗಳ ಪ್ರಕಾರ, ಆದರ್ ಪೂನವಾಲ್ಲಾ ಆರ್‌ಸಿಬಿ ಫ್ರಾಂಚೈಸಿ ಅನ್ನು ಖರೀದಿಸಲು ಆಸಕ್ತಿ ಹೊಂದಿರುವ ಇತರರಿಗಿಂತ ಮುಂಚೂಣಿಯಲ್ಲಿದ್ದಾರೆ. ಸುಮಾರು 52 ಬಿಲಿಯನ್ ಅಥವಾ 17,762 ಕೋಟಿ ಮೌಲ್ಯಕ್ಕೆ ಆರ್‌ಸಿಬಿ ಫ್ರಾಂಚೈಸಿ ಮಾರಾಟವಾಗಲಿದೆ ಎನ್ನಲಾಗುತ್ತಿದೆ.