ನವದೆಹಲಿ: ILT20 ಹರಾಜಿನಲ್ಲಿ(ILT20 auction) ಭಾರತದ ದಂತಕಥೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(R Ashwin) ಮಾರಾಟವಾಗದೆ ಉಳಿದಿದ್ದರಿಂದ ಅನೇಕ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ದಿಗ್ಭ್ರಮೆಗೊಂಡಿದ್ದಾರೆ. 1.06 ಕೋಟಿ ರೂ. ಮೂಲಬೆಲೆಗೆ ಅಶ್ವಿನ್ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಹರಾಜಿನಲ್ಲಿ ಅವರನ್ನು ಯಾವ ಫ್ರಾಂಚೈಸಿಯೂ ಖರೀದಿ ಮಾಡಲಿಲ್ಲ.
ಇದರೊಂದಿಗೆ ಮೊದಲ ಬಾರಿಗೆ ಇಂಟರ್ನ್ಯಾಷನಲ್ ಲೀಗ್ ಟಿ20 (ILT20) ಲೀಗ್‌ನಲ್ಲಿ ಹೊಸ ಇನಿಂಗ್ಸ್ ಆರಂಭಿಸುವ ಅಶ್ವಿನ್ ಅವರ ಕನಸು ಕಮರಿದೆ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಅಶ್ವಿನ್ ದುಬಾರಿಯಾಗಿ ಕಂಡುಬಂದಿದ್ದರು. ಇದೇ ಕಾರಣಕ್ಕೆ ಅವರನ್ನು ಖರೀದಿ ಮಾಡಲು ಫ್ರಾಂಚೈಸಿ ಹಿಂದೇಟು ಹಾಕಿರುವ ಸಾಧ್ಯತೆ ಇದೆ.
ಅಶ್ವಿನ್ ಮುಂಬರುವ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಲಿದ್ದು, ಅವರು ಸಿಡ್ನಿ ಥಂಡರ್ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆ ಮೂಲಕ ಬಿಗ್ ಬ್ಯಾಷ್ ಲೀಗ್ ಆಡಲಿರುವ ಭಾರತದ ಮೊದಲ ಪ್ರಮುಖ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 39 ವರ್ಷದ ಅನುಭವಿ ಸ್ಪಿನ್ನರ್ ಡಿಸೆಂಬರ್ 14 ರಿಂದ ಜನವರಿ 25 ರವರೆಗೆ ನಡೆಯಲಿರುವ ಬಿಬಿಎಲ್‌ನ ದ್ವಿತೀಯಾರ್ಧಕ್ಕೆ ಲಭ್ಯವಿರುವುದಾಗಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಅಶ್ವಿನ್ 220 ಐಪಿಎಲ್ ಪಂದ್ಯಗಳಲ್ಲಿ ಆಡಿದ್ದಾರೆ, 30.22 ರ ಸರಾಸರಿಯಲ್ಲಿ 187 ವಿಕೆಟ್‌ಗಳನ್ನು ಪಡೆದಿದ್ದಾರೆ, ಅವರ ಅತ್ಯುತ್ತಮ 4/34. ಬ್ಯಾಟಿಂಗ್‌ನಲ್ಲಿ, ಅವರು 833 ರನ್‌ಗಳನ್ನು ಗಳಿಸಿದ್ದಾರೆ, ಇದರಲ್ಲಿ ಗರಿಷ್ಠ 50 ರನ್‌ಗಳು ಮತ್ತು 13.02 ಸರಾಸರಿಯಿದೆ.
ಇದನ್ನೂ ಓದಿ IND vs PAK: ʻಆಂಡಿ ಪೈಕ್ರಾಫ್ಟ್ ಸ್ಕೂಲ್ ಟೀಚರ್ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್ ಅಶ್ವಿನ್!