ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs PAK: ʻಆಂಡಿ ಪೈಕ್ರಾಫ್ಟ್‌ ಸ್ಕೂಲ್‌ ಟೀಚರ್‌ ಅಲ್ಲʼ-ಪಾಕಿಸ್ತಾನವನ್ನು ಟೀಕಿಸಿದ ಆರ್‌ ಅಶ್ವಿನ್‌!

ಹ್ಯಾಂಡ್‌ಶೇಕ್‌ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಸಿಕ್ಕಾಪಟ್ಟೆ ಟೀಕೆಗೆ ಗುರಿಯಾಗಿದ್ದ ಐಸಿಸಿ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಅವರಿಗೆ ಭಾರತೀಯ ಸ್ಪಿನ್‌ ದಿಗ್ಗಜ ಆರ್‌ ಅಶ್ವಿನ್‌ ಬೆಂಬಲ ನೀಡಿದ್ದಾರೆ. ಆ ಮೂಲಕ ಪಾಕಿಸ್ತಾನ ತಂಡದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ʻಪೈಕ್ರಾಫ್ಟ್‌ ಸ್ಕೂಲ್‌ ಟೀಚರ್‌ ಅಲ್ಲʼ: ಪಾಕ್‌ ವಿರುದ್ಧ ಅಶ್ವಿನ್‌ ಗರಂ!

ಆಂಡಿ ಪೈಕ್ರಾಫ್ಟ್‌ಗೆ ಬೆಂಬಲ ಸೂಚಿಸಿದ ಆರ್‌ ಅಶ್ವಿನ್. -

Profile Ramesh Kote Sep 21, 2025 3:45 PM

ನವದಹೆಲಿ: ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವಣ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಯ ಲೀಗ್‌ ಹಂತದ ಪಂದ್ಯದಲ್ಲಿ ನಡೆದಿದ್ದ ಹ್ಯಾಂಡ್‌ಶೇಕ್‌ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಐಸಿಸಿ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಅವರಿಗೆ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ (R Ashwin) ಬೆಂಬಲ ಸೂಚಿಸಿದ್ದಾರೆ. ಅಲ್ಲದೆ ಪಾಕಿಸ್ತಾನ ಕ್ರಿಕೆಟ್‌ ಅನ್ನು ಟೀಕಿಸಿದ್ದಾರೆ. ಈ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಇದೀಗ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಪ್ಟಂಬರ್‌ 21 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ.

ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಆಂಡಿ ಪೈಕ್ರಾಫ್ಟ್‌ ಮ್ಯಾಚ್‌ ರೆಫರಿ ಆಗಿದ್ದರು. ಪಂದ್ಯದ ಟಾಸ್‌ ವೇಳೆ ಪಾಕಿಸ್ತಾನ ನಾಯಕ ಸಲ್ಮಾನ್‌ ಅಘಾ ಅವರು, ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ಗೆ ಶೇಕ್‌ಹ್ಯಾಂಡ್‌ ಕೊಡಲು ಮುಂದಾದರು. ಆದರೆ, ಸೂರ್ಯಕುಮಾರ್‌ ಯಾದವ್‌ ಶೇಕ್‌ಹ್ಯಾಂಡ್‌ ಮಾಡುವ ಬದಲು ತಮ್ಮ ಕೈಯಲ್ಲಿದ್ದ ಮೈಕ್‌ ಅನ್ನು ನೀಡಿದ್ದರು. ಈ ವೇಳೆ ಪಾಕ್‌ ನಾಯಕ ಅಚ್ಚರಿ ವ್ಯಕ್ತಪಡಿಸಿದ್ದರು.

IND vs PAK: ಪಾಕ್‌ ವಿರೋಧದ ಮಧ್ಯೆಯೂ ಸೂಪರ್ 4 ಪಂದ್ಯಕ್ಕೆ ಪೈಕ್ರಾಫ್ಟ್ ಮ್ಯಾಚ್ ರೆಫರಿ

ನಂತರ ಪಂದ್ಯ ಮುಗಿದ ಸೂರ್ಯಕುಮಾರ್‌ ಯಾದವ್‌ ಹಾಗೂ ಶಿವಂ ದುಬೆ ಬ್ಯಾಟಿಂಗ್‌ ಮುಗಿಸಿ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ದರು. ಆದರೆ, ಈ ವೇಳೆ ಸೂರ್ಯಕುಮಾರ್‌ ಯಾದವ್‌ ಶೇಕ್‌ಹ್ಯಾಂಡ್‌ ಮಾಡಲು ಮುಂದಾಗಲಿಲ್ಲ. ನಂತರ ಟೀಮ್‌ ಇಂಡಿಯಾ ಆಟಗಾರರು ಕೂಡ ಶೇಕ್‌ಹ್ಯಾಂಡ್‌ ಮಾಡಲಿಲ್ಲ. ಇದರಿಂದ ಪಾಕಿಸ್ತಾನ ಆಟಗಾರರ ತೀವ್ರ ಮುಜುಗರಕ್ಕೆ ಒಳಗಾದರು. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಕೂಡ ಭಾರತ ತಂಡದ ಆಟಗಾರರ ನಡೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಲ್ಲದೆ ಐಸಿಸಿ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಅವರು ಕೂಡ ಭಾರತಕ್ಕೆ ಬೆಂಬಲ ನೀಡಿದ್ದಾರೆಂದು ಆರೋಪಿಸಿದ್ದರು.

ಅಲ್ಲದೆ ಪೈಕ್ರಾಫ್ಟ್‌ ವಿರುದ್ಧ ಐಸಿಸಿಗೆ ಪಿಸಿಬಿ ಪತ್ರವನ್ನು ಬರೆದಿತ್ತು. ಮುಂದಿನ ಪಂದ್ಯದಿಂದ ಆಂಡಿ ಪೈಕ್ರಾಫ್ಟ್‌ ಅವರನ್ನು ಕೈ ಬಿಡಬೇಕು ಇಲ್ಲವಾದಲ್ಲಿ ನಾವು ಏಷ್ಯಾ ಕಪ್‌ ಟೂರ್ನಿಯಿಂದ ಹೊರಗುಳಿಯುತ್ತೇವೆಂದು ಎಚ್ಚರಿಕೆ ನೀಡಿತ್ತು. ನಂತರ ಯುಎಇ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿತ್ತು. ಅಲ್ಲದೆ ಐಸಿಸಿ ಮ್ಯಾಚ್‌ ರೆಫರಿ ಆಂಡಿ ಪೈಕ್ರಾಫ್ಟ್‌ ಅವರ ಜೊತೆ ಮಾತುಕತೆ ನಡೆಸಿದ ಬಳಿಕ ಪಾಕಿಸ್ತಾನ ತಂಡ ಒಂದು ಗಂಟೆ ತಡವಾಗಿ ಯುಎಇ ವಿರುದ್ದ ಪಂದ್ಯವನ್ನು ಆರಂಭಿಸಿತ್ತು.

IND vs PAK: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದ ಪಾಕಿಸ್ತಾನ!

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಆರ್‌ ಅಶ್ವಿನ್‌,"ಆಂಡಿ ಪೈಕ್ರಾಫ್ಟ್ ನಿಜಕ್ಕೂ ಇಂತಹ ಕಳಪೆ ಪ್ರದರ್ಶನವನ್ನು ಎಲ್ಲರೂ ನೋಡದಂತೆ ಉಳಿಸಿದರು. ಭಾರತ ತಂಡ ಮ್ಯಾಚ್ ರೆಫರಿಗೆ ಮುಂಚಿತವಾಗಿ ಮಾಹಿತಿ ನೀಡಿತ್ತು-ಇದು ನಮ್ಮ ನಿರ್ಧಾರ ಮತ್ತು ನಾವು ಅದನ್ನು ಅನುಸರಿಸುತ್ತೇವೆ. ಅಷ್ಟೇ. ಇಷ್ಟೆಲ್ಲಾ ನಾಟಕದ ನಂತರ, ನೀವು ಪಂದ್ಯವನ್ನು ಕಳೆದುಕೊಂಡಿದ್ದೀರಿ. ಹಾಗಾದರೆ ನೀವು ಯಾವುದರ ಬಗ್ಗೆ ದೂರುತ್ತಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದಾರೆ.

"ಸೂರ್ಯ ಇಲ್ಲಿ ಬಂದು ಶೇಕ್‌ಹ್ಯಾಂಡ್‌ ಮಾಡಿ ಎಂದು ಹೇಳಲು ಆಂಡಿ ಪೈಕ್ರಾಫ್ಸ್‌ ಸ್ಕೂಲ್‌ ಟೀಚರ್‌ ಅಲ್ಲ. ಅವರು ಪ್ರಿನ್ಸಿಪಾಲ್‌ ಅಲ್ಲ. ಇದು ಅವರ ಕೆಲಸ ಅಲ್ಲವೇ ಅಲ್ಲ. ಅಂದ ಹಾಗೆ ಪೈಕ್ರಾಫ್ಟ್‌ ಅವರ ತಪ್ಪು ಇಲ್ಲಿ ಏನಿದೆ,? ಎಂದು ಆರ್‌ ಅಶ್ವಿನ್‌ ಕೇಳಿದ್ದಾರೆ.