2026ರ ಮಹಿಳಾ ಪ್ರೀಮಿಯರ್ ಲೀಗ್; ಜನವರಿ ಮೊದಲ ವಾರದಲ್ಲಿ ಪ್ರಾರಂಭ
ನಾಲ್ಕನೇ ಆವೃತ್ತಿಯಲ್ಲಿ ಹಿಂದಿನ ಋತುಗಳಲ್ಲಿ ಆಡಿದ್ದ ಐದು ತಂಡಗಳಾದ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಮತ್ತೆ ಭಾಗವಹಿಸಲಿವೆ. ಈ ಸ್ಪರ್ಧೆಯು 22 ಪಂದ್ಯಗಳನ್ನು ಒಳಗೊಂಡಿದ್ದು, ಫೆಬ್ರವರಿ 2026 ರ ಆರಂಭದ ವೇಳೆಗೆ ಮುಕ್ತಾಯಗೊಳ್ಳಲಿದೆ.

-

ಮುಂಬಯಿ: ಮುಂದಿನ ವರ್ಷ ನಡೆಯುವ ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (WPL 2026) 2026 ಸಾಮಾನ್ಯಕ್ಕಿಂತ ಮೊದಲೇ ಆರಂಭವಾಗಲಿದ್ದು, ಜನವರಿ 6 ಮತ್ತು ಜನವರಿ 8 ರ ನಡುವೆ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕ್ರಿಕ್‌ಬಜ್ ಪ್ರಕಾರ, ಭಾರತ ಮತ್ತು ಶ್ರೀಲಂಕಾದಲ್ಲಿ ನಿಗದಿಯಾಗಿದ್ದ ಐಸಿಸಿ ಪುರುಷರ T20 ವಿಶ್ವಕಪ್‌ನೊಂದಿಗೆ( ICC Men’s T20 World Cup) ಘರ್ಷಣೆಯನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿ ಮಾಡಿದೆ
ಮೂಲ ವೇಳಾಪಟ್ಟಿಯ ಪ್ರಕಾರ ಮಹಿಳಾ ಪ್ರೀಮಿಯರ್ ಲೀಗ್ ಐಪಿಎಲ್‌ಗೂ ಮುನ್ನ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಇದೇ ಸಮಯದಲ್ಲಿ ಪುರುಷರ ಟಿ20 ವಿಶ್ವಕಪ್ ಟೂರ್ನಿಗಳು ನಡೆಯಲಿದೆ. ಈ ಕಾರಣದಿಂದ ಟೂರ್ನಿಯನ್ನು ವರ್ಷಾಂರಂಭದಲ್ಲೇ ನಡೆಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿಯಾಗಿದೆ.
ನಾಲ್ಕನೇ ಆವೃತ್ತಿಯಲ್ಲಿ ಹಿಂದಿನ ಋತುಗಳಲ್ಲಿ ಆಡಿದ್ದ ಐದು ತಂಡಗಳಾದ ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ತಂಡಗಳು ಮತ್ತೆ ಭಾಗವಹಿಸಲಿವೆ. ಈ ಸ್ಪರ್ಧೆಯು 22 ಪಂದ್ಯಗಳನ್ನು ಒಳಗೊಂಡಿದ್ದು, ಫೆಬ್ರವರಿ 2026 ರ ಆರಂಭದ ವೇಳೆಗೆ ಮುಕ್ತಾಯಗೊಳ್ಳಲಿದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಕ್ಯಾಲೆಂಡರ್‌ನೊಂದಿಗೆ ಮತ್ತು ತಂಡಗಳಿಗೆ ಹೆಚ್ಚುವರಿ ತಯಾರಿ ಸಮಯವನ್ನು ನೀಡಲು ಪರಿಷ್ಕೃತ ವೇಳಾಪಟ್ಟಿಯನ್ನು ವಿನ್ಯಾಸಗೊಳಿಸಲಾಗಿದೆ. ಮೆಗಾ ಹರಾಜನ್ನು ಸಹ ನಿರೀಕ್ಷಿಸಲಾಗಿದೆ.