ಟೆಕ್ಸಾಸ್: ಅಮೆರಿಕದಲ್ಲಿ ಭಾರತೀಯ ಕುಟುಂಬವೊಂದು ಮನೆಯ ಗೃಹಪ್ರವೇಶ ನೆರವೇರಿಸುವಾಗ ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ ಘಟನೆ ನಡೆದಿದೆ. ಟೆಕ್ಸಾಸ್ ನಗರದಲ್ಲಿ ನಡೆದ ಘಟನೆ ಇದಾಗಿದ್ದು, ಮನೆಯಲ್ಲಿ ಹೋಮ, ಹವನ ನೆರವೇರಿಸುತ್ತಿರುವಾಗ ಅಗ್ನಿಶಾಮಕ ದಳದವರು ಆಗಮಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video)ಆಗಿದೆ. ಮನೆಯಲ್ಲಿ ಹೋಮ ಹವನದ ಹೊಗೆಯನ್ನು ನೋಡಿದ ನೆರೆಹೊರೆಯವರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಹೀಗಾಗಿ ಅವರು ಸ್ಥಳಕ್ಕಾಗಮಿಸಿದ್ದಾರೆ.
ವಿಡಿಯೊದಲ್ಲಿ, ಗ್ಯಾರೇಜ್ ಒಳಗೆ ಹೋಮ-ಹವನ ನೆರವೇರಿಸಲಾಗಿದೆ. ಈ ವೇಳೆ ಹೊಗೆಯಾವರಿಸಿಕೊಂಡಿದೆ. ಸ್ವಲ್ಪ ಸಮಯದ ನಂತರ, ಅಗ್ನಿಶಾಮಕ ದಳದವರು ಬಂದು ಕುಟುಂಬದೊಂದಿಗೆ ಮಾತನಾಡುತ್ತಾರೆ. ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಅಥವಾ ಕುಟುಂಬವು ಆ ಪ್ರದೇಶದಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದೆಯೇ ಎಂಬುದು ವಿಡಿಯೊದಿಂದ ಸ್ಪಷ್ಟವಾಗಿಲ್ಲ.
“ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ಕುಟುಂಬವೊಂದು ಹಿಂದೂ ಸಂಪ್ರದಾಯದಂತೆ ಅಗ್ನಿ ದೇವರನ್ನು ಪೂಜಿಸುತ್ತಿತ್ತು. ನೆರೆಹೊರೆಯವರು ಅಗ್ನಿಶಾಮಕ ದಳದವರನ್ನು ಸಂಪರ್ಕಿಸಿದರು” ಎಂದು ಎಕ್ಸ್‌ನಲ್ಲಿ ವಿಡಿಯೊ ಸಹಿತ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ಸಾಂಸ್ಕೃತಿಕ ಜಾಗೃತಿ ಮತ್ತು ಸುರಕ್ಷತಾ ನಿಯಮಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಮನೆಗಳನ್ನು ಹೆಚ್ಚಾಗಿ ಮರದ ಗೋಡೆಗಳಿಂದ ನಿರ್ಮಿಸಲಾಗಿರುವ ಮನೆಯೊಳಗೆ ಹೋಮ ಹವನ ನಡೆಸಿದ್ದಕ್ಕಾಗಿ ಕೆಲವರು ಕುಟುಂಬವನ್ನು ಟೀಕಿಸಿದರು.
ವಿಡಿಯೊ ವೀಕ್ಷಿಸಿ:
A group of Indians were worshipping the Hindu fire god in Texas, and the neighbors call the fire fighters on them. pic.twitter.com/9mSBeJbVpn
— Papa Tiger (@BengaliFalcon71) August 4, 2025
“ನೀವು ವಾಸಿಸುವ ದೇಶದ ನಿಯಮಗಳನ್ನು ನೀವು ಪಾಲಿಸಬೇಕು. ಅವರು ನಮ್ಮ ಧರ್ಮವನ್ನು ಅನುಸರಿಸುವುದಿಲ್ಲ, ಆದ್ದರಿಂದ ಅವರಿಗೆ ಅದು ಅರ್ಥವಾಗುವುದಿಲ್ಲ. ಅವರು ಅಗ್ನಿಶಾಮಕ ಇಲಾಖೆಯಿಂದ ಹವನ ಮಾಡಲು ಪರವಾನಗಿ ಪಡೆಯಬೇಕಿತ್ತು” ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.
ಇನ್ನೂ ಕೆಲವರು ತಮ್ಮ ಸಂಸ್ಕೃತಿಯನ್ನು ಪಾಲಿಸುವ ಕುಟುಂಬದ ಹಕ್ಕನ್ನು ಸಮರ್ಥಿಸಿಕೊಂಡರು. “ಇವರು ಯಾರಿಗೂ ನೋವುಂಟು ಮಾಡಿಲ್ಲ ಅಥವಾ ಆಸ್ತಿಗೆ ಹಾನಿ ಮಾಡಿಲ್ಲ. ಅವರು ಸರಳ ಪೂಜೆ ಮಾಡುತ್ತಿದ್ದರು. ಜನರು ತಮ್ಮ ಗ್ಯಾರೇಜ್‌ನಲ್ಲಿ ಹವನ ನೆರವೇರಿಸಿದ್ದಾರೆ. ಅದಕ್ಕಾಗಿ ಅಗ್ನಿಶಾಮಕ ಇಲಾಖೆಗೆ ಕರೆ ಮಾಡುವುದು ಸರಿಯಲ್ಲ” ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಹೆಮ್ಮೆ ವ್ಯಕ್ತಪಡಿಸಿದ ಭಾರತೀಯ ಅಮೆರಿಕನ್ನರು
ಇನ್ನು ಘಟನೆ ಬಗ್ಗೆ ಅನೇಕ ಭಾರತೀಯ ಅಮೆರಿಕನ್ನರು ಹೆಮ್ಮೆ ವ್ಯಕ್ತಪಡಿಸಿದರು. “ನಾನು ಮೊದಲ ತಲೆಮಾರಿನ ಭಾರತೀಯ ಅಮೆರಿಕನ್, ಇದು ನನಗೆ ಹೆಮ್ಮೆ ತರುತ್ತದೆ ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.