ಫೋನಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬನ ತಲೆಗೆ ವಿಷಕಾರಿ ಹಾವೊಂದು ಕಚ್ಚಿತ್ತು. ಆದರೆ ಆತ ಟೋಪಿ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.ಇದೀಗ ವ್ಯಕ್ತಿಯೊಬ್ಬ ಹರಿಯುತ್ತಿರುವ ನದಿಯ ಪಕ್ಕದಲ್ಲಿ ತನ್ನ ಸ್ನೇಹಿತರೊಂದಿಗೆ ಕುಳಿತು ಮಾತನಾಡುತ್ತಿರುವಾಗ ಅವನ ಮೇಲೆ ಹಾವೊಂದು(Snake) ದಾಳಿ ಮಾಡಿದೆ. ಇದನ್ನು ಕಂಡು ಸ್ನೇಹಿತರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ಭಯಭೀತರನ್ನಾಗಿ ಮಾಡಿದೆ.
ವೈರಲ್ ಆದ ವಿಡಿಯೊದಲ್ಲಿ ಸ್ನೇಹಿತರ ಗುಂಪೊಂದು ನದಿ ತೀರದಲ್ಲಿ ಎಂಜಾಯ್ ಮಾಡುತ್ತಿರುವುದು ಸೆರೆಹಿಡಿಯಲಾಗಿದೆ. ಯುವಕನೊಬ್ಬ ಪೊದೆಯ ಬಳಿ ಕುಳಿತಿದ್ದಾಗ ಹಾವು ಅವನ ಮೇಲೆ ದಾಳಿ ಮಾಡಿದೆ.ಆದರೆ ಯುವಕ ಪವಾಡಸದೃಶವೆಂಬಂತೆ ಅದರಿಂದ ತಪ್ಪಿಸಿಕೊಂಡಿದ್ದಾನೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ಹಾಸ್ಯಮಯವಾಗಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಒಬ್ಬರು, "ಅವರ ತಲೆಯ ಮೇಲೆ ಸಾವಿನ ಕತ್ತಿ ನೇತಾಡುತ್ತಿತ್ತು" ಎಂದು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರಲ್ಲಿ ಒಬ್ಬರು, "ಅವರು ಅದೃಷ್ಟವಂತರು!!!! ಸಾವಿನ ದವಡೆಯಿಂದ ತಪ್ಪಿಸಿಕೊಂಡರು" ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಆಡ್ತಾ ಆಡ್ತಾ ರೋಡ್‌ಗೆ ಬಂದ ಬಾಲಕಿಗೆ ಆಟೋ ಡಿಕ್ಕಿ! ಎದೆ ಝಲ್ಲೆನಿಸುವ ವಿಡಿಯೊ ವೈರಲ್
ದೈತ್ಯ ಹೆಬ್ಬಾವಿನ ಹೊಟ್ಟೆ ಕತ್ತರಿಸಿದ ಸ್ಥಳೀಯರು
ಇಂಡೋನೇಷ್ಯಾದ ಆಗ್ನೇಯ ಸುಲಾವೆಸಿಯ ಬಟೌಗಾದ ಮಜಾಪಹಿತ್ ಗ್ರಾಮದ 63 ವರ್ಷದ ರೈತ ಲಾ ನೋಟಿ ಅವನ ಮೃತದೇಹ ಎಂಟು ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಪತ್ತೆಯಾಗಿದೆ. ಬೆಳಿಗ್ಗೆಯಿಂದ ಜಮೀನಿನಿಂದ ಮನೆಗೆ ಬಾರದಿದ್ದಾಗ ಆತನ ಮನೆಯವರು ಹುಡುಕಲು ಶುರುಮಾಡಿದ್ದಾರೆ.ಪ್ಲಾಟೇಶನ್ ಪ್ರದೇಶದಲ್ಲಿ ಹುಡುಕಿದಾಗ, ನಿವಾಸಿಗಳು ಹೆಬ್ಬಾವೊಂದರ ಹೊಟ್ಟೆಯಲ್ಲಿ ಮನುಷ್ಯನಿರುವುದನ್ನು ಕಂಡುಕೊಂಡಿದ್ದರು. ನಂತರ ಅದರ ಹೊಟ್ಟೆಯನ್ನು ಕತ್ತರಿಸಿ ನೋಡಿದಾಗ, ರೈತನ ಶವ ಒಳಗೆ ಇರುವುದನ್ನು ನೋಡಿ ಅವರು ಶಾಕ್ ಆಗಿದ್ದಾರೆ. ವರದಿ ಪ್ರಕಾರ, ಈ ಪ್ರದೇಶದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ, ಜಾನುವಾರುಗಳ ಮೇಲೆ ದಾಳಿ ಮಾಡುವ ಹೆಬ್ಬಾವುಗಳು ಆಗಾಗ್ಗೆ ಕಂಡುಬರುತ್ತಿದ್ದವು. ಆದರೆ ವ್ಯಕ್ತಿಯೊಬ್ಬರನ್ನು ಹೆಬ್ಬಾವು ನುಂಗಿದ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದು ಎನ್ನಲಾಗಿದೆ.