ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಆಡ್ತಾ ಆಡ್ತಾ ರೋಡ್‌ಗೆ ಬಂದ ಬಾಲಕಿಗೆ ಆಟೋ ಡಿಕ್ಕಿ! ಎದೆ ಝಲ್ಲೆನಿಸುವ ವಿಡಿಯೊ ವೈರಲ್‌

ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಆಟೋರಿಕ್ಷಾವೊಂದು 3 ವರ್ಷದ ಬಾಲಕಿ ಮೇಲೆ ಹರಿದು ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಬಾಲಕಿಗೆ ಡಿಕ್ಕಿ ಹೊಡೆದ ಆಟೋ; ಶಾಕಿಂಗ್‌ ವಿಡಿಯೊ ವೈರಲ್‌

Profile pavithra Jul 7, 2025 3:13 PM

ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಆಟೋರಿಕ್ಷಾವೊಂದು 3 ವರ್ಷದ ಬಾಲಕಿಯ ಮೇಲೆ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ನಡೆದಿದೆ. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿ ಘಟನೆಯ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಿದೆ. ಪಟ್ಟಣದ ಹೃದಯಭಾಗದಲ್ಲಿರುವ ಚಿನ್ನ ಕಡೈ ಬೀದಿಯಲ್ಲಿರುವ ಕಿರಿದಾದ ವಸತಿ ಲೇನ್‌ನಲ್ಲಿ ಈ ಘಟನೆ ನಡೆದಿದೆ. ವೈರಲ್(Viral Video) ಆದ ವಿಡಿಯೊದಲ್ಲಿ ಜನರು ನಡೆದುಕೊಂಡು ಹೋಗುತ್ತಿರುವ ಕಿರಿದಾದ ಬೈಲೇನ್‌ಗೆ ಆಟೋರಿಕ್ಷಾ ಒಂದು ಬರುವುದು ಸೆರೆಯಾಗಿದೆ.ಆದರೆ ಅಚಾನಕ್ ಆಗಿ 3 ವರ್ಷದ ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಾ ಬೀದಿಯಲ್ಲಿ ಓಡುತ್ತಾ ಬಂದಾಗ ಆಟೋ ಬಾಲಕಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಅಪ್ರಾಪ್ತ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ನಂತರ ಆಕೆಯ ಸಂಬಂಧಿಕರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಈ ಅಪಘಾತದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಶುರುಮಾಡಿದ್ದಾರೆ ಮತ್ತು ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಬಿಹಾರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸೀತಾಮರ್ಹಿಯ ಮೆಹ್ಸೌಲ್‌ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ಆಟೋ ಚಾಲಕನೊಬ್ಬ ರೈಲ್ವೆ ಹಳಿ ಮೇಲೆ ತನ್ನ ಆಟೋವನ್ನು ಓಡಿಸಿದ್ದಾನೆ. ನಂತರ ಸ್ಥಳೀಯರು ಆತನನ್ನು ಹಳಿಯಿಂದ ಹೊರಗೆಳೆದು ಮೆಹ್ಸೌಲ್‌ನಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನೂ ಓದಿ:Viral Video: ರೈಲು ಚಲಿಸ್ತಿದ್ರೆ ಹಳಿಗಳ ಮೇಲೆ ಮಲಗಿ ಯುವಕನಿಂದ ರೀಲ್ಸ್‌...ಆಮೇಲೆ ನಡೆದಿದ್ದೇ ಬೇರೆ! ವಿಡಿಯೊ ಫುಲ್‌ ವೈರಲ್‌

ಮೆಹ್ಸೌಲ್ ರೈಲ್ವೆ ಕ್ರಾಸಿಂಗ್ ಬಳಿ ಕುಡಿದ ಅಮಲಿನಲ್ಲಿದ್ದ ಆಟೋ ಚಾಲಕನೊಬ್ಬ ಇದ್ದಕ್ಕಿದ್ದಂತೆ ರೈಲ್ವೆ ಹಳಿಯ ಮೇಲೆ ಹತ್ತಿದ್ದಾನೆ. ಕೂಡಲೇ ಸ್ಥಳೀಯ ಜನರು ಚಾಲಕನನ್ನು ಹಳಿಯಿಂದ ಹೊರಗೆ ಕರೆದುಕೊಂಡು ಬರಲು ಪ್ರಯತ್ನಿಸಿದ್ದಾರೆ. ನಂತರ ಹೇಗೋ ಜನರು ಚಾಲಕನನ್ನು ತಡೆದು ಆಟೋವನ್ನು ಹಳಿಯಿಂದ ಹೊರಗೆ ತಂದಿದ್ದಾರೆ. ಇದರಿಂದ ದೊಡ್ಡ ಅಪಘಾತವೊಂದು ತಪ್ಪಿತು.