ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಬಾಲಿ ಟ್ರಿಪ್‌ ಎಂಜಾಯ್‌ ಮಾಡ್ತಿದ್ದ ನಟಿಗೆ ಆಗಿತ್ತು ಭಯಾನಕ ಅನುಭವ! ಬೆಚ್ಚಿ ಬೀಳಿಸುವಂತಿದೆ ಈಕೆ ಹೇಳುವ ಸ್ಟೋರಿ

Actress Surveen Chawla: ನಟಿ ಸುರ್ವೀನ್ ಚಾವ್ಲಾ ಅವರು ಇತ್ತೀಚೆಗೆ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಮಾಡುವಾಗ ಅವರ ಕುಟುಂಬಕ್ಕಾದ ಭಯಾನಕ ಅನುಭವದ ಬಗ್ಗೆ ಅವರು ಹೇಳಿದ್ದಾರೆ. ನಟಿಯು ಬಾಲಿಗೆ ಪ್ರವಾಸ ಮಾಡುವಾಗ ತಾನು ಮತ್ತು ತನ್ನ ಕುಟುಂಬ ಎದುರಿಸಿದ ಭಯಾನಕ ಘಟನೆಯನ್ನು ನೆನಪಿಸಿಕೊಂಡರು. ಅವರ ಸೋದರಮಾವ ಕ್ಲಿಕ್ಕಿಸಿದ ಫೋಟೋದ ಬಗ್ಗೆ ಅವರು ವಿವರಿಸಿದ್ದಾರೆ.

ಮುಂಬೈ: ನಟಿ ಸುರ್ವೀನ್ ಚಾವ್ಲಾ (Surveen Chawla) ಅವರು ಅಂಧೇರಾ ಎಂಬ ಹೊಸ ವೆಬ್ ಸರಣಿಯಲ್ಲಿ ಅಭಿನಯಿಸಿದ್ದಾರೆ. ರಾಘವ್ ದಾರ್ ನಿರ್ದೇಶನದ ಈ ಹಾರರ್ ಶೋ ಆಗಸ್ಟ್ 14 ರಂದು ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನಗೊಂಡಿತು. ನಟಿಯು ವೆಬ್ ಸರಣಿ ಪ್ರಮೋಶನ್ ವೇಳೆ ಕೆಲವೊಂದು ವಿಚಾರಗಳನ್ನು ತಿಳಿಸಿದ್ದಾರೆ. ಇಂಡೋನೇಷ್ಯಾದ ಬಾಲಿಗೆ (Bali) ಪ್ರವಾಸ ಮಾಡುವಾಗ ಅವರ ಕುಟುಂಬಕ್ಕಾದ ಭಯಾನಕ ಅನುಭವದ ಬಗ್ಗೆ ಅವರು ಹೇಳಿದ್ದಾರೆ.

ನಟಿಯು ಬಾಲಿಗೆ ಪ್ರವಾಸ ಮಾಡುವಾಗ ತಾನು ಮತ್ತು ತನ್ನ ಕುಟುಂಬ ಎದುರಿಸಿದ ಭಯಾನಕ ಘಟನೆಯನ್ನು ನೆನಪಿಸಿಕೊಂಡರು. “ನಾನು ಕೆಲವು ತಿಂಗಳ ಹಿಂದೆ ಬಾಲಿಗೆ ಕುಟುಂಬದೊಂದಿದೆ ಹೋಗಿದ್ದೆ. ಬಹಳಷ್ಟು ಜನರಿದ್ದ ಕಾರಣ ಎರಡು ವಿಲ್ಲಾಗಳನ್ನು ಬುಕ್ ಮಾಡಿದೆವು. ಒಂದು ವಿಲ್ಲಾದಲ್ಲಿ ಎಲ್ಲಾ ಮಕ್ಕಳು, ಯುವಕರಿದ್ದರೆ, ಇನ್ನೊಂದು ವಿಲ್ಲಾದಲ್ಲಿ ಅಮ್ಮಂದಿರು, ಅಪ್ಪಂದಿರು ಇದ್ದರು”. ಈ ವೇಳೆ ಭಯಾನಕ ಘಟನೆ ನಡೆಯಿತು ಎಂದು ವಿವರಿಸಿದ್ದಾರೆ.

ಒಂದು ಸಂಜೆ, ಅಲ್ಲಿನ ಬಾಲಿನೀಸ್ ಜನರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ, ಯಾವುದೋ ಪೂಜೆ ಅಥವಾ ಧಾರ್ಮಿಕ ಆಚರಣೆಯನ್ನು ಮಾಡುತ್ತಾ, ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಅವರು ನೋಡಿದರು. ನಂತರ ನಟಿಯ ಸೋದರ ಮಾವ, ಸಮಾರಂಭವನ್ನು ನಡೆಸುತ್ತಿದ್ದ ಇಬ್ಬರು ಬಾಲಿನೀಸ್ ಯುವತಿಯರೊಂದಿಗೆ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು. ಆದರೆ, ಯಾವಾಗ ಫೋಟೋ ಕ್ಲಿಕ್ಕಿಸಿಕೊಂಡರೋ ಆ ಬಳಿಕ ಬೇರೆ ತರಹದ ಅನುಭವವಾಗಲು ಶುರುವಾಯ್ತಂತೆ. “ಮರುದಿನ ತನ್ನ ಚಿಕ್ಕಮ್ಮ ವಿಲ್ಲಾದಲ್ಲಿನ ಕೊಳದಲ್ಲಿ ಬಿದ್ದರು. ಮತ್ತೊಬ್ಬ ಕುಟುಂಬ ಸದಸ್ಯರ ಮೊಣಕೈಗೆ ಗಾಯವಾಯಿತು. ನಂತರ, ಆರು ವರ್ಷದ ಬಾಲಕಿಗೆ ತೀವ್ರ ಅಲರ್ಜಿ ಉಂಟಾಯಿತು. ಅಲ್ಲದೆ, ತನ್ನ ಸೋದರಳಿಯ ತೀವ್ರ ಅಸ್ವಸ್ಥಗೊಂಡ. ಹೀಗಾಗಿ ವೈದ್ಯರನ್ನು ಕರೆಯಬೇಕಾಯಿತು” ಎಂದು ನಟಿ ವಿವರಿಸಿದ್ದಾರೆ.

ನಂತರ, ಮತ್ತಷ್ಟು ವಿವರಿಸಿದ ನಟಿ ಸುರ್ವೀನ್, ತನ್ನ ಸೋದರಮಾವ ವಿಲ್ಲಾದ ಕೋಣೆಗೆ ಹೋಗಿದ್ದಾರೆ. ತಾನು ಮೊಬೈಲ್‌ನಲ್ಲಿ ತೆಗೆದ ಫೋಟೋಗಳನ್ನು ನೋಡಲು ಶುರು ಮಾಡಿದ್ದಾರೆ. ಈ ವೇಳೆ ಆ ಇಬ್ಬರು ಬಾಲಿನೀಸ್ ಯುವತಿಯರ ಫೋಟೋದಲ್ಲಿ ಇದ್ದಕ್ಕಿದ್ದಂತೆ ಎರಡು ಡ್ರಾಕುಲಾ ಹಲ್ಲುಗಳು ಹೊರಬಂದಿವೆ. ಅದು ತುಂಬಾ ಭಯಾನಕವಾಗಿತ್ತು. ಫೋಟೋ ತೆಗೆಯುವಾಗ ಆ ರೀತಿ ಹಲ್ಲುಗಳು ಇರಲಿಲ್ಲ. ಹೀಗಾಗಿ ಇದರಿಂದ ಹೆದರಿದ ಸೋದರಮಾವ ಆ ಫೋಟೋಗಳನ್ನು ಡಿಲೀಟ್ ಮಾಡಿದರಂತೆ. ಮರುದಿನವೇ ಭಾರತಕ್ಕೆ ಹಿಂದಿರುಗಿದ್ದಾರೆ. ಭಾರತಕ್ಕೆ ವಾಪಾಸ್ ಆದ ಬಳಿಕ ಎಲ್ಲರ ಆರೋಗ್ಯವು ಸರಿಯಾಗಿದೆ ಎಂದು ನಟಿ ಭಯಾನಕ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral News: ಫೇಸ್‌ಬುಕ್‌ನಲ್ಲಿ ಫ್ರೆಂಡ್‌ಶಿಪ್‌- ಬಾಲಕಿಯ ಭೇಟಿಗೆ 100 ಕಿ.ಮೀ ಪ್ರಯಾಣಿಸಿದ- ಆಮೇಲೆ ನಡೆದಿದ್ದೇ ಬೇರೆ!