Viral News: ಫೇಸ್ಬುಕ್ನಲ್ಲಿ ಫ್ರೆಂಡ್‌ಶಿಪ್- ಬಾಲಕಿಯ ಭೇಟಿಗೆ 100 ಕಿ.ಮೀ ಪ್ರಯಾಣಿಸಿದ- ಆಮೇಲೆ ನಡೆದಿದ್ದೇ ಬೇರೆ!
A man tied and beaten: ಫೇಸ್‌ಬುಕ್ ಸ್ನೇಹಿತೆಯನ್ನು ಭೇಟಿಯಾಗಲು ಹೋಗಿ, ವ್ಯಕ್ತಿಯೊಬ್ಬ ಆಕೆಯ ಕುಟುಂಬ ಸದಸ್ಯರಿಂದ ಹಿಗ್ಗಾಮುಗ್ಗಾ ಥಳಿತಕ್ಕೊಳಗಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರೇವಾದ ವ್ಯಕ್ತಿಯು ಬಾಲಕಿಯನ್ನು ಭೇಟಿಯಾಗಲು ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಹೋಗಿದ್ದ. ಈ ವೇಳೆ ಬಾಲಕಿಯ ಕುಟುಂಬ ಸದಸ್ಯರ ಕೈಗೆ ಸಿಕ್ಕಿಬಿದ್ದು ಪಡಬಾರದ ಕಷ್ಟ ಪಟ್ಟಿದ್ದಾನೆ.


ಇಂದೋರ್: ಫೇಸ್‌ಬುಕ್ ಸ್ನೇಹಿತೆಯನ್ನು ಭೇಟಿಯಾಗಲು 100 ಕಿ.ಮೀ ಪ್ರಯಾಣಿಸಿದ ವ್ಯಕ್ತಿಯೊಬ್ಬನನ್ನು ಆಕೆಯ ಕುಟುಂಬಸ್ಥರು ಕಟ್ಟಿಹಾಕಿ ಥಳಿಸಿರುವ ಆತಂಕಕಾರಿ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಫೇಸ್‍ಬುಕ್‍ನಲ್ಲಿ (Facebook) ತಮ್ಮ ಮನೆಯ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ಭೇಟಿಯಾಗಲು ಬಂದಿದ್ದಕ್ಕೆ ಕೋಪಗೊಂಡು ಆತನನ್ನು ಹಲವಾರು ಗಂಟೆಗಳ ಕಾಲ ಕಟ್ಟಿ ಹಾಕಿ ಆಕೆಯ ಕುಟುಂಬ ಸದಸ್ಯರು ಹಲ್ಲೆ ನಡೆಸಿದ್ದಾರೆ.
ರೇವಾದ ವ್ಯಕ್ತಿಯು ಬಾಲಕಿಯನ್ನು ಭೇಟಿಯಾಗಲು ಮೌಗಂಜ್‌ನ ಪಿಪ್ರಾಹಿ ಗ್ರಾಮಕ್ಕೆ ಹೋಗಿದ್ದ. ಅಂದರೆ ಸುಮಾರು 100 ಕಿ.ಮೀ ಪ್ರಯಾಣ ಬೆಳೆಸಿದ್ದಾನೆ. ಈ ವೇಳೆ ಆಕೆಯ ಕುಟುಂಬ ಸದಸ್ಯರು ಆತನನ್ನು ಹಿಡಿದು ಕಟ್ಟಿ ಹಾಕಿದ್ದಾರೆ. ವರದಿಯ ಪ್ರಕಾರ, ಬಾಲಕಿಯ ಕುಟುಂಬ ಸದಸ್ಯರು ಆತನನ್ನು ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಕಟ್ಟಿ ಹಾಕಿ ಹೊಡೆಯಲು ಪ್ರಾರಂಭಿಸಿದ್ದು, ಭಾನುವಾರ ಬೆಳಿಗ್ಗೆ 10 ಗಂಟೆಯವರೆಗೂ ಹೊಡೆದಿದ್ದಾರೆ ಎಂದು ಹೇಳಲಾಗಿದೆ.
ಸುಮಾರು 13 ಗಂಟೆಗಳ ಕಾಲ ಆತನ ಮೇಲೆ ಕ್ರೂರವಾಗಿ ಥಳಿಸಿದ್ದಾರೆ. ಪೊಲೀಸರ ಪ್ರಕಾರ, ಹುಡುಗಿ ಅಪ್ರಾಪ್ತ ವಯಸ್ಕಳಾಗಿದ್ದು, ಆ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಅವಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಹೀಗಾಗಿ ಬಾಲಕಿಯನ್ನು ಭೇಟಿಯಾಗಲು 100 ಕಿ.ಮೀ ಪ್ರಯಾಣಿಸಿ, ಆಕೆಯ ಗ್ರಾಮಕ್ಕೆ ಬಂದಿದ್ದಾನೆ. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಕೋಪಗೊಂಡು ಆತನನ್ನು ಕಟ್ಟಿ ಹಾಕಿ ಮನಬಂದಂತೆ ಥಳಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಹನುಮಾನ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.
ಜಾನುವಾರು ನುಗ್ಗಿದ್ದಕ್ಕೆ ನಡೆದಿತ್ತು ಕೊಲೆ
ಜುಲೈನಲ್ಲಿ ಮಧ್ಯಪ್ರದೇಶದಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿ, ಛತ್ತರ್‌ಪುರ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರ ಜಾನುವಾರುಗಳು ಮತ್ತೊಂದು ಕುಟುಂಬದ ಜಮೀನಿಗೆ ನುಗ್ಗಿತ್ತು. ಇದರಿಂದ ಕೋಪಗೊಂಡ ಆ ಮನೆಯವರು ಆತನನ್ನು ಥಳಿಸಿ ಕೊಂದಿದ್ದರು. ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ಖೈರ್ ರತಿಯಾನ್ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಜಾನುವಾರು ನುಗ್ಗಿದ್ದಕ್ಕೆ ಅದರ ಮಾಲೀಕನನ್ನು ಮರಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೀವ್ರ ಹಲ್ಲೆಗೊಳಗಾಗಿದ್ದರಿಂದ ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಸಂಬಂಧ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ವರದಿ ಪ್ರಕಾರ, ಮೃತಪಟ್ಟ ವ್ಯಕ್ತಿಯ ಕುಟುಂಬ ಮತ್ತು ಆರೋಪಿ ಕುಟುಂಬದ ಕೃಷಿಭೂಮಿ ಹತ್ತಿರದಲ್ಲಿದೆ. ದನಗಳು ಪಕ್ಕದ ಜಮೀನಿಗೆ ಪ್ರವೇಶಿಸಿದ್ದರಿಂದ ವಿವಾದ ಭುಗಿಲೆದ್ದಿತು. ಜಾನುವಾರುಗಳ ಮಾಲೀಕನನ್ನು ವಿವಸ್ತ್ರಗೊಳಿಸಿ ಥಳಿಸಲಾಗಿದೆ ಎಂದು ಆರೋಪಿಸಲಾಗಿದೆ. ನೆಲದ ಮೇಲೆ ಶವ ಬೆತ್ತಲೆಯಾಗಿ ಪತ್ತೆಯಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi CM: ದೆಹಲಿ ಸಿಎಂ ಹಲ್ಲೆ ಪ್ರಕರಣ; ಒಂದು ದಿನ ಮೊದಲು ರೇಖಾ ಗುಪ್ತಾ ಮೇಲೆ ಮನೆ ಬಳಿ ವಿಡಿಯೊ ಚಿತ್ರೀಕರಿಸಿದ್ದ ಆರೋಪಿ