ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಹಾವು ಕಚ್ಚಿದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸದೇ ಈ ಮೂಢ ಜನ ಮಾಡಿದ್ದೇನು ಗೊತ್ತಾ?

Villagers Perform Exorcism Rituals: ಹಾವು ಕಚ್ಚಿದ ಮಹಿಳೆಯೊಬ್ಬಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು ಭೂತೋಚ್ಛಾಟನೆಗೆ ಒಳಪಡಿಸಿರುವ ಆಘಾತಕಾರಿ ಘಟನೆ ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದಿದೆ. ಕ್ಯಾಮರಾದಲ್ಲಿ ಸೆರೆಯಾದ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.

ಪಟನಾ: ಭಾರತದಲ್ಲಿ ಇನ್ನೂ ಅನೇಕ ಮೂಢನಂಬಿಕೆಗಳು ಆಚರಣೆಯಲ್ಲಿದೆ. ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಹಾವು ಕಚ್ಚಿದ (snake bite) ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸುವ ಬದಲು ದೆವ್ವ ಹಿಡಿದಿದೆ ಎಂದು ಅದನ್ನು ಉಚ್ಛಾಟಿಸಲು ಮುಂದಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕ್ಯಾಮರಾದಲ್ಲಿ ಸೆರೆಯಾದ ಈ ಘಟನೆ ಎಕ್ಸ್‌ನಲ್ಲಿ ಭಾರಿ ವೈರಲ್ (Viral Video) ಆಗಿದೆ.

ವೈರಲ್ ಆಗಿರುವ ದೃಶ್ಯಾವಳಿಗಳಲ್ಲಿ, ಗ್ರಾಮಸ್ಥರ ಗುಂಪಿನಿಂದ ಸುತ್ತುವರೆದಿರುವ ಮಹಿಳೆ ನೆಲದ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಾಣಬಹುದು. ಸೂಕ್ತ ವೈದ್ಯಕೀಯ ಚಿಕಿತ್ಸೆಗಾಗಿ ಆಕೆಯನ್ನು ಕರೆದೊಯ್ಯುವ ಬದಲು, ಅಲ್ಲಿದ್ದವರು ಭೂತೋಚ್ಚಾಟನೆ ಎಂಬ ಆಚರಣೆಯನ್ನು ನಡೆಸುತ್ತಿರುವುದು ಕಂಡುಬಂದಿದೆ. ಆಘಾತಕಾರಿ ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಕೋಲಿನಿಂದ ಹಾವನ್ನು ಹಿಡಿದು ಮಹಿಳೆಯ ಹತ್ತಿರ ಅಪಾಯಕಾರಿಯಾಗಿ ಇಟ್ಟಿದ್ದಾನೆ.

ಹಾವು ಮಹಿಳೆಯ ದೇಹದಿಂದ ವಿಷವನ್ನು ಹೀರುತ್ತದೆ ಎಂಬ ನಂಬಿಕೆಯಲ್ಲಿ ಅವನು ಹಾಗೆ ಮಾಡುತ್ತಿದ್ದಾನೆ. ಎಲ್ಲರೂ ನೋಡುತ್ತಿದ್ದಂತೆಯೇ ಹಾವು ಮಹಿಳೆಯ ದೇಹವನ್ನು ಕಚ್ಚುತ್ತಲೇ ಇತ್ತು. ಮಹಿಳೆ ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ. ಮಹಿಳೆಯ ಪ್ರಸ್ತುತ ಸ್ಥಿತಿ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವಿಡಿಯೊ ವೀಕ್ಷಿಸಿ:



ಇನ್ನು ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಯ ಹರಡುವಿಕೆ ಮತ್ತು ಅರಿವಿನ ಕೊರತೆಯ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬರು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ.

ಇಂತಹ ಮೂಢನಂಬಿಕೆಗಳಿಗೆ ಬಲಿಯಾಗಬಾರದು ಎಂದು ಒಬ್ಬ ಬಳಕೆದಾರರು ಹೇಳಿದರು. ಹೆಚ್ಚಿನ ಅನಕ್ಷರಸ್ಥ ಜನರು ವಾಸಿಸುವ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಮತ್ತು ಆಡಳಿತವು ಜಾಗೃತಿ ಅಭಿಯಾನಗಳನ್ನು ನಡೆಸಬೇಕು. ಅಲ್ಲಿನ ಹೆಚ್ಚಿನ ಜನರು ಈ ಮೂಢನಂಬಿಕೆ ಮತ್ತು ಬೂಟಾಟಿಕೆಯಲ್ಲಿ ಸಿಲುಕಿದ್ದಾರೆ. ಹಾವು ಅಥವಾ ಚೇಳು ಕಚ್ಚಿದಾಗಲೆಲ್ಲಾ ಎಲ್ಲರೂ ವೈದ್ಯರ ಬಳಿಗೆ ಹೋಗದೆ ತಾಂತ್ರಿಕರ ಬಳಿಗೆ ಹೋಗುತ್ತಾರೆ ಎಂದು ವ್ಯಕ್ತಿಯೊಬ್ಬಳು ಹೇಳಿದರು. ಈ ಮೂಢನಂಬಿಕೆಯಿಂದಾಗಿ ಪ್ರತಿ ವರ್ಷ ಎಷ್ಟು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ? ಆದರೂ, ಕೆಲವರು ಮೂಢನಂಬಿಕೆಯಿಂದ ಹೊರಬರುವುದಿಲ್ಲ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲೂ ಇದೇ ರೀತಿಯ ಘಟನೆ

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಮತ್ತೊಂದು ವಿಚಿತ್ರ ಪ್ರಕರಣ ವರದಿಯಾಗಿದೆ. ಅಜ್ಗರ್ ಖಾನ್ ಎಂಬ ಯುವಕ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಹಾವು ಕಚ್ಚಿದೆ. ಆದರೆ ಆತನನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯುವ ಬದಲು, ಆತನ ಕುಟುಂಬವು ವಿಡಿಯೊ ಕರೆಯ ಮೂಲಕ ಮಾಂತ್ರಿಕನನ್ನು ಕರೆದು ವಿಧಿವಿಧಾನಗಳನ್ನು ಮಾಡಿಸಿತು. ಝುಗಿಯಾ ಕ್ಯಾಂಪ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಹಾವು ಕಡಿತದ ನಂತರ ಆತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅವರ ಕುಟುಂಬವು ಆಸ್ಪತ್ರೆಯ ಗೇಟ್ ಹೊರಗೆ ಮೂಢನಂಬಿಕೆ ಆಚರಣೆಗಳನ್ನು ಮಾಡುತ್ತಾ ಒಂದು ಗಂಟೆಗೂ ಹೆಚ್ಚು ಕಾಲ ಕಳೆದಿದ್ದಾರೆ. ಆತನ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ನಂತರ ಕುಟುಂಬವು ಆಸ್ಪತ್ರೆಗೆ ದಾಖಲಿಸಿತು. ವೈದ್ಯಕೀಯ ಆರೈಕೆ ಪಡೆದ ನಂತರ ಅಜ್ಗರ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.

ಇದನ್ನೂ ಓದಿ: Viral News: ನೀಲಿ ಮೊಟ್ಟೆಯಿಟ್ಟ ನಾಟಿ ಕೋಳಿ; ದಾವಣಗೆರೆಯಲ್ಲಿ ನಡೆಯಿತು ವಿಚಿತ್ರ ಘಟನೆ