ನ್ಯೂಯಾರ್ಕ್: ಅಕಾಡೆಮಿ ಪ್ರಶಸ್ತಿ ವಿಜೇತೆ, ಉದ್ಯಮಿ, ಮತ್ತು ಕೋಲ್ಡ್‌ಪ್ಲೇ (Coldplay) ಗಾಯಕ ಕ್ರಿಸ್ ಮಾರ್ಟಿನ್‌ರ (Chris Martin) ಮಾಜಿ ಪತ್ನಿ ಗ್ವಿನೆತ್ ಪಾಲ್ಟ್ರೋ (Gwyneth Paltrow) ಅವರನ್ನು ಆಸ್ಟ್ರೊನಾಮರ್ (Astronomer) ತಾತ್ಕಾಲಿಕ ವಕ್ತಾರೆಯಾಗಿ ನೇಮಿಸಿದೆ. ಕೋಲ್ಡ್‌ಪ್ಲೇ ಕಾನ್ಸರ್ಟ್‌ನಲ್ಲಿ ‘ಕಿಸ್ ಕ್ಯಾಮ್’ ಘಟನೆ ವೈರಲ್ ಆದ ಬಳಿಕ CEO ಆಂಡಿ ಬೈರನ್ ಮತ್ತು HR ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬೊಟ್ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಆಸ್ಟ್ರೊನಾಮರ್‌ನ ವಿಡಿಯೋದಲ್ಲಿ ಮಾತನಾಡಿರುವ ಪಾಲ್ಟ್ರೋ, “ನಾನು ಗ್ವಿನೆತ್ ಪಾಲ್ಟ್ರೋ. 300ಕ್ಕೂ ಹೆಚ್ಚು ಉದ್ಯೋಗಿಗಳ ಪರವಾಗಿ ತಾತ್ಕಾಲಿಕವಾಗಿ ಮಾತನಾಡಲು ಆಸ್ಟ್ರೊನಾಮರ್‌ನಿಂದ ನೇಮಕಗೊಂಡಿದ್ದೇನೆ. ಕಳೆದ ಕೆಲವು ದಿನಗಳಿಂದ ಉದ್ಭವಿಸಿರುವ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಕಂಪನಿಯು ಇಚ್ಛಿಸಿದೆ” ಎಂದಿದ್ದಾರೆ. ಪಾಲ್ಟ್ರೋ ಮತ್ತು ಕ್ರಿಸ್ ಮಾರ್ಟಿನ್ 2003ರಿಂದ 2016ರವರೆಗೆ ವಿವಾಹ ಆಗಿದ್ದರು.
ಮ್ಯಾಸಚೂಸೆಟ್ಸ್‌ನ ಗಿಲ್ಲೆಟ್ ಸ್ಟೇಡಿಯಂನಲ್ಲಿ ನಡೆದ ಕೋಲ್ಡ್‌ಪ್ಲೇ ಕಾನ್ಸರ್ಟ್‌ನಲ್ಲಿ ಕ್ಯಾಬೊಟ್ ಮತ್ತು ಬೈರನ್ ಇಬ್ಬರೂ ‘ಕಿಸ್ ಕ್ಯಾಮ್’ನಲ್ಲಿ ಆತ್ಮೀಯ ಕ್ಷಣದಲ್ಲಿ ಕಾಣಿಸಿಕೊಂಡರು. ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ತೋರಿದ ಆತಂಕಕಾರಿ ಪ್ರತಿಕ್ರಿಯೆಯನ್ನು ಕ್ರಿಸ್ ಮಾರ್ಟಿನ್, “ಇವರು ಅಕ್ರಮ ಸಂಬಂಧದಲ್ಲಿರಬಹುದು” ಎಂದು ವಿನೋದವಾಗಿ ಹೇಳಿದ್ದರು. ಈ ವಿಡಿಯೋ ವೈರಲ್ ಆಗಿ, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಯಿತು.
ಈ ಸುದ್ದಿಯನ್ನೂ ಓದಿ: Andy Byron: ಕೋಲ್ಡ್ ಪ್ಲೇ ರೊಮ್ಯಾನ್ಸ್; CEO ಆ್ಯಂಡಿ ಬೈರೋನ್ ಬಳಿಕ HR ರಾಜಿನಾಮೆ
ಈ ವಿವಾದಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೊನಾಮರ್ ಆಂತರಿಕ ತನಿಖೆ ಆರಂಭಿಸಿತು ಮತ್ತು ಕ್ಯಾಬೊಟ್ ಮತ್ತು ಬೈರನ್‌ರನ್ನು ರಜೆ ಮೇಲೆ ಕಳುಹಿಸಿತು. ಬೈರನ್ ಶೀಘ್ರದಲ್ಲೇ ರಾಜೀನಾಮೆ ನೀಡಿದರು. ಸಹ-ಸಂಸ್ಥಾಪಕ ಹಾಗೂ ಮುಖ್ಯ ಉತ್ಪನ್ನ ಅಧಿಕಾರಿ ಪೀಟ್ ಡಿಜಾಯ್ ತಾತ್ಕಾಲಿಕ CEO ಆಗಿ ನೇಮಕಗೊಂಡರು. ಕೆಲವು ದಿನಗಳ ಬಳಿಕ ಕ್ಯಾಬೊಟ್ ಕೂಡ ರಾಜೀನಾಮೆ ಸಲ್ಲಿಸಿದರು.
ಆಸ್ಟ್ರೊನಾಮರ್ ಹೇಳಿಕೆಯಲ್ಲಿ, “ನಮ್ಮ ಸಂಸ್ಥೆಯಿಂದ ಮಾರ್ಗದರ್ಶನ ನೀಡಿರುವ ಮೌಲ್ಯಗಳು ಮತ್ತು ಸಂಸ್ಕೃತಿಗೆ ಬದ್ಧರಾಗಿದ್ದೇವೆ. ನಮ್ಮ ನಾಯಕರು ನಡವಳಿಕೆ ಮತ್ತು ಜವಾಬ್ದಾರಿಯಲ್ಲಿ ಮಾನದಂಡವನ್ನು ಸ್ಥಾಪಿಸಬೇಕು, ಆದರೆ ಇತ್ತೀಚೆಗೆ ಆ ಮಾನದಂಡವನ್ನು ತಲುಪಲಾಗಿಲ್ಲ,” ಎಂದಿದೆ.
ಈ ಸುದ್ದಿಯನ್ನು ಓದಿ: Viral News: ಇಲ್ಲೊಬ್ಬ ಗೊಂಬೆಯನ್ನು ಮದುವೆಯಾಗಿ ಮೂರು ಮಕ್ಕಳಿಗೆ ತಂದೆಯಾದರೆ, ಮಹಿಳೆಯೊಬ್ಬಳು ನಾಲ್ಕು ಬಾರಿ ಗರ್ಭಿಣಿಯಾದಳಂತೆ! ಏನಿದು ಘಟನೆ?
ಇನ್ನು ಮ್ಯಾಸಚೂಸೆಟ್ಸ್‌ನ ಕೋಲ್ಡ್‌ಪ್ಲೇ ಸಂಗೀತ ಸಮಾರಂಭದಲ್ಲಿ ಸಹೋದ್ಯೋಗಿ ಜೊತೆ ಸರಸದಲ್ಲಿ ತೊಡಗಿದ್ದ ವೇಳೆ ಕ್ಯಾಮರಾ ಕಣ್ಣಿಗೆ ಕಣ್ಣಿಗೆ ಸಿಕ್ಕಿಬಿದ್ದರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅಮೆರಿಕದ ಟೆಕ್ ಕಂಪನಿ ಅಸ್ಟ್ರೊನೊಮರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಂಡಿ ಬೈರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಘಟನೆಯು ಜಾಗತಿಕವಾಗಿ ಸುದ್ದಿಯಾಗಿತ್ತು. ಜೊತೆಗೆ ವ್ಯಾಪಕ ಟೀಕೆಗೂ ಗುರಿಯಾಗಿತ್ತು.
ಈ ಘಟನೆ ನಡೆಯುವ ಒಂದು ದಿನದ ಮೊದಲು, ಕಂಪನಿ ಬೈರನ್‌ರನ್ನು ರಜೆಯ ಮೇಲೆ ಕಳುಹಿಸಿತ್ತು. ಅಮೆರಿಕ ಟೆಕ್ ಕಂಪನಿಯ ನಿರ್ದೇಶಕರ ಮಂಡಳಿಯು ಬೈರನ್ ಮತ್ತು ಹೆಚ್‌ಆರ್ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬೋಟ್ ನಡುವಿನ ಆರೋಪಿತ ಸಂಬಂಧದ ಬಗ್ಗೆ ಔಪಚಾರಿಕ ತನಿಖೆಯನ್ನು ಪ್ರಾರಂಭಿಸಿತ್ತು. ವೀಡಿಯೊದಲ್ಲಿರುವ ಮಹಿಳೆ ಮಾನವ ಸಂಪನ್ಮೂಲದ ಉಪಾಧ್ಯಕ್ಷೆ ಅಲಿಸಾ ಸ್ಟಾಡ್ಡಾರ್ಡ್ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆಂಡಿ ಬೈರನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.