Andy Byron: ಕೋಲ್ಡ್ ಪ್ಲೇ ರೊಮ್ಯಾನ್ಸ್; CEO ಆ್ಯಂಡಿ ಬೈರೋನ್ ಬಳಿಕ HR ರಾಜಿನಾಮೆ
ಅಮೆರಿಕಾದಲ್ಲಿ ಕೋಲ್ಡ್ ಪ್ಲೇ ಮ್ಯೂಸಿಕ್ ಕನ್ಸರ್ಟ್ ವೇಳೆ ಆಸ್ಟ್ರೋನೋಮರ್ ಕಂಪನಿಯ ಸಿಇಓ ಆ್ಯಂಡಿ ಬೈರೋನ್ ಹಾಗೂ ಕಂಪನಿಯ ಲೇಡಿ ಹೆಚ್.ಆರ್. ಕ್ರಿಸ್ಟೆನ್ ಕಬೋಟ್ ಇಬ್ಬರೂ ತಬ್ಬಿಕೊಂಡಿದ್ದು ಇಂಟರ್ನೆಟ್ನಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈ ಘಟನೆ ನಂತರ ಇಒ ಆಂಡಿ ರಾಜೀನಾಮೆ ನೀಡಿದ್ದರು. ಇದೀಗ ಹೆಚ್ಆರ್ ಮ್ಯಾನೇಜರ್ ಕ್ರಿಸ್ಟಿನ್ ಕ್ಯಾಬಟ್ ರಾಜೀನಾಮೆ ನೀಡಿದ್ದಾರೆ.


ವಾಷಿಂಗ್ಟನ್: ಅಮೆರಿಕದ ಟೆಕ್ ಕಂಪನಿ ಆಸ್ಟ್ರೊನಾಮರ್‌ನ (Astronomer) ಹೆಚ್‌ಆರ್ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬೊಟ್ (Kristin Cabot,), ಕೋಲ್ಡ್‌ಪ್ಲೇ (Coldplay) ಕಾನ್ಸರ್ಟ್‌ನ ‘ಕಿಸ್ ಕ್ಯಾಮ್’ನಲ್ಲಿ ಕಂಪನಿಯ ಮಾಜಿ CEO ಆಂಡಿ ಬೈರನ್ (Andy Byron) ಜೊತೆಗೆ ಕಾಣಿಸಿಕೊಂಡ ಬಳಿಕ ರಾಜೀನಾಮೆ ನೀಡಿದ್ದಾರೆ ಎಂದು BBCಗೆ ಕಂಪನಿ ತಿಳಿಸಿದೆ. ಜುಲೈ 16ರಂದು ಮ್ಯಾಸಚೂಸೆಟ್ಸ್‌ನ ಬೋಸ್ಟನ್ ಸಮೀಪದ ಕಾನ್ಸರ್ಟ್‌ನಲ್ಲಿ ಈ ಘಟನೆ ಸಂಭವಿಸಿತ್ತು.
ಕಾನ್ಸರ್ಟ್‌ನ ಜಂಬೋ ಸ್ಕ್ರೀನ್‌ನಲ್ಲಿ ಕ್ಯಾಬೊಟ್ ಮತ್ತು ಬೈರನ್ ಅಪ್ಪಿಕೊಂಡು ಸಂಗೀತಕ್ಕೆ ತೂಗಾಡುತ್ತಿರುವ ದೃಶ್ಯ ಕಾಣಿಸಿತ್ತು, ಆದರೆ ಕೆಲವೇ ಕ್ಷಣಗಳಲ್ಲಿ ಇಬ್ಬರೂ ತಲೆತಗ್ಗಿಸಿ ಮರೆಯಾದರು. ಇದನ್ನು ಗಮನಿಸಿದ ಕೋಲ್ಡ್‌ಪ್ಲೇ ಗಾಯಕ ಕ್ರಿಸ್ ಮಾರ್ಟಿನ್, “ಇವರು ಅಕ್ರಮ ಸಂಬಂಧದಲ್ಲಿರಬಹುದು” ಎಂದು ವಿನೋದವಾದಿಯಾಗಿ ಹೇಳಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ವೀಕ್ಷಣೆ ಗಳಿಸಿತ್ತು.
ಈ ಘಟನೆಯು ಊಹಾಪೋಹಗಳಿಗೆ ಕಾರಣವಾದಾಗ, ಆಸ್ಟ್ರೊನಾಮರ್ ಆಂತರಿಕ ತನಿಖೆ ಘೋಷಿಸಿತು ಮತ್ತು CEO ಆಂಡಿ ಬೈರನ್‌ರನ್ನು ರಜೆ ಮೇಲೆ ಕಳುಹಿಸಿತು. ಜುಲೈ 20ರಂದು, ಬೈರನ್ ರಾಜೀನಾಮೆ ಸಲ್ಲಿಸಿದ್ದು, ಕಂಪನಿಯ ನಿರ್ದೇಶಕರ ಮಂಡಳಿಯು ಅದನ್ನು ಸ್ವೀಕರಿಸಿತು. ಸಹ-ಸಂಸ್ಥಾಪಕ ಮತ್ತು ಮುಖ್ಯ ಉತ್ಪನ್ನ ಅಧಿಕಾರಿ ಪೀಟ್ ಡಿಜಾಯ್ ಅವರನ್ನು ತಾತ್ಕಾಲಿಕ CEO ಆಗಿ ನೇಮಿಸಲಾಗಿದ್ದು, ಹೊಸ CEOಗಾಗಿ ಹುಡುಕಾಟ ನಡೆಯುತ್ತಿದೆ.
ಕ್ರಿಸ್ಟಿನ್ ಕ್ಯಾಬೊಟ್ ಕಂಪನಿಯಿಂದ ಔಪಚಾರಿಕವಾಗಿ ಬೇರ್ಪಟ್ಟಿರುವುದನ್ನು ಆಸ್ಟ್ರೊನಾಮರ್ ಅಥವಾ ಕ್ಯಾಬೊಟ್ ದೃಢಪಡಿಸಿಲ್ಲವಾದರೂ, ಕಂಪನಿಯ ಹೇಳಿಕೆ ರಾಜೀನಾಮೆಯನ್ನು ಖಚಿತಪಡಿಸಿದೆ. ಡೇಟಾ, ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಆಸ್ಟ್ರೊನಾಮರ್, “ಈ ಘಟನೆಯಿಂದ ಕಂಪನಿಯ ಗಮನ ಒಂದೇ ರಾತ್ರಿಯಲ್ಲಿ ಬದಲಾಯಿತಾದರೂ, ನಮ್ಮ ಉತ್ಪನ್ನ ಮತ್ತು ಗ್ರಾಹಕರಿಗಾಗಿ ಮಾಡುವ ಕೆಲಸದಲ್ಲಿ ಯಾವುದೇ ಬದಲಾವಣೆಯಿಲ್ಲ” ಎಂದಿದೆ.
ಈ ಸುದ್ದಿಯನ್ನೂ ಓದಿ: Viral Video: ಕೋಲ್ಡ್‌ಪ್ಲೇ ಕಾರ್ಯಕ್ರಮದಲ್ಲಿ ಖ್ಯಾತ ಕಂಪನಿಯ CEO ಮತ್ತು HR ಲವ್ವಿ-ಡವ್ವಿ ಬಟಾ ಬಯಲು- ವಿಡಿಯೊ ಫುಲ್ ವೈರಲ್
“ನಾವು ಗ್ರಾಹಕರ AI ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸಹಾಯ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಕಂಪನಿಯ ಹೇಳಿಕೆ ತಿಳಿಸಿದೆ. ಈ ಘಟನೆಯು ಕಾರ್ಪೊರೇಟ್ ಆಡಳಿತದಲ್ಲಿ ವೈಯಕ್ತಿಕ ನಡವಳಿಕೆಯ ಪರಿಣಾಮದ ಬಗ್ಗೆ ಚರ್ಚೆಗೆ ದಾರಿಮಾಡಿಕೊಟ್ಟಿದೆ